ಆಸ್ಪತ್ರೆಯಲ್ಲಿ ಐಸಿಯು ಕೀಲಿ ಕೈ ಸಿಗದೇ ಮಹಿಳೆ ಸಾವು: ಇಬ್ಬರ ಅಮಾನತು!

ಉಜ್ಜಯಿನಿ: ದೇಶದಲ್ಲಿ ಕೋವಿಡ್-19 ಸಂಬಂಧಿತ ಸಾವಿನ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದ್ದು, ಎಲ್ಲಾ ರಾಜ್ಯ ಸರ್ಕಾರಗಳೂ ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದರಲ್ಲಿ ತೊಡಗಿವೆ. ಆದರೆ ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಆಸ್ಪತ್ರೆಯ ತುರ್ತು ನಿಗಾ ಘಟಕದ ಕೀಲಿ ಕೈ ಸಿಗದೇ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ 55 ವರ್ಷದ ಮಹಿಳೆಯೋರ್ವಳು ಮೃತಪಟ್ಟ ಘಟನೆ ನಡೆದಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಹಿಳೆ ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಳು. ಆದರೆ ಆಕೆಯ ಸ್ಥಿತಿ ತೀವ್ರ ಚಿಂತಾಜನಕವಾಗಿರುವುದನ್ನು ಗಮನಿಸಿದ ವೈದ್ಯರು,ಮಾಧವ್‌ನಗರ್‌ದಲ್ಲಿ ಕೋವಿಡ್-19 ರೋಗಿಗಳಿಗಾಗಿ ನಿರ್ಮಿಸಿರುವ ಆಸ್ಪತ್ರೆಗೆ ದಾಖಲಿಸಲು ನಿರ್ಧರಿಸಿದರು. ಆದರೆ ಕ್ಷಣಕ್ಷಣಕ್ಕೂ ಆಕೆಯ ಸ್ಥಿತಿ ಚಿಂತಾಜನಕವಾಗುತ್ತಿರುವುದನ್ನು ಗಮನಿಸಿದ ವೈದ್ಯರು, ಮಾರ್ಗ ಮಧ್ಯದಲ್ಲೇ ಇರುವ ಆರ್‌ಡಿ ಗರಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಲು ಕೊಂಡೊಯ್ದಿದ್ದಾರೆ. ಆದರೆ ಆರ್‌ಡಿ ಗರಡಿ ಆಸ್ಪತ್ರೆಯ ತುರ್ತು ನಿಗಾ ಘಟಕದ ಕೀಲಿ ಕೈ ಸಿಗದೇ ವೈದ್ಯರು ಪರದಾಡಿದ್ದಾರೆ. ಅಲ್ಲದೇ ಸ್ಥಳದಲ್ಲಿ ಐಸಿಯು ಜವಾಬ್ದಾರಿ ಹೊತ್ತ ನರ್ಸ್‌ಗಳು ಇರದಿದ್ದ ಕಾರಣ ಬಾಗಿಲನ್ನು ಒಡೆಯಲು ತೀರ್ಮಾನಿಸಿದ್ದಾರೆ. ಆಸ್ಪತ್ರೆಯ ಐಸಿಯು ಬಾಗಿಲು ಒಡೆದು ಚಿಕಿತ್ಸೆ ನೀಡಲು ಮುಂದಾಗುವಷ್ಟರಲ್ಲಿ ಮಹಿಳೆ ಸಾವನ್ನಿಪ್ಪಿದ್ದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಉಜ್ಜಯಿನಿ ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಅನುಸೂಯಾ ಗೌಳಿ, ಐಸಿಯು ಬಂದ್ ಮಾಡಿ ಆಸ್ಪತ್ರೆಯಿಂದ ತೆರಳಿದ್ದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಖಾಸಗಿ ಆಸ್ಪತ್ರೆಗೆ ಆದೇಶ ನೀಡಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಸಮಯಕ್ಕೆ ಸರಿಯಾಗಿ ಮಹಿಳೆಗೆ ವೆಂಟಿಲೇಟರ್ ಒದಗಿಸದ ಮಾಧವ್‌ನಗರ್ ಆಸ್ಪತ್ರೆಯ ಇಬ್ಬರು ಹಿರಿಯ ವೈಧ್ಯಾಧಿಕಾರಿಗಳಾದ ಡಾ. ಆರ್‌ಪಿ ಪರ್ಮಾರ್ ಹಾಗೂ ಡಾ. ಮಹೇಶ್ ಮಾರ್ಮಟ್ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಡಾ. ಅನುಸೂಯಾ ಗೌಳಿ ಹೇಳಿದ್ದಾರೆ.


from India & World News in Kannada | VK Polls https://ift.tt/3dXxDOg

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...