ಹೊಸ ಸ್ಲೋಗನ್‌ನೊಂದಿಗೆ ಮತ್ತೆ ಬಂದ ರಾಮ್‌ದಾಸ್‌ ಅಠಾವಳೆ, ಈ ಬಾರಿ ‘ನೋ ಕೊರೊನಾ..ಕೊರೊನಾ ನೋ’

ಹೊಸದಿಲ್ಲಿ: ಭಾರತದಲ್ಲಿ ಕೊರೊನಾ ರೋಗ ಹರಡುತ್ತಿರುವ ಆರಂಭದಲ್ಲಿ ‘ಗೋ ಕೊರೊನಾ.. ಕೊರೊನಾ ಗೋ’ ಎಂದು ಹೇಳಿ ಸಿಕ್ಕಾಪಟ್ಟೆ ಟ್ರೋಲ್‌ಗೆ ಒಳಗಾಗಿದ್ದ ಕೇಂದ್ರ ಸಚಿವ ಈ ಬಾರಿ ಮತ್ತೊಂದು ಹೊಸ ಘೋಷ ವಾಕ್ಯವನ್ನು ರಚಿಸಿ ಘೋಷಿಸಿದ್ದಾರೆ. ಕೊರೊನಾ ವಿಚಾರವಾಗಿ ಮಾಧ್ಯಮದ ಜೊತೆ ಮಾತನಾಡಿದ ರಾಮ್‌ದಾಸ್ ಅಠಾವಳೆ, ಕೊರೊನಾ ಆರಂಭದಲ್ಲಿ ನಾನು ‘ಗೋ ಕೊರೊನಾ ಗೋ’ ಘೋಷವಾಕ್ಯ ನೀಡಿದ್ದೆ. ಇತ್ತೀಚಿನ ದಿನಗಳಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಈಗ ನಾನು ‘ನೋ ಕೊರೊನಾ.. ಕೊರೊನಾ ನೋ’ ಎಂಬ ಘೋಷವಾಕ್ಯ ನೀಡುತ್ತಿದ್ದೇನೆ.ಇದು ಹೊಸ ಕೊರೊನಾ ವೈರಸ್‌ ಬಗೆಗಿನ ಒತ್ತಡವನ್ನು ನಿಯಂತ್ರಿಸಲು ಸಹಕಾರಿಯಾಗಲಿದೆ ಎಂದು ಹೇಳಿದ್ದಾರೆ. ಈ ವರ್ಷ ಮಾರ್ಚ್‌ ಐದರಂದು ಲೈಟ್‌ ಆಫ್‌ ಮಾಡಿ ತಟ್ಟೆ ಬಡಿದು ಕೊರೊನಾ ವಾರಿಯರ್ಸ್‌ಗೆ ಬೆಂಬಲ ನೀಡಲು ಪ್ರಧಾನಿ ಮೋದಿ ಕರೆ ನೀಡಿದಾಗ ಮುಂಬೈನ ಗೇಟ್‌ವೇ ಆಫ್‌ ಇಂಡಿಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಮ್‌ದಾಸ್‌ ಅಠಾವಳೆ ‘ಗೋ ಕೊರೊನಾ ಕೊರೊನಾ ಗೋ’ ಎಂದು ಹೇಳಿದ್ದರು. ಇದು ದೇಶಾದ್ಯಂತ ಭಾರೀ ಟ್ರೋಲ್‌ಗೆ ಒಳಗಾಗಿ ಜನರನ್ನು ಮನರಂಜಿಸಿತ್ತು.


from India & World News in Kannada | VK Polls https://ift.tt/3aLPEQd

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...