ಬೆಂಗಳೂರು: ಭಾರಿ ಪ್ರಮಾಣದಲ್ಲಿ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಈಗ ವಿಧಿಸಲಾಗಿರುವ ಕಠಿಣ ನಿಯಮಗಳನ್ನು ಮುಂದುವರಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಇದಕ್ಕಾಗಿ ಸುಮಾರು 20 ಪುಟಗಳ ಕಾರ್ಯಯೋಜನೆಯನ್ನು ಆರೋಗ್ಯ ಸಚಿವಾಲಯ ರೂಪಿಸಿದೆ. ಇದರ ಪ್ರಕಾರ ಸೋಂಕು ಹೆಚ್ಚಿರುವ ಪ್ರದೇಶವನ್ನು ಬಫರ್‌ಜೋನ್ ಆಗಿ ಗುರುತಿಸಲಾಗುವುದು. ಇಂತಹ ಪ್ರದೇಶಕ್ಕೆ ಸಂಪೂರ್ಣ ದಿಗ್ಬಂಧನ ಮುಂದುವರಿಯಲಿದೆ. ತರ್ತು ಅಗತ್ಯ ಹೊರತುಪಡಿಸಿ ಜನ, ವಾಹನಗಳ ಓಡಾಟ, ಶಾಲಾ-ಕಾಲೇಜು ಮತ್ತು ಕಚೇರಿ, ವ್ಯಾಪಾರ-ವಹಿವಾಟು ಎಲ್ಲವೂ ಬಂದ್ ಆಗಲಿವೆ. 4 ವಾರ ಸತತವಾಗಿ ಒಂದು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗದಿದ್ದರೆ ಮಾತ್ರ ನಿರ್ಬಂಧ ಸಡಿಲಿಸಲಾಗುವುದು. ಅಲ್ಪ ರೋಗ ಲಕ್ಷಣ ಉಳ್ಳವರನ್ನು ಸ್ಟೇಡಿಯಂಗಳಲ್ಲಿ, ಹೆಚ್ಚು ಲಕ್ಷಣ ಉಳ್ಳವರನ್ನು ಆಸ್ಪತ್ರೆಗಳಲ್ಲಿ ಇರಿಸಿ ಚಿಕಿತ್ಸೆ ನೀಡಲು ಯೋಜಿಸಲಾಗಿದೆ. ಹಂತ ಹಂತವಾಗಿ ನಿರ್ಬಂಧ ಸಡಿಲಿಸುವ ಯೋಜನೆ - ಮಾಲ್, ಸಿನಿಮಾ ಮಂದಿರ ನಿರ್ಬಂಧ ಮುಂದುವರಿಕೆ - ರಾಜ್ಯ ಮಟ್ಟದಲ್ಲಿ ಹಾಟ್‌ಸ್ಪಾಟ್ ಗುರುತಿಸುವಿಕೆ - ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್‌ಡೌನ್ - ಸಮೂಹ ಸಾರಿಗೆ ವ್ಯವಸ್ಥೆ ಸ್ಥಗಿತ - ನಗರದಲ್ಲಿ ದೈಹಿಕ ಅಂತರ ಕಾಯ್ದುಕೊಳ್ಳುವ ಶೇ.25ರಷ್ಟು ಹೊಟೇಲ್ ಓಪನ್ - ಕಾರ್ಖಾನೆಗಳಲ್ಲಿ 25% ಉದ್ಯೋಗಿಗಳನ್ನು ದಿನಬಿಟ್ಟು ದಿನ ಮಾತ್ರ ಬಳಕೆ - ನೌಕರರ ಓಡಾಟಕ್ಕೆ ಕಂಪನಿಗಳೇ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಳ್ಳುವುದು - ಅಗತ್ಯ ವಸ್ತುಗಳ ಪಟ್ಟಿಯನ್ನು ಸರಳೀಕರಿಸುವುದು - ಶಿಕ್ಷಣ ಚಟುವಟಿಕೆಗಳನ್ನು ಸದ್ಯಕ್ಕೆ ಮುಂದೂಡುವುದು - ಅಂತರ್ ಜಿಲ್ಲಾ ಸಂಪರ್ಕಕ್ಕೆ ಕಡಿವಾಣ ಹಾಕುವುದು ಅಂಕಿಅಂಶದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ: 4,182 ಸತ್ತವರ ಸಂಖ್ಯೆ: 118 ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ: 151 ಸತ್ತವರ ಸಂಖ್ಯೆ: 04 ವಿಶ್ವದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ: 12,36,296 ಸತ್ತವರ ಸಂಖ್ಯೆ: 67,231
from India & World News in Kannada | VK Polls https://ift.tt/3dWngu3