ಕೊರೊನಾ ಎಫೆಕ್ಟ್‌: ಮೈಸೂರಿನಲ್ಲಿ ಸಂಜೆ ವೇಳೆ ಅಂಗಡಿ ಓಪನ್‌ ಮಾಡಿದ್ರೆ ಬೀಳುತ್ತೆ ಕೇಸ್‌..!

ಮೈಸೂರು: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಇಲಾಖೆ ಹೊಸ ನಿಯಮ ಜಾರಿಗೆ ತಂದಿದೆ. ಏಪ್ರಿಲ್ 5 ಭಾನುವಾರದಿಂದ ಏಪ್ರಿಲ್ 14ರವರೆಗೆ ಸಾಯಂಕಾಲ 6ರಿಂದ ಯಾವುದೇ ತೆರೆಯಬಾರದು ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಆದೇಶಿಸಿದ್ದಾರೆ. ಮೆಡಿಕಲ್‌ ಶಾಪ್‌, ಆಸ್ಪತ್ರೆ, ಹೋಂ ಡೆಲಿವರಿ ಹೊರತುಪಡಿಸಿ ಯಾವುದೇ ದಿನಸಿ ಅಂಗಡಿ, ತರಕಾರಿ, ಹಣ್ಣು ಮಾರುವ ಅಂಗಡಿಗಳು ನಗರದಲ್ಲಿ ತೆರೆಯುವಂತಿಲ್ಲ. ಆಕಸ್ಮಾತ್‌ ಯಾವುದಾದ್ರೂ ಅಂಗಡಿ, ಮಳಿಗೆ ತೆರೆದರೆ ಕೇಸ್‌ ದಾಖಲಾಗುವುದು ಖಚಿತ ಎಂದು ಕಮೀಷನರ್‌ ಎಚ್ಚರಿಸಿದ್ದಾರೆ. ಸಾರ್ವಜನಿಕರನ್ನು ಕೊರೊನಾ ವೈರಸ್‌ನಿಂದ ಪಾರು ಮಾಡಲು ಎಷ್ಟೇ ಮುನ್ನೆಚ್ಚರಿಕಾ ಕ್ರಮಗಳನ್ನೂ ಕೈಗೊಂಡರೂ ಕೂಡಾ ಜನರು ಸುಖಾಸುಮ್ಮನೆ ರಸ್ತೆಗೆ ಬರುತ್ತಿದ್ದಾರೆ. ಮೈಸೂರು ನಗರದಲ್ಲಿ ಈಗಾಗಲೇ 500ಕ್ಕೂ ಹೆಚ್ಚು ವಾಹನಗಳನ್ನು ಈಗಾಗಲೇ ಸೀಜ್‌ ಮಾಡಲಾಗಿದೆ. ಆದ್ರೆ, ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದರೂ ಜನರಿಗೆ ಮಾತ್ರ ಸಮಸ್ಯೆಯ ಗಂಭೀರತೆ ಅರ್ಥವಾಗುತ್ತಿಲ್ಲ. ಕೆಲವರಂತೂ ಅನಾವಶ್ಯಕವಾಗಿ ಪಾಸ್‌ ಕೇಳುತ್ತಿದ್ದಾರೆ. ಪೊಲೀಸ್‌ ಇಲಾಖೆಯ ವಾಟ್ಸಪ್‌ಗೆ ಪದೇ ಪದೇ ಸಂದೇಶ ಕಳಿಸುತ್ತಿದ್ದಾರೆ. ತೀರಾ ಅಗತ್ಯವಿದ್ದರೆ ಮಾತ್ರ ಪಾಸ್‌ ಕೊಡಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್‌, ಕೋವಿಡ್‌–19 ಪ್ರಕರಣದ ಪರೀಕ್ಷಾ ಸಾಮರ್ಥ್ಯದ ಬಗ್ಗೆ ಕೆಲವರಲ್ಲಿ ಅನುಮಾನಗಳಿವೆ. ಆದರೆ, ನಮ್ಮಲ್ಲಿ ಸೌಲಭ್ಯ ಇದೆ. ಪರೀಕ್ಷಾ ಸಾಮರ್ಥ್ಯ ಹೆಚ್ಚಿಸಲು ಸರ್ಕಾರವು ಆಟೊಮೇಟೆಡ್‌ ಆರ್‌ಎನ್‌ಎ ಎಕ್ಸ್‌ಟ್ರ್ಯಾಕ್ಟ್‌ ಹಾಗೂ 100 ಕಿಟ್‌ಗಳನ್ನು ಕಳಿಸಿಕೊಟ್ಟಿದೆ. ಇದರಿಂದ ತ್ವರಿತಗತಿಯಲ್ಲಿ ಪರೀಕ್ಷೆ ನಡೆಸಬಹುದು. ಅಲ್ಲದೇ, ಸಿಎಫ್‌ಟಿಆರ್‌ಐ ಕೂಡ ಎರಡು ಪರೀಕ್ಷಾ ಕಿಟ್‌ಗಳನ್ನು ನೀಡಲಿದೆ ಎಂದರು.


from India & World News in Kannada | VK Polls https://ift.tt/34hYrnR

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...