ಕೊರೊನಾ ಲೈವ್ ಅಪ್ಡೇಟ್ಸ್: ವಿಶ್ವದಾದ್ಯಂತ ಸೋಂಕಿತ ಪ್ರಕರಣ 10 ಲಕ್ಷ ಸಮೀಪಕ್ಕೆ!

ಚೀನಾದ ನಲ್ಲಿ ಮೊದಲು ಪತ್ತೆಯಾಗಿದ್ದ ವಿಶ್ವಾದ್ಯಂತ 47,000ಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದಿದೆ. ಭಾರತ ಸೇರಿ ಒಟ್ಟು 195ರಾಷ್ಟ್ರಗಳಿಗೂ ಹೆಚ್ಚು ಕಡೆ ವೈರಸ್ ಹರಡಿದೆ. ಭಾರತದಲ್ಲಿ 2000ಕ್ಕೂ ಹೆಚ್ಚು ಮಂದಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಕರ್ನಾಟಕದಲ್ಲಿ 100ಕ್ಕೂ ಹೆಚ್ಚು ಪ್ರಕರಣ ಬೆಳಕಿಗೆ ಬಂದಿದೆ. ಎಪ್ರಿಲ್ 2ರ ಕ್ಷಣ ಕ್ಷಣದ ಮಾಹಿತಿ:- -ಕೊರೊನಾ ನಿಯಂತ್ರಣದ ಸಲುವಾಗಿ ಆರೋಗ್ಯ ಪರಿಸ್ಥಿತಿಯ ಮಾಹಿತಿಯನ್ನು ಸಂಗ್ರಹಿಸಲು ಹೋಗಿದ್ದ ಆಶಾ ಕಾರ್ಯಕರ್ತೆಯರು ಹಾಗೂ ಶುಶ್ರೂಷಕಿಯರ ಮೇಲೆ ಬೆಂಗಳೂರಿನಲ್ಲಿ ದುಷ್ಕರ್ಮಿಗಳ ಗುಂಪು ಹಲ್ಲೆ ಮಾಡಿದೆ. -ಹರಿಯಾಣದಲ್ಲಿ ಕೋವಿಡ್ -19 ನಿಂದ ಮೊದಲ ಸಾವು ದಾಖಲು. ಅಂಬಾಲಾ ಎಂಬಲ್ಲಿ 67 ವರ್ಷದ ವ್ಯಕ್ತಿ ಸಾವು. ಸದ್ಯ ರಾಜ್ಯದಲ್ಲಿ 43 ಪ್ರಕರಣ ಬೆಳಕಿಗೆ ಬಂದಿದೆ. -ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಪರಿಸ್ಥಿಯ ಅವಲೋಕನ ಮಾಡಿದ್ದಾರೆ. -ಮಾಜಿ ಕ್ರಿಕೆಟಿಗ, ದೆಹಲಿ ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ತಮ್ಮ 2 ವರ್ಷದ ವೇತನವನ್ನು ಪಿಎಂ ಕೇರ್ಸ್ ನಿಧಿಗೆ ನೀಡಿದ್ದಾರೆ -ಭಾರತದಲ್ಲಿರುವ ವಿದೇಶಿಗರನ್ನು ತಮ್ಮ ದೇಶಕ್ಕೆ ತಲುಪಿಸಲು ಏರ್ ಇಂಡಿಯಾ ಲಂಡನ್‌ಗೆ ವಿಶೇಷ ವಿಮಾನ ವ್ಯವಸ್ಥೆ ಮಾಡಿದೆ. -ರಾಜಸ್ಥಾನದಲ್ಲಿ ಕೊರೊನಾ ಸೋಂಕಿತ ವ್ಯಕ್ತಿಯೋರ್ವ ಗುರುವಾರ ಸಾವನ್ನಪ್ಪಿದ್ದಾನೆ. ಸದ್ಯ ಇಲ್ಲಿ 129 ಸೋಂಕಿತ ಪ್ರಕರಣಗಳು ದಾಖಲಾಗಿವೆ. -ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 110 ಇದ್ದು, ಮೂರು ಮಂದಿ ಸಾವನ್ನಪ್ಪಿದ್ದಾರೆ. 9 ಮಂದಿ ಗುಣಮುಖರಾಗಿದ್ದಾರೆ. -ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2094ಕ್ಕೆ ಏರಿಕೆಯಾಗಿದೆ. ಇಲ್ಲಿವರೆಗಿನ ವರದಿ ಪ್ರಕಾರ 57 ಮಂದಿಯನ್ನು ಬಲಿ ಪಡೆದಿದ್ದು 171 ಮಂದಿ ಗುಣಮುಖರಾಗಿದ್ದಾರೆ. -ಕೋವಿಡ್-19ರ ತವರು ಎನಿಸಿರುವ ಚೀನಾದಲ್ಲಿ ಈಗ ವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ಕಾಣ ಸಿಗುತ್ತಲೇ ಇಲ್ಲ. ಮಾತ್ರವಲ್ಲ 81 ಸಾವಿರಕ್ಕೂ ಹೆಚ್ಚ ಮಂದಿ ಇಲ್ಲಿ ಸೋಂಕಿತರಾಗಿದ್ದು, ಇದರಲ್ಲಿ 76,238 ಮಂದಿ ಗುಣಮುಖರಾಗಿ ಸಾವಿನಿಂದ ಪಾರಾಗಿದ್ದಾರೆ. ಇಲ್ಲಿ ಸಾವಿನ ಸಂಖ್ಯೆ ದಾಖಲಾಗಿರುವುದು 3,300. -ಕೊರೊನಾ ವೈರಸ್ ಅತೀ ಹೆಚ್ಚು ಬಲಿ ಪಡೆದಿರುವುದು ಇಟಲಿ ಜನತೆಯನ್ನ . ಇಟಲಿಯಲ್ಲಿ 1 ಲಕ್ಷದ 10 ಸಾವಿರಕ್ಕೂ ಹೆಚ್ಚಿನ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು 13 ಸಾವಿರಕ್ಕೂ ಹೆಚ್ಚಿನ ಜನರನ್ನು ಬಲಿ ಪಡೆದಿದೆ. -ವಿಶ್ವದಾದ್ಯಂತ 47 ಸಾವಿರಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. 9 ಲಕ್ಷದ 35 ಸಾವಿರಕ್ಕೂ ಹೆಚ್ಚು ಜನರನ್ನು ಕೊರೊನಾ ಆವರಿಸಿದೆ.


from India & World News in Kannada | VK Polls https://ift.tt/2ysr1al

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...