ಹುಬ್ಬಳ್ಳಿ: ಇಂದು ರಾಜ್ಯದಲ್ಲಿ ಗ್ರಾಮ ಪಂಚಾಯತ್ ಚುನಾವಣೆಗೆ ಎರಡನೇ ಹಂತದ ನಡೆಯುತ್ತಿದ್ದು, ಉಮಚಗಿ ಗ್ರಾಮ ಪಂಚಾಯಿತಿಯ ಮಲ್ಲಿಗವಾಡದಲ್ಲಿ ಮತದಾನ ಬಹಿಷ್ಕರಿಸಲಾಗಿದೆ. ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಕ್ಕಾಗಿ ಒತ್ತಾಯಿಸಿ ಮಲ್ಲಿಗವಾಡದಲ್ಲಿ ಮತದಾನ ಬಹಿಷ್ಕಾರ ನಡೆದಿದೆ. ಇದೀಗ ಮತದಾನ ಆಗಬೇಕಿದ್ದ ಶಾಲೆಯ ಮೈದಾನದಲ್ಲಿ ಬಾಲಕರು ಕ್ರಿಕೆಟ್ ಆಡುವ ದೃಶ್ಯ ಕಂಡುಬಂದಿದೆ. ಪಂಚಾಯಿತಿ ಮತದಾನ ಬಹಿಷ್ಕರಿಸಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಲ್ಲಿಗವಾಡದಲ್ಲಿ 9 ಗ್ರಾಪಂ ಸದಸ್ಯ ಸ್ಥಾನವಿದ್ದು ಒಟ್ಟಾರೆ 23 ನಾಮಪತ್ರ ಸಲ್ಲಿಕೆಯಾಗಿತ್ತು. ಉಮೇದುವಾರಿಕೆ ಹಿಂಪಡೆವ ಕೊನೆ ದಿನ ಡಿ. 19ರಂದು ಎಲ್ಲರೂ ನಾಮಪತ್ರ ಹಿಂಪಡೆದು ಬಹಿಷ್ಕಾರ ಬೆಂಬಲಿಸಿದ್ದಾರೆ.
from India & World News in Kannada | VK Polls https://ift.tt/3hlrCNd