ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಮಾಡುವ ಮಿತಿ ಹೆಚ್ಚಳಕ್ಕೆ ಆಗ್ರಹ

ಕಲಬುರಗಿ: ರಾಜ್ಯ ಸರಕಾರ ಕೇಂದ್ರಗಳ ಮೂಲಕ ಬೆಂಬಲ ಬೆಲೆಯಲ್ಲಿ ಖರೀದಿ ಮಾಡುವ ಮಿತಿಯನ್ನು ಹೆಚ್ಚಳ ಮಾಡಬೇಕು ಎಂದು ಕನ್ನಡ ಭೂಮಿ ಜಾಗೃತಿ ಸಮಿತಿ ಸಂಸ್ಥಾಪಕ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಆಗ್ರಹಿಸಿದ್ದಾರೆ. ಕಳೆದ ವರ್ಷ ಪ್ರತಿ ಪಹಣಿಗೆ ಕೇವಲ 10 ಕ್ವಿಂಟಾಲ್‌ ನಂತೆ ಖರೀದಿ ಮಾಡಿದ್ದರಿಂದ ರೈತರಿಗೆ ತೊಂದರೆಯಾಗಿತ್ತು. ಉಳಿದ ತೊಗರಿ ದಲ್ಲಾಳಿಗಳ ಪಾಲಾಗಿ ರೈತರಿಗೆ ಬೆಲೆ ಸಿಗಲಿಲ್ಲ. ಪ್ರತಿ ವರ್ಷ ಇದೇ ರೀತಿ ತೊಗರಿ ಬೆಳೆಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ. ನಂತರ ಕೊನೆಯಲ್ಲಿ ಸರಕಾರ ಪ್ರತಿ ಪಹಣಿಗೆ 20 ಕ್ವಿಂಟಾಲ್‌ ಗೆ ಹೆಚ್ಚಿಸಿ ಖರೀದಿ ಮಾಡಿತ್ತು. ಆದರೆ ಆದಾಗಲೇ ಹೆಚ್ಚಿನ ರೈತರು ತೊಗರಿ ಬೇರೆಡೆಗೆ ಮಾರಾಟ ಮಾಡಿದ್ದರಿಂದ ಅವರಿಗೆ ಅನುಕೂಲವಾಗಲಿಲ್ಲ. ಈ ಬಾರಿಯಾದರೂ ಪ್ರಾರಂಭದಲ್ಲಿ ಖರೀದಿ ಮಿತಿ 25 ಕ್ವಿಂಟಾಲ್‌ಗೆ ಹೆಚ್ಚಳ ಮಾಡಿ ತೊಗರಿ ಖರೀದಿಸಬೇಕು ಎಂದಿದ್ದಾರೆ. ನೀಡಿ ಪ್ರತಿ ಕ್ವಿಂಟಾಲ್‌ ತೊಗರಿಗೆ 8,000 ರೂ ನಂತೆ ಖರೀದಿಸಬೇಕು.ತೊಗರಿ ಖರೀದಿಸಿದ ನಂತರ ವಾರದಲ್ಲೇ ರೈತರ ಖಾತೆಗೆ ಹಣ ಜಮಾ ಮಾಡಬೇಕು. ಕಲಬುರಗಿಯಲ್ಲಿ ಕೇವಲ ಹೆಸರಿಗಷ್ಟೇ ಇರುವ ತೊಗರಿ ಮಂಡಳಿಗೆ ಹೆಚ್ಚಿನ ಅನುದಾನ ನೀಡಿ ಚುರುಕುಗೊಳಿಸಬೇಕು. ರೈತರಿಗೆ ಸರಿಯಾದ ಮಾಹಿತಿ ನೀಡಲು ಎಲ್ಲಾ ಕಡೆ ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಬೇಕು. ಭಾರಿ ಮಳೆಯಿಂದಾಗಿ ಹಾನಿಗೊಳಗಾದ ರೈತರಿಗೆ ಪರಿಹಾರ ಒದಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.


from India & World News in Kannada | VK Polls https://ift.tt/3o4a7Ud

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...