ಪ್ರೌಡ್ ಆಫ್ ಯು: ಏರ್ ಇಂಡಿಯಾ ಪೈಲೆಟ್ ಹೊಗಳಿದ ಪಾಕ್ ಏರ್ ಟ್ರಾಫಿಕ್ ಕಂಟ್ರೋಲರ್ ಅಧಿಕಾರಿ!

ನವದೆಹಲಿ: ಸಾಂಪ್ರದಾಯಿಕ ಎದುರಾಳಿಗಳು ಪರಸ್ಪರ ಹೊಗಳಿಕೆಯ ಮಾತುಗಳನ್ನಾಡುವುದು ಅತೀ ವಿರಳ. ಅದರಲ್ಲೂ ಭಾರತ-ಪಾಕಿಸ್ತಾನದಂತ ಸಾರ್ವಕಾಲಿಕ ಎದುರಾಳಿಗಳು ಒಬ್ಬರೊನ್ನೊಬ್ಬರು ಶ್ಲಾಘಿಸುವುದು ಅಪರೂಪದಲ್ಲೇ ಅಪರೂಪ. ಭಾರತವಾದರೂ ಕೆಲವೊಮ್ಮೆ ಪಾಕಿಸ್ತಾನವನ್ನು ಹೊಗಳಿ ತನ್ನ ಮಿತೃತ್ವವನ್ನು ಪ್ರದರ್ಶಿಸುತ್ತದೆ. ಆದರೆ ಮಾತ್ರ ಎಂದಿಗೂ ಭಾರತವನ್ನು ಯಾವ ವಿಷಯಕ್ಕೂ ಮೆಚ್ಚುವುದಿಲ್ಲ. ಆದರೆ ಕೊರೊನಾ ವೈರಸ್ ಘಟನಾವಳಿಗಳು ಇದಕ್ಕೆ ಅಪವಾದ ಎಂಬತ್ತಿದ್ದು, ಕೊರೊನಾ ವೈರಸ್ ಪೀಡಿತ ವಿದೇಶಗಳಿಂದ ಭಾರತೀಯರನ್ನು ಹೊತ್ತು ತಂದ ಕಾರ್ಯವನ್ನು ಖುದ್ದು ಪಾಕ್‌ನ ವಿಮಾನಯಾನ ಸಚಿವಾಲಯದ ಅಧಿಕಾರಗಳೇ ಕೊಂಡಾಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಏರ್ ಇಂಡಿಯಾ ವಕ್ತಾರ, ಪಾಕ್ ವಾಯು ಮಾರ್ಗ ಬಳಿಸಿ ಹಾರಾಟ ನಡೆಸಿದ್ದ ವಿಮಾನಗಳ ಪೈಲೆಟ್‌ಗಳಿಗೆ 'ವಿ ಆರ್ ಪ್ರೌಡ್ ಆಫ್ ಯು'(ನಿಮ್ಮ ಬಗ್ಗೆ ಹೆಮ್ಮೆಯಿದೆ) ಎಂದು ಅಲ್ಲಿನ ಏರ್ ಟ್ರಾಫಿಕ್ ಕಂಟ್ರೋಲ್ ಹೇಳಿದ್ದಾಗಿ ಸ್ಪಷ್ಟಪಡಿಸಿದೆ. ಜರ್ಮನಿಯ ಫ್ರಾಂಕ್‌ಫರ್ಟ್‌ನಲ್ಲಿ ಸಿಲುಕಿದ್ದ ಭಾರತೀಯರನ್ನು ಕರೆತರಲು ಮುಂಬೈನಿಂದ ಪ್ರಯಾಣ ಬೆಳೆಸಿದ್ದ ಏರ್ ಇಂಡಿಯಾ ವಿಮಾನ, ಪಾಕಿಸ್ತಾನದ ವಾಯುಮಾರ್ಗಕ್ಕೆ ಪ್ರವೇಶ ಮಾಡಿದೆ. ಈ ವೇಳೆ ಕರಾಚಿಯ ಅಧಿಕಾರಿ ಏರ್ ಇಂಡಿಯಾ ಪೈಲೆಟ್ ಜೊತೆ ಮಾತನಾಡುತ್ತಾ, ಸಂಕಷ್ಟದ ಈ ಸಮುಯದಲ್ಲೂ ಕರ್ತವ್ಯ ನಿರ್ವಹಿಸುತ್ತಿರುವ ನಿಮ್ಮನ್ನು ಕಂಡರೆ ಹೆಮ್ಮೆ ಅನಿಸುತ್ತದೆ ಎಂದು ಹೇಳಿದ್ದಾರೆ. ಪಾಕ್ ಏರ್ ಟ್ರಾಫಿಕ್ ಕಂಟ್ರೋಲರ್ ಅಧಿಕಾರಿಯ ಈ ಮೆಚ್ಚುಗೆಯ ಮಾತುಗಳನ್ನು ಕೇಳಿ ಸಂತಸಗೊಂಡ ಏರ್ ಇಂಡಿಯಾ ಪೈಲೆಟ್, ಮರಳಿ ಧನವ್ಯಾದ ಸಲ್ಲಿಸಿ ಫ್ರಾಂಕ್‌ಫರ್ಟ್‌ಗೆ ಪ್ರಯಾಣ ಬೆಳೆಸಿದ್ದಾರೆ. ಒಟ್ಟಿನಲ್ಲಿ ಸಂಕಷ್ಟದ ಘಳಿಗೆಯಲ್ಲಾದರೂ ಭಾರತ-ಪಾಕ್ ನಡುವೆ ಸೌಹಾರ್ದಯುತ ಹಾಗೂ ಪರಸ್ಪರ ಗೌರವ ನೀಡುವ ಘಟನೆಗಳು ಸಂಭವಿಸಿರುವುದು ಉತ್ತಮ ಬೆಳವಣಿಗೆ ಎನ್ನಬಹುದು.


from India & World News in Kannada | VK Polls https://ift.tt/39NGoXD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...