ಚೀನಾದ ನಲ್ಲಿ ಮೊದಲು ಪತ್ತೆಯಾಗಿದ್ದ ವಿಶ್ವಾದ್ಯಂತ 50,000ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದೆ. ಭಾರತ ಸೇರಿ ಒಟ್ಟು 195ರಾಷ್ಟ್ರಗಳಿಗೂ ಹೆಚ್ಚು ಕಡೆ ವೈರಸ್ ಹರಡಿದೆ. ಭಾರತದಲ್ಲಿ 2500ಕ್ಕೂ ಹೆಚ್ಚು ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಕರ್ನಾಟಕದಲ್ಲಿ 120ಕ್ಕೂ ಹೆಚ್ಚು ಪ್ರಕರಣ ಬೆಳಕಿಗೆ ಬಂದಿದೆ. ಎಪ್ರಿಲ್ 6ರ ಕ್ಷಣ ಕ್ಷಣದ ಮಾಹಿತಿ:- -ಕರ್ನಾಟಕದಲ್ಲಿ ಒಟ್ಟು 151 ಪ್ರಕರಣಗಳು ಬೆಳಕಿಗೆ ಬಂದಿದೆ. 11 ಮಂದಿ ಗುಣಮುಖರಾಗಿದ್ದು, 4 ಸಾವು ದಾಖಲಾಗಿದೆ. ಸದ್ಯ 136 ಪ್ರಕರಣಗಳು ಚಾಲ್ತಿಯಲ್ಲಿದೆ. -ಕೋವಿಡ್ -19 ಮಹಾಮಾರಿಗೆ ಭಾರತದಲ್ಲಿ ಈವರೆಗೆ 118 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ದೇಶದಲ್ಲಿ 4289 ಪ್ರಕರಣ ಬೆಳಕಿಗೆ ಬಂದಿದ್ದು, 328 ಮಂದಿ ಗುಣಮುಖರಾಗಿದ್ದಾರೆ. ಸದ್ಯ 3843 ಸೋಂಕಿತ ಪ್ರಕರಣಗಳು ಚಾಲ್ತಿಯಲ್ಲಿದೆ. -ಎರಡನೇ ಸ್ಥಾನದಲ್ಲಿ ಸ್ಪೇನ್ ಇದ್ದು 1 ಲಕ್ಷದ 31 ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿದೆ. 12,600ಕ್ಕೂ ಹೆಚ್ಚು ಮಂದಿ ಕೊರೊನಾಗೆ ಇಲ್ಲಿ ಸಾವನ್ನಪ್ಪಿದ್ದಾರೆ. ವಿಶೇವೆಂದರೆ ಸೋಂಕಿತ ಪ್ರಕರಣಗಳ ಸಂಖ್ಯೆ ಇಟಲಿಗಿಂತ ಹೆಚ್ಚಿದೆ. -ಇಟಲಿಯಲ್ಲಿ ಅತೀ ಹೆಚ್ಚು ಮಂದಿ ಈ ಮಾರಕ ವೈರಸ್ ಗೆ ಸಾವನ್ನಪ್ಪಿದ್ದು, ಮೃತಪಟ್ಟವರ ಚಾರ್ಟ್ ನಲ್ಲಿ ಮೊದಲ ಸ್ಥಾನದಲ್ಲಿದೆ. ಇಲ್ಲಿ 1 ಲಕ್ಷದ 28ಸಾವಿರಕ್ಕೂ ಹೆಚ್ಚು ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. 15,900ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿ ತಿಳಿಸಿದೆ. -ವಿಶ್ವದಾದ್ಯಂತ 69 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. 12 ಲಕ್ಷದ 72 ಸಾವಿರಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ.
from India & World News in Kannada | VK Polls https://ift.tt/3aMmGNl