ನವದೆಹಲಿ: ಪ್ರಧಾನಿ ಮೋದಿ ಅವರ ಆದೇಶವನ್ನು ಕುಹುಕವಾಡಿ ಉಗಿಸಿಕೊಂಡಿದ್ದ ಪ್ರಧಾನಇ ಇಮ್ರಾನ್ ಖಾನ್, ಕೊರೊನಾ ವೈರಸ್ ವಿರುದ್ಧ ಹೋರಾಟದಲ್ಲೂ ಹಿಂದೂ-ಮುಸ್ಲಿಂ ಎಂಬ ತಮ್ಮ ಮತಾಂಧ ನೀತಿಯನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ. ಪಾಕಿಸ್ತಾನದಲ್ಲಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕೆಲವು ಪ್ರದೇಶಗಳಲ್ಲಿ ಲಾಕ್ಡೌನ್ ಆದೇಶ ಘೋಷಣೆ ಮಾಡಲಾಗಿದೆ. ಅಲ್ಲದೇ ಈ ಪ್ರದೇಶಗಳಿಗೆ ಸರ್ಕಾರವೇ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿದೆ. ಆದರೆ ಇದರಲ್ಲೂ ಹಿಂದೂ-ಮುಸ್ಲಿಂ ಎಂಬ ತನ್ನ ತಾರತಮ್ಯ ನೀತಿಯನ್ನು ಮುಂದುವರೆಸಿರುವ ಪಾಕಿಸ್ತಾನ ಸರ್ಕಾರ, ಹಿಂದೂ ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯದ ಜನರು ವಾಸಿಸುವ ಪ್ರದೇಶಗಳಿಗೆ ರೇಷನ್ ರವಾನಿಸುತ್ತಿಲ್ಲ. ಹಿಂದೂ, ಕ್ರಿಶ್ಚಿಯನ್ ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯದ ಜನರು ವಾಸಿಸುವ ಪ್ರದೇಶಗಳಿಗೆ ರೇಷನ್ ಪೂರೈಸಲು ಸ್ಥಳೀಯ ಆಡಳಿತದ ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಅಲ್ಪಸಂಖ್ಯಾತ ಪ್ರದೇಶಗಳಿಗೆ ರೇಷನ್ ಹಾಘೂ ಇತರ ಅಗತ್ಯ ವಸ್ತುಗಳನ್ನು ರವಾನಿಸಲು ನಿರಾಕರಿಸಿರುವ ಅಧಿಕಾರಿಗಳು, ಕೇವಲ ಮುಸ್ಲಿಂ ಸಮುದಾಯದ ಜನರು ಅಧಿಕವಾಗಿ ನೆಲೆಸಿರುವ ಪ್ರದೇಶಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಮೊದಲಿಗೆ ಎಲ್ಲರಿಗೂ ರೇಷನ್ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸಲಾಗುವುದು ಎಂದು ಭರವಸೆ ನೀಡಿದ್ದ ಸ್ಥಳಿಯ ಆಡಳಿತ, ಇದೀಗ ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರ ಸೌಲಭ್ಯ ಒದಗಿಸಿ ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ಕುರಿತು ಅಲವತ್ತುಕೊಂಡಿರುವ , ಸಂಕಷ್ಟದ ಸಮಯದಲ್ಲೂ ಧರ್ಮ ನೋಡುತ್ತಿರುವ ಸರ್ಕಾರದ ನೀತಿಯಿಂದಾಗಿ ನಾವು ಉಪವಾಸ ಇರಬೇಕಾದ ಪರಿಸ್ಥಿತಿ ಬಂದಿದೆ ಎಂದು ನೋವು ತೋಡಿಕೊಂಡಿದ್ದಾರೆ.
from India & World News in Kannada | VK Polls https://ift.tt/2wSzp2q