ತೊಕ್ಕೊಟ್ಟು: ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಪಾದಚಾರಿ ಮಹಿಳೆಯ ಕತ್ತಿನಿಂದ ಸರ ಕಿತ್ತರಾದರೂ, ಮಹಿಳೆ ಬೊಬ್ಬಿಟ್ಟ ಕಾರಣ ಸರ ತುಂಡಾಗಿ ರಸ್ತೆಗೆ ಬಿದ್ದ ಹಿನ್ನೆಲೆ ಕಳ್ಳರು ಸರ ಬಿಟ್ಟು ಪರಾರಿಯಾದ ಘಟನೆ ಭಟ್ನಗರದಲ್ಲಿ ಭಾನುವಾರ ರಾತ್ರಿ ನಡೆದಿದೆ. ಚೆಂಬುಗುಡ್ಡೆ ರುದ್ರಭೂಮಿ ಬಳಿಯ ನಿವಾಸಿ ಹರೀಶ್ ಟೈಲರ್ ಅವರ ಪತ್ನಿ ಲಕ್ಷ್ಮಿ ಶೆಟ್ಟಿ (30)ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಹಿಂಬದಿಯಿಂದ ಬೈಕ್‌ನಲ್ಲಿ ಬಂದ ಇಬ್ಬರು ಕಳ್ಳರು ಅವರ ಕತ್ತಿನಲ್ಲಿದ್ದ ಚಿನ್ನದ ಸರ ಎಳೆದಿದ್ದು, ಸರ ತುಂಡಾಗಿ ರಸ್ತೆಗೆ ಬಿದ್ದಿದೆ. ಕಳ್ಳರು ಹೆಕ್ಕಲು ಯತ್ನಿಸಿದಾಗ ಮಹಿಳೆ ಬೊಬ್ಬಿಟ್ಟಿದ್ದು ಅಪಾಯದ ಮುನ್ಸೂಚನೆ ಅರಿತ ಕಳ್ಳರು ಬೈಕ್‌ನಲ್ಲಿ ಪರಾರಿಯಾಗಿದ್ದಾರೆ. ಸ್ಥಳೀಯ ಯುವಕರು ಕಳ್ಳರನ್ನು ಬೈಕ್‌ನಲ್ಲಿ ಬೆನ್ನಟ್ಟಿದ್ದು ಕಳ್ಳರು ಕೋಟೆಕಾರಿನ ಕಡೆಗೆ ಪಲಾಯನ ಮಾಡಿದ್ದಾರೆ. ಉಳ್ಳಾಲ ಠಾಣೆ ಪಿಎಸ್‌ಐ ಪ್ರದೀಪ್ ಹಾಗೂ ತಂಡ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕಿದ್ದು ಕಳ್ಳರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆದರೆ ಈ ವಲಯದಲ್ಲಿ ಜನರಲ್ಲಿ ಭಯ ಮೂಡಲು ಆರಂಭವಾಗಿದೆ. ಇಂತಹ ಘಟನೆ ಇದುವರೆಗೆ ಇಲ್ಲಿ ನಡೆಯಲಿಲ್ಲ. ಹೀಗಾಗಿ ಜನರು ಭಯಭೀತರಾಗಿದ್ದಾರೆ.
from India & World News in Kannada | VK Polls https://ift.tt/3aIxZsV