'ಮುಸ್ಲಿಮರಿಗೆ ಕೊರೊನಾ ಬರಲ್ಲ' ಎಂದಿದ್ದ ತಬ್ಲಿಘಿ ಜಮಾತ್‌ ಮೌಲಾನ ಸಾದ್‌ ಕಂಧಲ್ವಿ ಉಲ್ಟಾ!

ಹೊಸದಿಲ್ಲಿ: ಸಮಾವೇಶ ಸಂಘಟಿಸುವ ಮುನ್ನ, ''ಮುಸ್ಲಿಮರು ಸಾಯುವುದೇ ಆದರೆ ಮಸೀದಿಯೇ ಅತ್ಯುತ್ತಮ ಸ್ಥಳ. ಆದರೆ ನನ್ನ ಪಂಥದ ಅನುಯಾಯಿಗಳಿಗೆ ಸೋಂಕು ಬಾಧಿಸುವುದಿಲ್ಲ,'' ಎಂದಿದ್ದ ಮೌಲಾನ ಸಾದ್‌ ಕಂಧಲ್ವಿ ಈಗ ಬಂಧನ ಭೀತಿಯಿಂದ ''ನಾನು ಸ್ವಯಂ ಕ್ವಾರಂಟೈನ್‌ ಆಗಿದ್ದೇನೆ. ನೀವೆಲ್ಲರೂ ಸರಕಾರದ ಆದೇಶ ಪಾಲಿಸಿ. ನಿಮ್ಮ ನಿಮ್ಮ ಮನೆಯಲ್ಲಿ ದಿಗ್ಬಂಧನಕ್ಕೆ ಒಳಗಾಗಿ,'' ಎಂದಿದ್ದಾನೆ. ಸಧ್ಯ ತಲೆ ಮರೆಸಿಕೊಂಡಿರುವ ಮೌಲಾನಾ ಸಾದ್‌ಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಪ್ರವಾಸಿ ವೀಸಾದಡಿ ಬಂದು, ತಬ್ಲಿಘಿ ಜಮಾತ್‌ನ ಧಾರ್ಮಿಕ ಸಮಾವೇಶದಲ್ಲಿ ಪಾಲ್ಗೊಂಡು ನಿಯಮ ಉಲ್ಲಂಘಿಸಿದ 960 ವಿದೇಶಿಯರ ವೀಸಾವನ್ನು ಕೇಂದ್ರ ಗೃಹ ಸಚಿವಾಲಯ ರದ್ದುಪಡಿಸಿ, ಅವರನ್ನು ಕಪ್ಪುಪಟ್ಟಿಗೆ ಸೇರಿಸಿದೆ. ಕೆಲವು ರಾಜ್ಯಗಳಿಗೆ ಚುದುರಿ ಹೋಗಿರುವ ಇವರ ವಿರುದ್ಧ ರಾಜ್ಯ ಸರಕಾರಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದೆ. ಇದೇ ವೇಳೆ ಲಾಕ್‌ಡೌನ್‌ ಆದೇಶ ಉಲ್ಲಂಘಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಕೇಂದ್ರ ಸೂಚನೆ ನೀಡಿದೆ. ಗುಜರಾತಿನ ಸೂರತ್‌ನಲ್ಲೂ ಕಳೆದ ತಿಂಗಳು ಇಂತಹದ್ದೊಂದು ಸಮಾವೇಶ ನಡೆದಿತ್ತು. ಈ ಕಾರ‍್ಯಕ್ರಮದಲ್ಲಿ ರಾಜ್ಯದಿಂದ 20ಕ್ಕೂ ಹೆಚ್ಚು ಪಾಲ್ಗೊಂಡಿದ್ದರು ಹೇಳಲಾಗುತ್ತಿದೆ. ಇಲ್ಲಿಂದಲೂ ಹಲವರಿಗೆ ಸೋಂಕು ಹರಡಿರುವ ಸಾಧ್ಯತೆಗಳಿದ್ದು, ಪಾಲ್ಗೊಂಡಿದ್ದವರ ಪತ್ತೆ ಕಾರ್ಯ ಮುಂದುವರಿದಿದೆ. ತಬ್ಲಿಘಿ ಜಮಾತ್‌ ಸಮಾವೇಶದಲ್ಲಿ ಪಾಲ್ಗೊಂಡಿದ್ದವರಿಗೆ ತೀವ್ರ ಶೋಧ ನಡೆಸುತ್ತಿರುವ ರಾಜ್ಯ ಸರಕಾರಗಳು ಇದುವರೆಗೂ 9000 ಸಾವಿರಕ್ಕೂ ಹೆಚ್ಚು ಜನರನ್ನು ಗುರುತಿಸಿವೆ. ಏಪ್ರಿಲ್‌ 1ರವರೆಗಿನ ಕಾರ್ಯಾಚರಣೆಯಲ್ಲಿ ದಿಲ್ಲಿ ಒಂದರಲ್ಲಿಯೇ 1,804 ತಬ್ಲಿಘಿ ಸದಸ್ಯರನ್ನು ಗುರುತಿಸಲಾಗಿದೆ. ಈ ಪೈಕಿ 1,051 ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿದೆ. 23 ರಾಜ್ಯಗಳು ಮತ್ತು 4 ಕೇಂದ್ರಾಡಳಿತ ಪ್ರದೇಶಗಳ ಅಧಿಕಾರಿಗಳ ನೆರವಿನ ಮೂಲಕ ಸಾವಿರಾರು ಜನರನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಮಾಹಿತಿ ನೀಡಿದೆ. ದಿಲ್ಲಿಯಲ್ಲಿ ಇಬ್ಬರು ಮೃತಪಟ್ಟಿರುವುದು ಸಹ ಸಮಾವೇಶದಲ್ಲಿ ಭಾಗಿಯಾಗಿದ್ದವರೇ ಆಗಿದೆ. ತಬ್ಲಿಘಿಯ ಸ್ಥಳೀಯ ಸದಸ್ಯರು ಹಾಗೂ ಅವರ ಜತೆ ಸಂಪರ್ಕ ಹೊಂದಿದ 7,688 ಮಂದಿಯನ್ನು ಗುರುತಿಸಲಾಗಿದೆ. ಇವರೆಲ್ಲರನ್ನು ಕ್ವಾರಂಟೈನ್‌ ಮಾಡಿ ಪರೀಕ್ಷೆಗೆ ಒಳಪಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ಪ್ರಧಾನಿ ಕಾರ್ಯಾಲಯ ಮಾಹಿತಿ ನೀಡಿದೆ.


from India & World News in Kannada | VK Polls https://ift.tt/2R5rFRF

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...