ಹೊಸ ವರ್ಷಕ್ಕೆ ಗುಡ್‌ನ್ಯೂಸ್‌ ನೀಡಿದ ಬಿಎಂಟಿಸಿ; ವೋಲ್ವೋ ಬಸ್‌ಗಳ ಟಿಕೆಟ್‌, ಪಾಸ್‌ ದರ ಇಂದಿನಿಂದ ಕಡಿತ..!

ಬೆಂಗಳೂರು: ಹೊಸ ವರ್ಷಕ್ಕೆ ತನ್ನ ಪ್ರಯಾಣಿಕರಿಗೆ ಸಿಹಿಸುದ್ದಿ ನೀಡಿದೆ. ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಹವಾನಿಯಂತ್ರಿತ ವೋಲ್ವೊ ಬಸ್‌ಗಳ ದರವನ್ನು ಜನವರಿ ಒಂದರಿಂದ ಜಾರಿ ಬರುವಂತೆ ಇಳಿಕೆ ಮಾಡಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಹವಾನಿಯಂತ್ರಿತ ವೋಲ್ವೊ ಬಸ್‌ಗಳ ಟಿಕೆಟ್‌, ಪಾಸ್‌ ದರಗಳನ್ನು ಶುಕ್ರವಾರದಿಂದ ಜಾರಿಗೆ ಬರುವಂತೆ ಇಳಿಕೆ ಮಾಡಿದ್ದು, ಮಾಸಿಕ ಪಾಸ್‌ 363 ರೂ. ಮತ್ತು ದೈನಂದಿನ ಪಾಸ್‌ ದರವನ್ನು 27 ರೂ.ನಷ್ಟು ಕಡಿಮೆ ಮಾಡಲಾಗಿದೆ. ವೋಲ್ವೊ ಮಾಸಿಕ ಬಸ್‌ ಪಾಸ್‌ನ ಪ್ರಸ್ತುತ ದರವು ಜಿಎಸ್‌ಟಿ ಸೇರಿ 2363 ರೂ. ಇದೆ. ಆದರೆ ಇಂದಿನಿಂದ ಈ ದರವನ್ನು 2000 ರೂ.ಗಳಿಗೆ ಇಳಿಸಲಾಗಿದೆ. ಹಾಗೆಯೇ ದೈನಂದಿನ ಪಾಸ್‌ ದರವನ್ನು 147 ರೂ. ಗಳಿಂದ 120 ರೂ.ಗಳಿಗೆ ಕಡಿಮೆ ಮಾಡಲಾಗಿದೆ. ಸಾಮಾನ್ಯ ಮತ್ತು ವಾಯುವಜ್ರ ಸೇವೆಗಳ ದರದಲ್ಲಿ ಯಾವುದೇ ಬದಲಾವಣೆ ಇಲ್ಲ. ವೋಲ್ವೊ ಬಸ್‌ಗಳ ಪ್ರಯಾಣ ದರವನ್ನು 5 ರೂ. ನಿಂದ 20 ರೂ.ವರೆಗೆ ಇಳಿಕೆ ಮಾಡಲಾಗಿದೆ. ಸಾಮಾನ್ಯ ಸೇವೆಗಳ ಮಾಸಿಕ (1050 ರೂ.) ಮತ್ತು ಹಿರಿಯ ನಾಗರಿಕರ ಸಾಮಾನ್ಯ ಮಾಸಿಕ (945 ರೂ.) ಪಾಸುದಾರರು ಚಾಲ್ತಿಯಲ್ಲಿರುವ ಪಾಸ್‌ ತೋರಿಸಿ ಭಾನುವಾರಗಳಂದು ವೋಲ್ವೊ ಬಸ್‌ಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಜ. 4ರಿಂದ ಹೊಸದಾಗಿ 12 ಮಾರ್ಗಗಳಲ್ಲಿ81 ವೋಲ್ವೊ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ. ಕೊರೊನಾ ಸೋಂಕು ವೈರಾಣು ಸೋಂಕು ತಡೆಗೆ ಲಾಕ್‌ಡೌನ್‌ ಹೇರಿದಾಗಿನಿಂದ ವೋಲ್ವೊ ಬಸ್‌ಗಳನ್ನು ರಸ್ತೆಗಿಳಿಸಿರಲಿಲ್ಲ. ಜೂನ್‌ ತಿಂಗಳಿನಿಂದ ಬೆರಳೆಣಿಕೆಯಷ್ಟು ಬಸ್‌ಗಳನ್ನಷ್ಟೇ ಓಡಿಸಲಾಗುತ್ತಿತ್ತು.


from India & World News in Kannada | VK Polls https://ift.tt/383RyKv

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...