ಈ ನೆಲದ ನಂಬಿಕೆಗಳಿಗೆ ಅವಮಾನ ಮಾಡುವುದೇ ಜಾತ್ಯಾತೀತತೆ ಎಂದು ನಂಬಿದ್ದಾರೆ- ಸುರೇಶ್ ಕುಮಾರ್

ಬೆಂಗಳೂರು: ಈ ನೆಲದ ನಂಬಿಕೆಗಳಿಗೆ ಅವಮಾನ ಮಾಡುವುದೇ ಜಾತ್ಯಾತೀತತೆ ಎಂದು ನಂಬಿದ್ದಾರೆ ಈ ರೀತಿಯ ನಾಯಕರುಗಳು ಎನ್ನುವ ಮೂಲಕ ವಿಪಕ್ಷ ನಾಯಕ ವಿರುದ್ಧ ಶಿಕ್ಷಣ ಸಚಿವ ಕಿಡಿಕಾರಿದ್ಧಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ಸುರೇಶ್ ಕುಮಾರ್‌ ಸಿದ್ದರಾಮಯ್ಯ ಅವರ ಹೆಸರನ್ನು ಎಲ್ಲೂ ಪ್ರಸ್ತಾಪಿಸದೆ, ‘ಅಣ್ಣಾ, ಇವತ್ತು ’ ಎಂದು ನೆನಪಿಸಿದ ಗ್ರಾಮಸ್ಥನಿಗೆ, ‘ಯಾವ ಜಯಂತಿ? ಹನುಮ ಹುಟ್ಟಿದ ತಾರೀಕು ನಿನಗೆ ಗೊತ್ತಾ? ಏನೂ ಆಗಲ್ಲ ತಿನ್ನು. ಹನುಮ ಹುಟ್ಟಿದ ದಿನ ಗೊತ್ತಿದ್ದರೆ ಮಾಡಬೇಕು. ಗೊತ್ತಿಲ್ಲ ಅಲ್ವಾ? ಚಿಕನ್ ತಿನ್ನ’ ಎಂದು ತಮ್ಮದೇ ಧಾಟಿಯಲ್ಲಿ ಛೇಡಿಸಿದರಂತೆ ಈ ನಾಯಕರು. ಇದು ಅಗತ್ಯವಿತ್ತೇ? ಈ ನೆಲದ ನಂಬಿಕೆಗಳಿಗೆ ಅವಮಾನ ಮಾಡುವುದೇ ಜಾತ್ಯಾತೀತತೆ ಎಂದು ನಂಬಿದ್ದಾರೆ ಈ ರೀತಿಯ ನಾಯಕರುಗಳು. ಇವರಂತೆಯೆ ಮತ್ತೊಬ್ಬ ನಾಯಕರು ಈ ಹಿಂದೆ ‘ರಾಮನ birth certificate ಎಲ್ಲಿ’ ಎಂದು ಕೇಳಿದ್ದು ನೆನಪಿಗೆ ಬರುತ್ತಿದೆ. ಅದಕ್ಕಾಗಿಯೇ ಈ ನೆಲದ ನಂಬಿಕೆಗಳ ಬಗ್ಗೆ ಗೌರವ ಇರುವ ಅಸಂಖ್ಯಾತ ಜನತೆಯಿಂದ ದೂರ ಸರಿಯುತ್ತಿದ್ದಾರೆ ಎಂದು ಹೇಳಿದ್ದಾರೆ. ಭಾನುವಾರ ಗ್ರಾಮಪಂಚಾಯತ್ ಮತದಾನ ಮಾಡಿದ ಬಳಿಕ ಮೈಸೂರಿನ ಆಪ್ತರ ಮನೆಯಲ್ಲಿ ಬಾಡೂಟ ಸವಿಯುತ್ತಿದ್ದ ವೇಳೆ ಸಿದ್ದರಾಮಯ್ಯ ಅವರಿಗೆ ಬೆಂಬಲಿಗನೊಬ್ಬ ಇಂದು ಹನುಮ ಜಯಂತಿ ಎಂದು ನೆನಪಿಸಿದ್ದ. ಇದಕ್ಕೆ ಎಂದಿನಂತೆ ತಮ್ಮ ಶೈಲಿಯಲ್ಲಿ ಸಹಜವಾಗಿ ಉತ್ತರಿಸಿದ್ದ ಸಿದ್ದರಾಮಯ್ಯ, ಹನುಮ ಹುಟ್ಟಿದ ದಿನಾಂಕ ನಿನಗೆ ಗೊತ್ತಾ? ಏನಾಗಲ್ಲ ಚಿಕನ್ ತಿನ್ನು ಎಂದು ಉತ್ತರಿಸಿದ್ದರು. ಈ ವಿಚಾರ ಸುದ್ದಿಯಾಗ್ತಿದ್ದಂತೆ ಸಚಿವ ಸುರೇಶ್‌ ಕುಮಾರ್ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.


from India & World News in Kannada | VK Polls https://ift.tt/3nTnVB9

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...