ನೈಟ್ ಕರ್ಫ್ಯೂವಿನಿಂದ ಭಾರೀ ನಷ್ಟ: ಹೋಟೆಲ್‌, ಪ್ರವಾಸೋದ್ಯಮಕ್ಕೆ ಹೊಡೆತ!

ಬೆಂಗಳೂರು: ರಾತ್ರಿ ಕರ್ಫ್ಯೂ ಹೇರಿಕೆಯಿಂದಾಗಿ ರಾಜ್ಯದ ಹೋಟೆಲ್‌ ಮತ್ತು ಕ್ಷೇತ್ರಕ್ಕೆ ದೊಡ್ಡ ಹೊಡೆತ ಬೀಳುವ ಸಾಧ್ಯತೆ ಕಂಡುಬಂದಿದೆ. ರಾಜ್ಯದಲ್ಲಿ ಹೇರಲಾಗಿರುವ ರಾತ್ರಿ ಕರ್ಫ್ಯೂವಿನ ನಿಯಮಾವಳಿಗಳೇನೂ ಅಷ್ಟು ಕಠಿಣವಿಲ್ಲ. ಆದರೆ, ಇದು ವರ್ಷಾಂತ್ಯದ ಪ್ರವಾಸ, ಕ್ರಿಸ್ಮಸ್‌ ಮತ್ತು ಹೊಸ ವರ್ಷದ ಸಂಭ್ರಮಾಚರಣೆಗೆ ಹೊರಟವರನ್ನು ತಡೆಯುವಲ್ಲಿ ಶಕ್ತವಾಗಿವೆ. ಇದು ಪ್ರವಾಸೋದ್ಯಮ ಮತ್ತು ಹೋಟೆಲ್‌ ಉದ್ಯಮದ ಮೇಲೆ ನೇರ ಪರಿಣಾಮ ಉಂಟು ಮಾಡಲಿದೆ. ಹಲವಾರು ಮಂದಿ ವರ್ಷದ ಕೊನೆಯ ಸೂರ್ಯಾಸ್ತ ಮತ್ತು ಹೊಸ ವರ್ಷದ ಮೊದಲ ಸೂರ್ಯೋದಯ ನೋಡಲು ಕೊಡಗಿಗೆ ಹೋಗುತ್ತಾರೆ. ಆದರೆ, ಅಲ್ಲಿ ರಾತ್ರಿ ಕರ್ಫ್ಯೂ ಹೆಸರಿನಲ್ಲಿ ಸಾಕಷ್ಟು ನಿರ್ಬಂಧಗಳನ್ನು ಹೇರಿರುವುದರಿಂದ ಸಂಭ್ರಮಾಚರಣೆಗೆ ತೊಡಕಾಗಿದೆ. ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಜಿಲ್ಲೆಯ ಪ್ರವಾಸೋದ್ಯಮದ ಮೇಲೆ ಈ ಬೆಳವಣಿಗೆ ಪ್ರತಿಕೂಲ ಪರಿಣಾಮ ಬೀರಬಹುದು ಎನ್ನುವ ಆತಂಕವನ್ನು ಪ್ರವಾಸೋದ್ಯಮಿಗಳು ಹೊರಹಾಕುತ್ತಿದ್ದಾರೆ. ಪ್ರವಾಸೋದ್ಯಮ ಚಟುವಟಿಕೆ ನಿಲ್ಲಿಸಲು ಸರಕಾರದ ಯಾವುದೇ ಆದೇಶ ಇಲ್ಲದಿರುವುದರಿಂದ, ಪ್ರವಾಸಿಗರು ಬರಲಿ, ಆದರೆ ಕ್ರಿಸ್ಮಸ್‌ ಹಾಗೂ ಹೊಸ ವರ್ಷ ಆಚರಣೆಗೆ ಕಡಿವಾಣ ಇರಲಿ ಎನ್ನುತ್ತಿದ್ದಾರೆ. ಈ ನಡುವೆ, 10 ವರ್ಷದೊಳಗಿನ ಮಕ್ಕಳು ಮತ್ತು ಹಿರಿಯ ನಾಗರಿಕರು ಮನೆ ಬಿಟ್ಟು ಹೊರಡಬೇಡಿ ಎಂಬ ಸೂಚನೆಯನ್ನೂ ನೀಡಲಾಗಿರುವುದು ಕೌಟುಂಬಿಕ ಪ್ರವಾಸಕ್ಕೆ ಅಡ್ಡಿಯಾಗಲಿದೆ. ರಾಜ್ಯದ ಹಲವು ಪ್ರವಾಸಿ ತಾಣಗಳು ಕ್ರಿಸ್‌ಮಸ್‌, ಹೊಸ ವರ್ಷಾಚರಣೆಗೆ ಸಿದ್ಧವಾಗುತ್ತಿರುವ ನಡುವೆ ಈ ವಿದ್ಯಮಾನ ನಡೆದಿರುವುದು ಅವುಗಳ ಮಾಲೀಕರಿಗೆ ಚಿಂತೆ ಉಂಟು ಮಾಡಿದೆ. ಕೋವಿಡ್‌-19 ಹಿನ್ನೆಲೆ ಕ್ರಿಸ್‌ಮಸ್‌ ಮತ್ತು ಹೊಸ ವರ್ಷ ಆರಂಭದ ದಿನ ಸರಕಾರದ ನಿರ್ದೇಶನಗಳನ್ನು ಪಾಲಿಸಬೇಕು. ಜಿಲ್ಲಾಡಳಿತದ ಜತೆ ಕೈಜೋಡಿಸಬೇಕು. ಬಹು ಮುಖ್ಯವಾಗಿ 65 ವರ್ಷದ ಮೇಲ್ಪಟ್ಟ ಹಿರಿಯರು ಮತ್ತು 10 ವರ್ಷದ ಒಳಗಿನ ಮಕ್ಕಳು ಮನೆಯಲ್ಲಿಯೇ ಇರಬೇಕು. ಅನೀಸ್‌ ಕಣ್ಮಣಿ ಜಾಯ್‌, ಕೊಡಗು ಜಿಲ್ಲಾಧಿಕಾರಿ


from India & World News in Kannada | VK Polls https://ift.tt/3nOb1Eh

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...