ಅಕ್ರಮ ಸಂಬಂಧಕ್ಕಾಗಿ ಸುರಂಗ ಮಾರ್ಗ..! ವಿವಾಹಿತೆಯ ಮೋಹ ಪಾಶಕ್ಕೆ ಸಿಲುಕಿ ವಿವಾಹಿತನ ದುಸ್ಸಾಹಸ..!

ಪ್ರೀತಿ, ಪ್ರೇಮಕ್ಕಾಗಿ ಭಾರತದಲ್ಲಿ ತಾಜ್‌ಮಹಲ್ ಕಟ್ಟಿದ್ದಾರೆ.. ಆದ್ರೆ, ದೂರದ ಮೆಕ್ಸಿಕೋ ದೇಶದಲ್ಲಿ ಸುರಂಗವನ್ನೇ ಕೊರೆದಿದ್ದಾನೆ ಭೂಪ..! ಇದು ಪವಿತ್ರ ಪ್ರೀತಿಯೇನೂ ಅಲ್ಲ..! ಶುದ್ಧಾತಿಶುದ್ಧ ..! ಈ ಸಂಬಂಧ ಉಳಿಸಿಕೊಳ್ಳೋದಕ್ಕಾಗಿ ನೂರಾರು ಮೀಟರ್ ದೂರ ತೋಡಿದ ಮಹಾಶಯ, ಇದೀಗ ಖಾಕಿ ಅತಿಥಿಯಾಗಿದ್ದಾನೆ..! ಆತ , ಆಕೆಯೂ .. ಇಬ್ಬರೂ ಅಕ್ಕಪಕ್ಕದ ಮನೆ ನಿವಾಸಿಗಳು.. ಇಬ್ಬರ ನಡುವೆ ಲವ್ವಿ ಡವ್ವಿ ಶುರುವಾಗಿತ್ತು. ಆಕೆಯ ಗಂಡನೋ ಸೆಕ್ಯುರಿಟಿ ಗಾರ್ಡ್.. ನೈಟ್‌ ಡ್ಯೂಟಿ ಮಾಮೂಲು..! ಹೀಗಾಗಿ, ಗಂಡ ನೈಟ್ ಡ್ಯೂಟಿ ಇದ್ದಾಗ ಹೆಂಡ್ತಿಗೆ ಪ್ರಿಯಕರನೇ ಆಸರೆಯಾಗಿದ್ದ..! ಇನ್ನು ಈ ಪ್ರಿಯಕರನೂ ತನ್ನ ಹೆಂಡತಿಯ ಕಣ್ತಿಪ್ಪಿಸಿ ಈಕೆಯ ಮನೆಗೆ ಬರಬೇಕು..! ಹೇಗೆ ಬರೋದು..? ಇದಕ್ಕಾಗಿ ಒಂದು ಸೂಪರ್ ಸುಪ್ರೀಂ ಐಡಿಯಾ ಮಾಡಿದ..! ತನ್ನ ಮನೆಯ ಬೆಡ್‌ ರೂಂನಿಂದ ತನ್ನ ಪ್ರೇಯಸಿಯ ಮನೆಯ ಬೆಡ್‌ ರೂಂಗೆ ಸುರಂಗವನ್ನೇ ತೋಡಿಬಿಟ್ಟ..! ನೂರಾರು ಮೀಟರ್ ದೂರದ ಸುರಂಗವದು..! ಈ ಸುರಂಗದ ಮೂಲಕ ತಮ್ಮ ‘ಸುರಂಗ ಸಂಬಂಧ’ವನ್ನು ವರ್ಷಗಳ ಕಾಲ ಅಡೆತಡೆ ಇಲ್ಲದೆ ಮುಂದುವರೆಸಿತ್ತು ಈ ಜೋಡಿ..! ಆದ್ರೆ, ಅದೊಂದು ದಿನ ಈ ಅಕ್ರಮ ಸಂಬಂಧಕ್ಕೆ ಅಂತ್ಯ ಹಾಡುವ ಕಾಲ ಎದುರಾಗಿತ್ತು..! ಸೆಕ್ಯುರಿಟಿ ಗಾರ್ಡ್‌ ಗಂಡ ಹೇಳದೆ ಕೇಳದೆ ಬಹುಬೇಗ ಮನೆಗೆ ಬಂದಿದ್ದ. ಮನೆಯಲ್ಲಿ ತನ್ನ ಹೆಂಡತಿ ಯಾರದೋ ಜೊತೆಗೆ ಇದ್ದಾಳೆ ಎಂದು ಅನುಮಾನ ಬಂದಿದ್ದೇ ತಡ ಹುಡುಕಾಟ ಆರಂಭಿಸಿದ. ನೋಡಿದರೆ ಸೋಫಾದ ಹಿಂದೆ ಏನೋ ಇರುವಂತೆ ಕಂಡು ಬಂತು.. ಸೋಫಾ ಸರಿಸಿ ನೋಡಿದರೆ ಅಲ್ಲಿ ಸುರಂಗವೇ ಇತ್ತು..! ಸುರಂಗದ ಒಳಗೆ ಇಳಿದು ಮುಂದೆ ಸಾಗಿ ನೋಡಿದರೆ ಅದು ಪಕ್ಕದ ಮನೆಯ ಬೆಡ್‌ ರೂಂಗೆ ಸಂಪರ್ಕ ಕಲ್ಪಿಸಿತ್ತು..! ಗಂಡನಿಗೆ ಎಲ್ಲವೂ ಅರ್ಥವಾಗಿತ್ತು..! ದೊಡ್ಡ ಜಗಳವೇ ಆಗಿ ಹೋಯ್ತು..! ಪೊಲೀಸರ ರಂಗ ಪ್ರವೇಶವಾಯ್ತು..! ಅಂದಹಾಗೆ ಈ ಘಟನೆ ನಡೆದಿರೋದು ಮೆಕ್ಸಿಕೋ ದೇಶದಲ್ಲಿ.. ಅಮೆರಿಕ ಖಂಡದ ಮೆಕ್ಸಿಕೋ ದೇಶದಲ್ಲಿ ಇರುವ ಆಲ್ಬರ್ಟೋ ಎಂಬಾತನೇ ಸುರಂಗ ತೋಡಿದಾತ..! ಇನ್ನು ಈ ಆಲ್ಬರ್ಟೋಗೆ ಪಾಠ ಕಲಿಸಿದ ಪತಿರಾಯನ ಹೆಸರು ಜಾರ್ಜ್‌.. ಈ ಜಾರ್ಜ್‌ ಎಂಬಾತ ಎಂಥಾ ನತದೃಷ್ಟ ಎಂದರೆ, ಮೆಕ್ಸಿಕೋ ದೇಶಕ್ಕೆ ಬರುವ ಮುನ್ನ ಈತ ತನ್ನ ಪತ್ನಿ ಜೊತೆ ಪೆರು ದೇಶದಲ್ಲಿದ್ದ. ಅಲ್ಲಿ ಒಮ್ಮೆ ಈತ ಗೂಗಲ್ ಮ್ಯಾಪ್ ಬಳಸುವಾಗ ತಾಂತ್ರಿಕ ಸಮಸ್ಯೆ ಎದುರಾಯ್ತು. ಹೀಗಾಗಿ, ಗೂಗಲ್ ಸ್ಟ್ರೀಟ್ ವ್ಯೂನಲ್ಲಿ ದಾರಿ ನೋಡಿಕೊಂಡು ಬರುತ್ತಿದ್ದ. ಈ ವೇಳೆ ಗೂಗಲ್ ಸ್ಟೀಟ್ ವ್ಯೂನಲ್ಲಿ ಮಹಿಳೆಯೊಬ್ಬರು ತನ್ನ ಪ್ರಿಯಕರನ ಜೊತೆ ಕುಳಿತಿರುವ ಫೋಟೋ ಇತ್ತು.. ಕುತೂಹಲಗೊಂಡು ಆ ಫೋಟೋವನ್ನು ಝೂಮ್ ಮಾಡಿ ನೋಡಿದರೆ ಅದು ಇನ್ಯಾರೂ ಅಲ್ಲ..! ಈತನ ಪತ್ನಿ..! ತನ್ನ ಪತ್ನಿಯ ಅಕ್ರಮ ಸಂಬಂಧವನ್ನು ತಂತ್ರಜ್ಞಾನದ ಮೂಲಕ ಬಯಲಿಗೆಳೆದು ಆ ದೇಶವೇ ಬೇಡ ಎಂದು ಗುಡ್‌ ಬೈ ಹೇಳಿ ಪಕ್ಕದ ಮೆಕ್ಸಿಕೋ ದೇಶಕ್ಕೆ ಬಂದರೆ, ಇಲ್ಲಿ ಈತನ ಪತ್ನಿ ಮತ್ತೊಬ್ಬನ ಜೊತೆ ‘ಸುರಂಗ ಸಂಬಂಧ’ ಬೆಳೆಸಿ ಸಿಕ್ಕಿಬಿದ್ದಿದ್ದಾಳೆ..! ಇದಕ್ಕೆ ಏನೆನ್ನಬೇಕು..!?


from India & World News in Kannada | VK Polls https://ift.tt/38LPPZn

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...