ಬೃಹತ್ ಅಡುಗೆ ಮನೆಯಾಯ್ತು ಅಯೋಧ್ಯೆ..! ನಿರ್ಗತಿಕರ ಅನ್ನದ ಬಟ್ಟಲಾಯ್ತು ರಾಮನ ನಾಡು..!

(ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ ಈಗ ರಾಮಮಂದಿರ ನಿರ್ಮಾಣ ಕಾರ್ಯ ಒಂದೆಡೆಯಾದ್ರೆ, ಮತ್ತೊಂದೆಡೆ ನಿರ್ಗತಿಕರಿಗಾಗಿ ತಯಾರಿ ಕಾರ್ಯವೂ ಭರದಿಂದ ಸಾಗಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಬೃಹತ್‌ ಸಮುದಾಯ ಅಡುಗೆ ಮನೆಯನ್ನೇ ನಿರ್ಮಿಸಲಾಗಿದೆ. ಲಾಕ್‌ಡೌನ್‌ನಿಂದಾಗಿ ಬಡವರು, ನಿರ್ಗತಿಕರು ಆಹಾರ ಇಲ್ಲದೆ ಪರದಾಡುತ್ತಿದ್ಧಾರೆ. ಹೀಗಾಗಿ, ಅವರಿಗೆ ಏಪ್ರಿಲ್ 14ರವರೆಗೂ ಉಚಿತವಾಗಿ ಆಹಾರ ಪೊಟ್ಟಣಗಳನ್ನು ನೀಡಲು ನಿರ್ಧರಿಸಿದ್ದೇವೆ ಎಂದು ಅಯೋಧ್ಯೆಯ ಮೇಯರ್ ಹೃಷಿಕೇಶ್ ಉಪಾಧ್ಯಾಯ ತಿಳಿಸಿದ್ಧಾರೆ. ನಮ್ಮ ನಗರದಲ್ಲಿ ಯಾರೊಬ್ಬರೂ ಹಸಿವಿನಿಂದ ಬಳಲಬಾರದು ಅನ್ನೋದೇ ನಮ್ಮ ಧ್ಯೇಯ ಅಂತಾರೆ ಮೇಯರ್ ಹೃಷಿಕೇಶ್ ಉಪಾಧ್ಯಾಯ. ನಾವು ಏಪ್ರಿಲ್ 14ರವರೆಗೆ ಉಚಿತ ಆಹಾರ ನೀಡೋದಷ್ಟೇ ಅಲ್ಲ, ಮನೆಗಳ, ಚರಂಡಿಗಳ ಸ್ವಚ್ಛತೆ ವಿಚಾರದಲ್ಲೂ ಗಮನ ಹರಿಸುತ್ತಿದ್ದೇವೆ ಎಂದು ಹೇಳಿದ್ಧಾರೆ. ಮಾರ್ಚ್ 24ರಿಂದ ದೇಶಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿದೆ. ಕೊರೊನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ದೇಶಾದ್ಯಂತ ಲಾಕ್‌ಡೌನ್‌ ಘೋಷಿಸಿರುವ ಕಾರಣ, ಎಷ್ಟೋ ಜನರ ಬದುಕು ಅತಂತ್ರವಾಗಿದೆ. ದಿನಗೂಲಿ ನೌಕರರು, ಕೂಲಿ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು ನೆಲೆ ಕಳೆದುಕೊಂಡಿದ್ಧಾರೆ. ಇನ್ನು ಬಡವರು, ನಿರ್ಗತಿಕರು ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದಂತಾಗಿದ್ದಾರೆ. ಹೊಟೇಲ್‌ಗಳೂ ಇಲ್ಲದ ಕಾರಣ, ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಸಾರ್ವಜನಿಕ ವಾಹನಗಳೂ ಇಲ್ಲದ ಕಾರಣ, ಜನರು ತಮ್ಮ ಸ್ವಸ್ಥಾನಕ್ಕೆ ಮರಳಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ, ನೆಲೆ ಇಲ್ಲದ ಜನರಿಗೆ ಆಹಾರ, ವಸತಿ ವ್ಯವಸ್ಥೆ ಮಾಡಲು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಜೊತೆಗೆ ಎನ್‌ಜಿಒಗಳು, ಸ್ವಯಂ ಸೇವಕರು ಕೈಜೋಡಿಸಿದ್ದಾರೆ.


from India & World News in Kannada | VK Polls https://ift.tt/2UxFn1B

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...