ಆತೀಶ್ ಬಿ. ಕನ್ನಾಳೆ ಶಿವಮೊಗ್ಗ: ಮಲೆನಾಡಿನಲ್ಲಿ ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯ ಪ್ರವಾಸಿ ಮಂದಿರಗಳಲ್ಲಿ ಸಾರ್ವಜನಿಕರ ಪ್ರವೇಶವನ್ನೇ ನಿರ್ಬಂಧಿಸಲಾಗಿದೆ. ಹೀಗಾಗಿ, ಕಳೆದ ವರ್ಷ ಜೋಗವೊಂದಕ್ಕೇ ಡಿ.31ರಂದು 2625 ಜನ ಆಗಮಿಸಿದ್ದರು. ಅದರಿಂದ ಪ್ರವಾಸಿ ಮಂದಿರಕ್ಕೆ 46,970 ಆದಾಯ ಬಂದಿತ್ತು. 2020ರ ಜನವರಿ 1ರಂದು 4574 ಪ್ರವಾಸಿಗರು ಬಂದಿದ್ದು, 74,200 ರೂ. ಆದಾಯವಾಗಿತ್ತು. ಈ ಸಲ ಕೋವಿಡ್ನಿಂದಾಗಿ ಬರಬೇಕಿದ್ದ ಆದಾಯ ಮತ್ತು ಹೊಸ ವರ್ಷಾಚರಣೆಯ ಖುಷಿ ಎರಡೂ ಮಾಯವಾಗಿದೆ. ಮಲೆನಾಡಿನ ಸುಂದರ ಪ್ರಕೃತಿಯ ಮಧ್ಯೆ ಹೊಸ ವರ್ಷ ಆರಂಭಿಸಬೇಕೆಂಬ ಕಾರಣದಿಂದ ಬೆಂಗಳೂರು ಸೇರಿದಂತೆ ರಾಜ್ಯ, ಹೊರ ರಾಜ್ಯಗಳಿಂದ ಜನ ಆಗಮಿಸುತ್ತಿದ್ದರು. ನವೆಂಬರ್ನಿಂದಲೇ ರೆಸಾರ್ಟ್, ಹೋಂ ಸ್ಟೇಗಳಿಗೆ ಬುಕಿಂಗ್ ಆರಂಭವಾಗುತ್ತಿತ್ತು. ಕೊಠಡಿಗಳೇ ಸಿಗದ ಸ್ಥಿತಿ ಸಹ ನಿರ್ಮಾಣವಾಗುತ್ತಿತ್ತು. ಈ ಸಲ ಪರಿಸ್ಥಿತಿ ಭಿನ್ನವಾಗಿದೆ. ಹೋಂ ಸ್ಟೇಗಳಿಗೆ ನಿರೀಕ್ಷಿತ ಮಟ್ಟದಲ್ಲಿ ಬೇಡಿಕೆ ಇಲ್ಲ. ಆದರೆ, ಕೊರೊನಾ ಸಂದರ್ಭಕ್ಕೆ ಹೋಲಿಸಿದರೆ ಪರಿಸ್ಥಿತಿ ಸ್ವಲ್ಪ ಚೇತರಿಕೆ ಕಂಡಿದೆ. ಕೊರೊನಾ ಸೋಂಕಿನಿಂದಾಗಿ ಇಡೀ ಮಳೆಗಾಲ ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಉದ್ಯಮಗಳು ಕಮರಿವೆ. ನವೆಂಬರ್ನಿಂದ ಅಲ್ಪಮಟ್ಟಿಗೆ ಸುಧಾರಣೆ ಕಂಡಿದ್ದು, ಹೋಂ ಸ್ಟೇಗಳಲ್ಲಿ ತಂಗುವುದಕ್ಕಾಗಿ ಕೇಳಿಕೊಂಡು ಪ್ರವಾಸಿಗರಿಂದ ಫೋನ್ಗಳು ಬರುತ್ತಿವೆ ಎನ್ನುತ್ತಾರೆ ಫಾರ್ಮ್ ಸ್ಟೇ ಮಾಲೀಕರೊಬ್ಬರು. ಸ್ಥಳೀಯರು ತೋಟಗಳತ್ತ ಕೊರೊನಾ ಮಾರ್ಗಸೂಚಿ ಅಡಿಯಲ್ಲಿಯೇ ಹೊಸ ವರ್ಷಾಚರಣೆ ಮಾಡಬೇಕೆಂದು ಸರಕಾರ ನಿಯಮಗಳನ್ನು ಹೇರಿದೆ. ಹೀಗಾಗಿ, ಡಿಸೆಂಬರ್ 31ರಂದೇ ಬೆಟ್ಟ, ಗುಡ್ಡಗಳತ್ತ ಧಾವಿಸುತ್ತಿದ್ದ ಮತ್ತು ಪಾರ್ಟಿ ಮೂಡ್ನಲ್ಲಿಇರುತ್ತಿದ್ದವರು ತೋಟಗಳತ್ತ ಧಾವಿಸುತ್ತಿದ್ದಾರೆ. ಒಟ್ಟಾರೆ ಹೊಸ ವರ್ಷಾಚರಣೆಯ ಖುಷಿಗೆ ಕೊರೊನಾ ಮಂಕು ಕವಿಯುವಂತೆ ಮಾಡಿದೆ. ಕಳೆದ ಸಲದ ಹೊಸ ವರ್ಷಾಚರಣೆಗೆ ಹೋಲಿಸಿದ್ದಲ್ಲಿ ಪ್ರವಾಸಿಗರ ಸಂಖ್ಯೆ ಕಡಿಮೆ ಇದೆ. ಆದರೆ, ಕೊರೊನಾ ಸಂದರ್ಭಕ್ಕೆ ಹೋಲಿಸಿದರೆ ಈಗ ಜನ ಬರುತ್ತಿದ್ದಾರೆ. ನವೆಂಬರ್ನಿಂದಲೇ ಹೋಂ ಸ್ಟೇಗಳಿಗೆ ಪ್ರವಾಸಿಗಳು ಬರಲಾರಂಭಿಸಿದ್ದಾರೆ. ಕೊರೊನಾದಿಂದಾಗಿ ಸರಕಾರ ಎಲ್ಲ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಲಾಗುತ್ತಿದೆ. ಥರ್ಮಲ್ ಸ್ಕ್ರೀನಿಂಗ್, ಒಕ್ಸಿ ಮೀಟರ್ ಮತ್ತು ಸ್ಯಾನಿಟೈಸರ್ ಇಡಲಾಗಿದೆ. ವಿಕ್ರಮ್ ಆರ್.ಉಡುಪ, ಮಾಲೀಕರು, ಬರೇಕಲ್ ಫಾರ್ಮ್ ಸ್ಟೇ ಕೊರೊನಾ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಇಲಾಖೆ ವ್ಯಾಪ್ತಿಯ ಪ್ರವಾಸಿ ಮಂದಿರಗಳಲ್ಲಿ ಹೊಸ ವರ್ಷಾಚರಣೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಎಚ್.ಎಸ್.ರಾಮಕೃಷ್ಣ, ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ
from India & World News in Kannada | VK Polls https://ift.tt/3rHgBux