ಇಂದಿನ ಚುಟುಕು ಸುದ್ದಿಗಳು: ತುಮಕೂರಿನಲ್ಲಿ ರೈತನ ಮೇಲೆ ಸುಳ್ಳು ಕೇಸ್‌ ದಾಖಲು

ತುಮಕೂರು: ಸುಳ್ಳು ಹೇಳಿ ರೈತನ ಮೇಲೆ ಕೇಸ್‌ ದಾಖಲು, ಪೊಲೀಸರ ಬಳಿ ಸಾಕ್ಷಿಯೇ ಇಲ್ಲ! ತುಮಕೂರು: ತುರುವೇಕೆರೆ ಪಟ್ಟಣದಲ್ಲಿ ರೈತ ಮಲ್ಲಿಕಾರ್ಜುನ ಅವರ ಮೇಲೆ ಕಂದಾಯ ಇಲಾಖೆ, ಹೋಂ ಗಾರ್ಡ್‌ ಹಾಗೂ ಪೊಲೀಸ್‌ ಇಲಾಖೆ ನಡೆಸಿರುವ ದೌರ್ಜನ್ಯ ಪ್ರಕರಣದಲ್ಲಿ ಪೊಲೀಸರು ಪ್ರಾಥಮಿಕ ಹಂತದಲ್ಲೇ ಎಡವಿರುವುದು ಕಂಡು ಬಂದಿದೆ. ಮಂಡ್ಯ ಜಿಲ್ಲೆಯಲ್ಲಿ ಕೊರೊನಾ ಭೀತಿ: ಮಳವಳ್ಳಿ, ನಾಗಮಂಗಲ ಕಂಟೈನ್ಮೆಂಟ್‌ ಝೋನ್‌ ? ಮಂಡ್ಯ: ಮಳವಳ್ಳಿ ಮತ್ತು ನಾಗಮಂಗಲಕ್ಕೆ ಭೇಟಿ ನೀಡಿ ಮೈಸೂರಿಗೆ ತೆರಳಿದ್ದ ದಿಲ್ಲಿಯ ಐವರು ವ್ಯಕ್ತಿಗಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಎರಡು ತಾಲೂಕುಗಳನ್ನು ಕಂಟೈನ್ಮೆಂಟ್‌ ಏರಿಯಾ ಎಂದು ಘೋಷಿಸಲು ಮಂಡ್ಯ ಜಿಲ್ಲಾಡಳಿತ ಚಿಂತನೆ ನಡೆಸಿದೆ. ಕಾರ್ಕಳ: ಬಾಡಿಗೆದಾರರನ್ನು ಹೊರದಬ್ಬಿದ ಮನೆ ಮಾಲೀಕ! ಕಾರ್ಕಳ: ಲಾಕ್‌ಡೌನ್‌ ಅವಧಿಯಲ್ಲಿ ಮನೆ ಬಾಡಿಗೆ ಕೇಳುವಂತಿಲ್ಲ,ಬಾಡಿಗೆ ಕಟ್ಟುವಲ್ಲಿ ವಿಫಲರಾದರೆ ಮನೆ ಖಾಲಿ ಮಾಡುವಂತೆ ಹೇಳುವಂತಿಲ್ಲ ಎಂಬ ಸರಕಾರಿ ಆದೇಶವನ್ನು ಮೀರಿ, ಬಾಡಿಗೆದಾರರನ್ನು ಮನೆಯಿಂದ ಹೊರದಬ್ಬಿದ ಘಟನೆಯೊಂದು ವೆಂಕಟರಮಣ ದೇವಳದ ಕೆರೆಯ ಸಮೀಪ ನಡೆದಿದೆ.


from India & World News in Kannada | VK Polls https://ift.tt/3bRn9xR

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...