ಬೊಮ್ಮೇಕಲ್ಲು ವೆಂಕಟೇಶ ಚಿಂತಾಮಣಿ: ಹಲವು ವ್ಯಾಪಾರ ಆರಂಭಿಸಿ ಕೈಸುಟ್ಟುಕೊಂಡು ಕೊನೆಗೆ ಜೀವನದಲ್ಲಿಜಿಗುಪ್ಸೆಗೊಂಡುಆಶ್ರಮ ಸೇರಿದ್ದ ಎಂಜಿನಿಯರಿಂಗ್ ಪದವೀಧರ ಯುವಕ, ಮನಸು ಬದಲಿಸಿ ಸ್ವಗ್ರಾಮಕ್ಕೆ ಬಂದು ಕಡಕ್ನಾಥ್ ಕೋಳಿ ಸಾಕಣಿಕೆ ಮುಂದಾಗಿದ್ದು, ದೇಶ ವಿದೇಶಗಳಿಂದ ಕೋಳಿಗಳ ವಿವಿಧ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿ, ಲಾಭ ತರುವ ಮೂಲಕ ಭರವಸೆ ಮೂಡಿಸಿದೆ. ತಾಲೂಕಿನಲ್ಲಿಫ್ರೆಂಡ್ಸ್ ಹೆಸರಿನಲ್ಲಿಟ್ರಾ ವೆಲ್ಸ್, ಚಿಟ್ಪಂಡ್ ಹಾಗೂ ಫೈನಾನ್ಸ್ ವ್ಯವಹಾರ ಕ್ಷೇತ್ರದಲ್ಲಿಅತ್ಯುತ್ತಮ ಹೆಸರು ಮಾಡಿದ್ದ ವಿಜಯ್ ಕುಮಾರ್ ಕುಟುಂಬ ಕಾರಣಾಂತರದಿಂದ ನಷ್ಟ ಅನುಭವಿಸಿ, ಬೇರೆ ದಾರಿ ಕಾಣದದೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ಆಶ್ರಮ ಸೇರಿದ್ದರು. ಕೊನೆಗೂ ಯಾವುದಾದರೂ ಒಂದು ಸಾಧನೆ ಮಾಡಬೇಕು ಎಂದು ನಿರ್ಧರಿಸಿ ವಿಜಯವಾಡದಿಂದ ವಾಪಸ್ ಸ್ವಗ್ರಾಮವಾದ ಕಾಗತಿ ಗ್ರಾಪಂನ ಬಚ್ಚವಾರಹಳ್ಳಿ ಗ್ರಾಮಕ್ಕೆ ಬಂದು, ಸ್ವಂತ ಜಮೀನಿನಲ್ಲಿ ಕಡಕ್ನಾಥ್ ನಾಟಿ ಕೋಳಿಗಳ ಸಾಕಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಎಂಜಿನಿಯರಿಂಗ್ ಪದವೀಧ! ವಿಜಯ್ಕುಮಾರ್ ಎಂಜಿನಿಯರಿಂಗ್ ಪದವಿ ಪಡೆದಿದ್ದು, ಅವರ ತಂದೆ ವಿವಿಧ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಬೇರೆಡೆ ಉದ್ಯೋಗಕ್ಕೆ ಹೋಗದೆ ತಂದೆಗೆ ಕೈಜೋಡಿಸಿದ್ದರು. ಆದರೆ ಹಲವು ಏಳುಬೀಳುಗಳಿಂದಾಗಿ ವ್ಯವಹಾರಳಲ್ಲಿ ಲಾಸ್ ಆಗಿ ದಿಕ್ಕು ತೋಚದೆ ಆಶ್ರಮ ಸೇರಿದ್ದರು. ನಂತರ ಮನಸು ಬದಲಿಸಿ, ಗ್ರಾಮದಲ್ಲಿಪ್ರಾರಂಭಿಸಿರುವ ಫ್ರೆಂಡ್ಸ್ ಆರ್ಗಾನಿಕ್ ನಾಟಿ ಕೋಳಿ ಫಾರಂ ಅವರ ಕೈಹಿಡಿದಿದೆ. ರಾಜ್ಯದಲ್ಲೇ ಮೊದಲು! ಇನ್ನು ರಾಜ್ಯದಲ್ಲಿಯೇ ಮೊದಲ ಬಾರಿಗೆ ಮಧ್ಯ ಪ್ರದೇಶದಿಂದ ಕಡಕ್ನಾಥ್ ಕೋಳಿಗಳನ್ನು ತಂದು ಇಲ್ಲಿ ಸಾಕಣಿಕೆ ಮಾಡುತ್ತಿದ್ದಾರೆ. 15 ಸಾವಿರ ನಾಟಿ ಕೋಳಿಗಳನ್ನು ತಂದು ಸಾಕಣಿಕೆ ಮಾಡುತ್ತಿರುವ ವಿಜಯ್ ಕುಮಾರ್ ಕೋಳಿ ಸಾಕಣಿಕೆಯ ಕುರಿತು ವಿದೇಶಗಳಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಆರೋಗ್ಯಕ್ಕೆ ಹೆಚ್ಚು ಅವಶ್ಯಕ! ಇನ್ನು ಕಡಕ್ ನಾಥ್ ಕೋಳಿಯ ಮಾಂಸಕ್ಕೆ ಹೆಚ್ಚು ಬೇಡಿಕೆ ಇದ್ದು, ಈ ಮಾಂಸವು ಹೆಚ್ಚು ಔಷಧೀಯ ಗುಣ ಹೊಂದಿದೆ ಎಂಬುದು ವಿಶೇಷ. ಕೊಬ್ಬು ಕಡಿಮೆ ಇರುವ ಈ ಕೋಳಿಯ ಮಾಂಸ ಆರೋಗ್ಯಕ್ಕೆ ಬೇಕಾದ ಔಷಧೀಯ ಗುಣ ಹೊಂದಿದ್ದು, ನರದೌರ್ಬಲ್ಯ, ಬಿಪಿ, ಹೃದಯ ಸಂಬಂಧಿ ಕಾಯಿಲೆ, ಪಾಶ್ರ್ವವಾಯು, ಶುಗರ್ಗೆ ಉತ್ತಮ ಆಹಾರವಾಗಿದೆ. ಈ ಕೋಳಿಗಳನ್ನು ಮಾಂಸ ಹಾಗೂ ಮೊಟ್ಟೆಗಳಿಗೆ ಸಾಕಣಿಕೆ ಮಾಡುತ್ತಿದ್ದು,
from India & World News in Kannada | VK Polls https://ift.tt/351RJnH