ಕೊರೊನಾ ಎಫೆಕ್ಟ್‌: ಅಪಾರ್ಟ್ಮೆಂಟ್‌ಗಳಿಗೆ ಹಣ್ಣು, ತರಕಾರಿ ಸರಬರಾಜು ಪ್ರಕ್ರಿಯೆಗೆ ಚಾಲನೆ

ಬೆಂಗಳೂರು: ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿದೆ. ಸಂಪೂರ್ಣ ಲಾಕ್‌ಡೌನ್‌ನಿಂದಾಗಿ ಜನರಿಗೆ ಅಗತ್ಯ ಹಣ್ಣು ತರಕಾರಿಗಳನ್ನು ಪಡೆದುಕೊಳ್ಳಲು ಸಮಸ್ಯೆಯಾಗುತ್ತಿದೆ. ಈ ನಿಟ್ಟಿನಲ್ಲಿ ಅಪಾರ್ಟ್ಮೆಂಟ್‌ಗಳಿಗೆ ಹಣ್ಣು ತರಕಾರಿ ಸರಬರಾಜು ಪ್ರಕ್ರಿಯೆಗೆ ಭಾನುವಾರ ತೋಟಗಾರಿಕಾ ಸಚಿವ ಡಾ. ನಾರಾಯಣ ಗೌಡ ಚಾಲನೆ ನೀಡಿದರು. ಲಾಲ್ ಬಾಗ್‌ನ ಹಾಪ್ ಕಾಮ್ಸ್ ನ ಮುಖ್ಯ ಕಚೇರಿಯಲ್ಲಿ ಸಚಿವರು ಈ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಲಾಕ್ ಡೌನ್ ನಿಂದ ರೈತ ಉತ್ಪನ್ನಗಳಿಗೆ ಬೆಲೆ ಸಿಗದಂತಾಗಿತ್ತು. ಮಾರಾಟವಾಗದೆ ಬೆಳೆಯನ್ನ ನಾಶಮಾಡುವ ಸ್ಥಿತಿ ನಿರ್ಮಾಣವಾಗಿತ್ತು. ಈ ಹಿನ್ನೆಲೆಯಲ್ಲಿ ರೈತರಿಗೆ ಅನುಕೂಲವಾಗುವಂತ ನಿರ್ಧಾರ ತೆಗೆದುಕೊಳ್ಳಲು ಸಚಿವ ಡಾ. ನಾರಾಯಣಗೌಡ ಅವರು ಬಿಬಿಎಂಪಿಯಲ್ಲಿ ಸಭೆ ನಡೆಸಿದ್ದರು. ಇದರ ಮುಂದುವರಿದ ಭಾಗವಾಗಿ ಹಾಪ್ ಕಾಮ್ಸ್ ಮೂಲಕ ಬೆಂಗಳೂರಿನಲ್ಲಿರುವ ಸುಮಾರು 720 ಅಪಾರ್ಟ್ಮೆಂಟ್ ಗಳಿಗೆ ಅಂದರೆ ಸುಮಾರು 1.30.ಲಕ್ಷ ಮನೆಗಳಿಗೆ ರೈತ ಉತ್ಪನ್ನಗಳನ್ನು ನೇರವಾಗಿ ಸರಬರಾಜು ಮಾಡುವ ಕಾರ್ಯ ಭಾನುವಾರದಿಂದ ಆರಂಭವಾಗಿದೆ. ಇದಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದ ಸಚಿವರು ಜನರಿಂದ ನೇರವಾಗಿ ಗ್ರಾಹಕರಿಗೆ ಹಣ್ಣು, ತರಕಾರಿ ತಲುಪಿಸುವ ಕಾರ್ಯ ಇದು. ಇದರಿಂದ ರೈತರಿಗೂ ಅನುಕೂಲ, ಉತ್ತಮ ಬೆಲೆಯೂ ಅವರಿಗೆ ಸಿಗಲಿದೆ. ಅಲ್ಲದೆ ಗ್ರಾಹಕರಿಗೂ ಕಡಿಮೆ ದರದಲ್ಲಿ ಹಣ್ಣು ತರಕಾರಿ ಸಿಗುವಂತಾಗಲಿದೆ. ರೈತೋತ್ಪನ್ನಗಳಿಗೆ ಉತ್ತಮ ಬೆಲೆ ಸಿಗುವ ನಿಟ್ಟಿನಲ್ಲಿ ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ. ಟೊಮೆಟೊ ಕೂಡ ಸಂಸ್ಕರಣಾ ಘಟಕಕ್ಕೆ ಸಾಗಿಸುವ ಕಾರ್ಯ ಆರಂಭವಾಗುತ್ತಿದೆ ಎಂದು ಸಚಿವ ಡಾ. ನಾರಾಯಣ ಗೌಡ ಈ ಸಂದರ್ಭದಲ್ಲಿ ಹೇಳಿದ್ದಾರೆ.


from India & World News in Kannada | VK Polls https://ift.tt/2X5pTUm

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...