ಬೀದರ್: ಜಿಲ್ಲೆಯ ಎಂಟೂ ಕೇಂದ್ರಗಳಲ್ಲಿ ಮತ ಎಣಿಕೆಯು ಏಕಕಾಲಕ್ಕೆ ಬೆಳಗ್ಗೆ ಸರಿಯಾಗಿ 8 ಗಂಟೆಯಿಂದ ಆರಂಭವಾಗಿದೆ.ಬೀದರ್, ಬಸವಕಲ್ಯಾಣ ಮತ್ತು ಭಾಲ್ಕಿ ತಾಲೂಕುಗಳ ಮತ ಎಣಿಕೆ ಕೇಂದ್ರದಲ್ಲಿ ಮತ ಎಣಿಕೆಗಾಗಿ ತಲಾ 15ರಂತೆ ಟೇಬಲ್ ಅಳವಡಿಸಲಾಗಿದೆ. ಚಿಟಗುಪ್ಪಾ ಮತ್ತು ಕಮಲನಗರ ತಾಲೂಕುಗಳ ಮತ ಎಣಿಕೆಗೆ ತಲಾ 6ರಂತೆ ಟೇಬಲ್ ಅಳವಡಿಸಲಾಗಿದೆ. ಹುಮನಾಬಾದ್, ಔರಾದ್ ಮತ್ತು ಹುಲಸೂರ ತಾಲೂಕುಗಳ ಮತ ಎಣಿಕೆಗೆ ಅನುಕ್ರಮವಾಗಿ 9, 7 ಮತ್ತು 2 ಟೇಬಲ್ ಅಳವಡಿಸಲಾಗಿದೆ. ನೋಡೆಲ್ ಅಧಿಕಾರಿಗಳ ನೇಮಕಜಿಲ್ಲೆಯಲ್ಲಿನ ಎಲ್ಲ ಮತ ಎಣಿಕಾ ಕೇಂದ್ರಗಳಲ್ಲಿ ಮತ ಎಣಿಕೆಯು ಸುಗಮವಾಗಿ ನಡೆಯುವಂತೆ ನೋಡಿಕೊಳ್ಳಲು ಮತ ಎಣಿಕೆ ಕೇಂದ್ರಕ್ಕೆ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ವ್ಯವಸ್ಥೆ ಮತ ಎಣಿಕೆಗಾಗಿ ತಲಾ ಒಂದು ಟೇಬಲ್ಗೆ ಒಬ್ಬ ಮೇಲ್ವಿಚಾರಕರು ಮತ್ತು ಸಿಬ್ಬಂದಿಯನ್ನು ನಿಯೋಜಿಸಿದ್ದು, ಎಂಟೂ ತಾಲೂಕುಗಳಿಗೆ ಸಂಬಂಧಿಸಿದ ಮತ ಎಣಿಕೆಗಾಗಿ 75 ಮೇಲ್ವಿಚಾರಕರು ಮತ್ತು 75 ಸಹಾಯಕ ಸಿಬ್ಬಂದಿ ಸೇರಿ ಒಟ್ಟು 150 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 2912 ಅಭ್ಯರ್ಥಿಗಳ ಆಯ್ಕೆಗಾಗಿ ಮತ ಎಣಿಕೆ ಜಿಲ್ಲೆಯ ಎಂಟು ತಾಲೂಕುಗಳಲ್ಲಿ ಒಟ್ಟು 178 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆದಿದ್ದು, ಬೀದರ್ 1812, ಔರಾದ್ (ಬಿ) 831, ಕಮಲನಗರ 746, ಬಸವಕಲ್ಯಾಣ 1671, ಹುಲಸೂರ 204, ಹುಮನಾಬಾದ್ 1117 ಹಾಗೂ ಚಿಟಗುಪ್ಪಾ 787 ಮತ್ತು ಭಾಲ್ಕಿ 1507 ಸೇರಿ ಒಟ್ಟು 8675 ಅಭ್ಯರ್ಥಿಗಳು ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಬೀದರ್ ನಲ್ಲಿ 579, ಔರಾದ್ (ಬಿ)ನಲ್ಲಿ 330, ಕಮಲನಗರದಲ್ಲಿ 263, ಬಸವಕಲ್ಯಾಣದಲ್ಲಿ 544, ಹುಲಸೂರದಲ್ಲಿ 72, ಹುಮನಾಬಾದ್ನಲ್ಲಿ 325 ಹಾಗೂ ಚಿಟಗುಪ್ಪಾದಲ್ಲಿ 244 ಮತ್ತು ಭಾಲ್ಕಿನಲ್ಲಿ 555 ಸೇರಿ ಒಟ್ಟು 2912 ಅಭ್ಯರ್ಥಿಗಳ ಆಯ್ಕೆಗಾಗಿ ಮತ ಎಣಿಕೆ ನಡೆಯುತ್ತಿದೆ. ಅವಿರೋಧ ಆಯ್ಕೆಈಗಾಗಲೇ ಬೀದರನಲ್ಲಿ 36, ಔರಾದ್ (ಬಿ)ನಲ್ಲಿ 55, ಕಮಲನಗರದಲ್ಲಿ 18, ಬಸವಕಲ್ಯಾಣದಲ್ಲಿ 33, ಹುಲಸೂರದಲ್ಲಿ 05, ಹುಮನಾಬಾದ್ನಲ್ಲಿ 18, ಚಿಟಗುಪ್ಪಾದಲ್ಲಿ 05 ಮತ್ತು ಭಾಲ್ಕಿನಲ್ಲಿ 56 ಸೇರಿ ಒಟ್ಟು 226 ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ.
from India & World News in Kannada | VK Polls https://ift.tt/38JNv5c