ಎಂ.ವರುಣ್ ಹಾಸನ ಹಾಸನ: ಬೆಂಗಳೂರಿನಲ್ಲಿ ಸಂಭ್ರಮಾಚರಣೆಗೆ ನಿಬಂಧನೆಗಳನ್ನು ವಿಧಿಸಿರುವ ಕಾರಣ ಬೆಂಗಳೂರಿಗರು ಜಿಲ್ಲೆಯತ್ತ ದೌಡಾಯಿಸುತ್ತಿದ್ದು, , ರೆಸಾರ್ಟ್‌ಗಳು ತುಂಬಿ ತುಳುಕುತ್ತಿವೆ.. ಪಬ್, ರೆಸ್ಟೋರೆಂಟ್ ಹಾಗೂ ರಸ್ತೆಗಳಲ್ಲಿ ಡಿಜೆ ಪಾರ್ಟಿ, ಮೋಜು, ಮಸ್ತಿ, ನೃತ್ಯಗಳ ಮೂಲಕ ಹೋಟೆಲ್ ಹಾಗೂ ಇತರೆ ಮನರಂಜನೆ ಸ್ಥಳಗಳಿಗೆ ತೆರಳಿ ಹೊಸ ವರ್ಷವನ್ನು ಸ್ವಾಗತಿಸಲು ಸಜ್ಜಾಗಿದ್ದವರಿಗೆ ರೂಪಾಂತರ ಕೊರೊನಾ ವೈರಸ್ ತಡೆವೊಡ್ಡಿದೆ. ಹೊಸ ವರ್ಷದ ಸಂಭ್ರಮಾಚರಣೆಗೆ ಬ್ರೇಕ್ ಹಾಕಲು ಇಷ್ಟವಿಲ್ಲದ ಮಂದಿ ಜಿಲ್ಲೆಯತ್ತ ಮುಖಮಾಡಿದ್ದಾರೆ. ಜನರು ಹೊಸ ವರ್ಷದ ಎರಡು ದಿನದ ಮುಂಚೆಯೇ ಜಿಲ್ಲೆಯ ಆಲೂರು, ಸಕಲೇಶಪುರ, ಬೇಲೂರು ಗಡಿಭಾಗದಲ್ಲಿರುವ ನೂರಾರು ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳಿಗೆ ತೆರಳಿದ್ದು, ಹೋಂ ಸ್ಟೇ, ಮಾಲೀಕರಿಗೆ ಹೊಸ ವರ್ಷದ ಉಡುಗೊರೆ ಸಿಕ್ಕಂತಾಗಿದೆ. ಹೊಸ ಟೆಂಟ್‌ಗಳ ಖರೀದಿರಾಜ್ಯದ ನಾನಾ ಜಿಲ್ಲೆಗಳಿಂದ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳತ್ತ ತಮ್ಮ ಪ್ರಯಾಣ ಬೆಳೆಸಿದ ಜನರು ಹೋಂ ಸ್ಟೇಗಳಲ್ಲಿ ತಂಗಲು ಕೋಣೆಗಳು ದೊರಕದ ಕಾರಣ ತಾವೇ ಸ್ವಂತವಾಗಿ ಟೆಂಟ್‌ಗಳನ್ನು ಖರೀದಿಸಿ ಹೋಂ ಸ್ಟೇ ಹಾಗೂ ರೆಸಾರ್ಟ್‌ಗಳತ್ತ ಲಗ್ಗೆ ಇಟ್ಟಿದ್ದಾರೆ. ಹಲವು ವರ್ಷಗಳಿಂದ ತಮ್ಮ ಗ್ರಾಹಕರಾಗಿರುವವರಿಗೆ ಕೋಣೆ ಹಾಗೂ ಟೆಂಟ್‌ಗಳ ಸೌಲಭ್ಯವು ಇಲ್ಲ ಎಂದು ಹೇಳಲಾಗದಂತಹ ಸ್ಥಿತಿಗೆ ಸಿಲುಕಿದ ಹೋಂ ಸ್ಟೇ ಹಾಗೂ ರೆಸಾರ್ಟ್ ಮಾಲೀಕರು ಹೆಚ್ಚುವರಿಯಾಗಿ ಹೊಸ ಟೆಂಟ್‌ಗಳನ್ನು ಖರೀದಿಸುವಂತಾಗಿದೆ. ಜಿಲ್ಲಾಡಳಿತರಾಜ್ಯದ ವಿವಿಧೆಡೆಯಿಂದ ನೂರಾರು ಸಂಖ್ಯೆಯಲ್ಲಿ ಜಿಲ್ಲೆಗೆ ಲಗ್ಗೆ ಇಟ್ಟಿರುವುದು ಜಿಲ್ಲಾಡಳಿತಕ್ಕೆ ತಲೆಬಿಸಿ ಉಂಟುಮಾಡಿದೆ. ಈ ಕಾರಣದಿಂದಲೇ ಹೊಂಸ್ಟೇ, ರೆಸಾರ್ಟ್, ಬಾರ್, ಕ್ಲಬ್‌ಗಳಿಗೆ ಹತ್ತು ಹಲವು ಷರತ್ತುಗಳನ್ನು ವಿಧಿಸಿದೆ. ಯಾವುದೇ ಕಾರಣಕ್ಕೂ ಮನೋರಂಜನಾ ಕಾರ್ಯಕ್ರಮ, ಡಿಜೆ ಇತ್ಯಾದಿ ಏರ್ಪಡಿಸಬಾರದು. ನಿಗದಿತ ಸಂಖ್ಯೆಗಿಂತ ಹೆಚ್ಚಿನ ಜನರನ್ನು ಸೇರಿಸಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಎಲ್ಲ ಕಾರಣದಿಂದ ಮತ್ತಿತರ ಕಡೆಯಿಂದ ಜಿಲ್ಲೆಗೆ ಬಂದರೂ, ಕೊರೊನಾ ನಿಯಮ ಪಾಲಿಸಲೇಬೇಕಾದ ಅನಿವಾರ್ಯತೆ ಇದೆ. ಹೊಸ ವರ್ಷಾಚರಣೆ ಮಾಡಲು ಅಡ್ಡಿಯಿಲ್ಲ. ಆದರೆ ಎಲ್ಲಿಯೂ ನೂರಾರು ಸಂಖ್ಯೆಯಲ್ಲಿ ಜನ ಸೇರಿ ಸಾಂಸ್ಕೃತಿಕ ಕಾರ್ಯಕ್ರಮ ಮಾಡುವಂತಿಲ್ಲ. ಡಿಜೆ ಏರ್ಪಡಿಸುವಂತಿಲ್ಲ. ನಿಯಮ ಪಾಲನೆ ಮಾಡಲೇಬೇಕು, ಇಲ್ಲದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು. ಗಿರೀಶ್ ಜಿಲ್ಲಾಧಿಕಾರಿ ಹಾಸನ ರೆಸಾರ್ಟ್, ಹೋಂ ಸ್ಟೇ, ಕ್ಲಬ್‌ಗಳಲ್ಲಿ ರಸಮಂಜರಿ, ಡಿಜೆ ಏರ್ಪಡಿಸುವಂತಿಲ್ಲ. ನೂರಾರು ಸಂಖ್ಯೆಯಲ್ಲಿ ಜನ ಸೇರುವಂತಿಲ್ಲ. ರಸ್ತೆಯಲ್ಲಿ ಮೋಜು, ಮಸ್ತಿ ಮಾಡುವಂತಿಲ್ಲ. ಎಲ್ಲೆಡೆ ಪೊಲೀಸ್ ಭದ್ರತೆ ಒದಗಿಸಲಾಗಿದ್ದು, ನಿಯಮ ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇವೆ. ಶ್ರೀನಿವಾಸಗೌಡ ಎಸ್‌ಪಿ ಹಾಸನ
from India & World News in Kannada | VK Polls https://ift.tt/3851Iuh