ಶಿಕ್ಷಕರ ವಾಟ್ಸಾಪ್‌ ಗುಂಪಿಗೆ ಅಶ್ಲೀಲ ಚಿತ್ರ ಕಳಿಸಿದ ಶಿಕ್ಷಕ..! ಆತನಿಗೆ ನೀಡಿದ ಶಿಕ್ಷೆ ಏನು ಗೊತ್ತಾ?

: ಶಿಕ್ಷಕರ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಅಶ್ಲೀಲ ಫೋಟೋಗಳನ್ನು ಕಳಿಸಿದ ಶಿಕ್ಷಕನನ್ನು ಅಂಕೋಲಾ ತಾಲೂಕಿನ ಶಾಲೆಯೊಂದಕ್ಕೆ ಪನಿಶ್ಮೆಂಟ್‌ ಡೆಪ್ಯುಟೇಶನ್‌ ಮಾಡಲಾಗಿದೆ. ಪ್ರಕರಣ ಕುರಿತು ಡಿಡಿಪಿಐ ಮುಂದಿನ ವಿಚಾರಣೆ ಕೈಗೆತ್ತಿಕೊಂಡಿದ್ದಾರೆ. ಏನಿದು ಪ್ರಕರಣ:ತಾಲೂಕಿನ ಶಿಕ್ಷಕರ ‘ನಿಷ್ಠ’ ಎಂಬ ಐದು ವಾಟ್ಸ್‌ಆ್ಯಪ್‌ ಗ್ರೂಪ್‌ಗಳಿದ್ದು, ಪ್ರತಿ ಗ್ರೂಪ್‌ಗಳಲ್ಲೂ ನೂರಾರು ಶಿಕ್ಷಕರಿದ್ದಾರೆ. ಒಂದು ಗ್ರೂಪ್‌ನಲ್ಲಿಈ ಶಿಕ್ಷಕ ಸಹ ಇದ್ದರು. ಕೆಲ ದಿನಗಳ ಹಿಂದೆ ಈ ಶಿಕ್ಷಕ ವಾಟ್ಸ್‌ಆ್ಯಪ್‌ ಗ್ರೂಪ್‌ಗೆ ಅಶ್ಲೀಲ ಫೋಟೊಗಳನ್ನು ಪೋಸ್ಟ್‌ ಮಾಡಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಶಿಕ್ಷಕರು ಬಿಇಒ ಡಿ. ಆರ್‌. ನಾಯ್ಕ ಅವರಿಗೆ ಮಾಹಿತಿ ನೀಡಿದ್ದರು. ವಿಚಾರಣೆಗೊಳಪಡಿಸಿದ ನಾಯ್ಕ ಶಿಸ್ತು ಕ್ರಮಕ್ಕೆ ಡಿಡಿಪಿಐಗೆ ವರದಿ ಸಲ್ಲಿಸಿದ್ದರು. ಅರೋಪ ಮೇಲ್ನೋಟಕ್ಕೆ ಸಾಬೀತಾಗಿರುವ ಹಿನ್ನೆಲೆಯಲ್ಲಿ ಡಿಡಿಪಿಐ ವಿಚಾರಣೆ ಕಾಯ್ದಿರಿಸಿ ಪನಿಶ್ಮೆಂಟ್‌ ಡೆಪ್ಯುಟೇಶನ್‌ ಮಾಡಿ ಅದೇಶ ಹೊರಡಿಸಿದ್ದಾರೆ. ಶಾಲೆಯಿಂದ ರಿಲೀವ್‌: ನಂತರ ಬಿಇಒ ಡಿ.ಆರ್‌ ನಾಯ್ಕ ಶಾಲೆಗೆ ಭೇಟಿ ನೀಡಿ ಆರೋಪಿ ಶಿಕ್ಷಕರನ್ನು ರಿಲೀವ್‌ ಮಾಡಿರುವುದಾಗಿ 'ವಿಕ'ಕ್ಕೆ ಖಚಿತ ಪಡಿಸಿದ್ದಾರೆ. ತಪ್ಪು ಮುಚ್ಚಿಟ್ಟುಕೊಳ್ಳಲು ಮೊಬೈಲ್‌ ಕಳೆದಿದೆ ಎಂದಿದ್ದ ಶಿಕ್ಷಕ, ನಂತರ ಸಿಕ್ಕಿದೆ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಶಿಕ್ಷಕ ಮೊದಲು ತಾನು ಅಶ್ಲೀಲ ಫೋಟೊಗಳನ್ನು ಕಳಿಸಿಲ್ಲಎಂದು ಹೇಳಿದ್ದರು. ನಂತರ ತಪ್ಪು ಒಪ್ಪಿಕೊಂಡರು. ಎಲ್ಲವನ್ನೂ ಪರಿಶೀಲಿಸಿ ಶಿಸ್ತು ಕ್ರಮಕ್ಕೆ ಡಿಡಿಪಿಐ ಅವರಿಗೆ ಬರೆದಿದ್ದೇನೆ. ಡಿಡಿಪಿಐ ಅವರು ವಿಚಾರಣೆ ಕಾಯ್ದಿರಿಸಿ ಡೆಪ್ಯುಟೇಶನ್‌ ಮಾಡಿದ್ದಾರೆ ಎಂದು ಹೊನ್ನಾವರ ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ಆರ್‌. ನಾಯ್ಕ ತಿಳಿಸಿದ್ದಾರೆ.


from India & World News in Kannada | VK Polls https://ift.tt/3aLrW6N

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...