ನಾನೇ ಫುಲ್‌ಟೈಮ್‌ ಸಿಎಂ: ನಾಯಕತ್ವ ಗೊಂದಲ ಸೃಷ್ಟಿಸುತ್ತಿದ್ದವರಿಗೆ ಯಡಿಯೂರಪ್ಪ ಖಡಕ್‌ ಸಂದೇಶ

ಬೆಂಗಳೂರು: ಮುಂದಿನ ಎರಡೂವರೆ ವರ್ಷ ತಾವೇ ಸಿಎಂ ಎಂದು ಹೇಳಿರುವ ಬಿ.ಎಸ್‌.ಯಡಿಯೂರಪ್ಪ ಅವರು ನಾಯಕತ್ವದ ಬಗ್ಗೆ ಗೊಂದಲ ಎಬ್ಬಿಸುತ್ತಿರುವವರಿಗೆ ಖಡಕ್‌ ಸಂದೇಶ ರವಾನಿಸಿದ್ದಾರೆ. ತಮ್ಮ ಸಿಎಂ ಸ್ಥಾನ ಭದ್ರ ಎನ್ನುವುದಕ್ಕೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಅವರ ಹೇಳಿಕೆಯನ್ನೇ ಸಮರ್ಥನೆಯಾಗಿ ಯಡಿಯೂರಪ್ಪ ಬಳಸಿಕೊಂಡಿದ್ದಾರೆ. ಈ ಮೂಲಕ ಹೈಕಮಾಂಡ್‌ ಬೆಂಬಲ ತಮಗಿದೆ ಎಂಬ ಸಂದೇಶವೂ ರವಾನೆಯಾಗುವಂತೆ ನೋಡಿಕೊಂಡಿದ್ದಾರೆ. ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿ ವೇಳೆ ಈ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ''ಅರುಣ್‌ ಸಿಂಗ್‌ ಈಗಾಗಲೇ ಸ್ಪಷ್ಟ ಪಡಿಸಿರುವಂತೆ ಮುಂದಿನ ಎರಡೂವರೆ ವರ್ಷ ನಾನೇ ಸಿಎಂ ಆಗಿರುತ್ತೇನೆ. ಅಭಿವೃದ್ಧಿಯಲ್ಲಿ ರಾಜ್ಯವನ್ನು ಪ್ರಥಮ ಸ್ಥಾನಕ್ಕೆ ತರುವುದೇ ನನ್ನ ಗುರಿ. ಒಂದಿಬ್ಬರು ಶಾಸಕರು ಹೇಳಿಕೆ ನೀಡಿದರೂ ಅದು ನನ್ನ ಮೇಲೆ ಪರಿಣಾಮ ಬೀರದು. ಸಚಿವ ಸಂಪುಟದ ಸದಸ್ಯರೆಲ್ಲರೂ ಸೇರಿ ರಾಜ್ಯದ ಅಭಿವೃದ್ಧಿಯತ್ತ ಲಕ್ಷ್ಯ ಹರಿಸಿದ್ದೇವೆ,'' ಎಂದು ಸ್ಪಷ್ಟ ಪಡಿಸಿದರು. ಈ ವೇಳೆ ಡಿಸಿಎಂಗಳಾದ ಗೋವಿಂದ ಕಾರಜೋಳ, ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಸಚಿವರಾದ ಆರ್‌.ಅಶೋಕ್‌, ಬಸವರಾಜ ಬೊಮ್ಮಾಯಿ, ಎಸ್‌.ಸುರೇಶ್‌ ಕುಮಾರ್‌ ಅವರೂ ಜತೆಗಿದ್ದರು. ''ನಾಯಕತ್ವದ ವಿಚಾರದಲ್ಲಿ ಪಕ್ಷ ಅಥವಾ ಸರಕಾರದಲ್ಲಿ ಯಾವುದೇ ಗೊಂದಲವಿಲ್ಲ. ಎರಡೂವರೆ ವರ್ಷ ಯಡಿಯೂರಪ್ಪ ಅವರೇ ಸಿಎಂ ಆಗಿರುತ್ತಾರೆ ಎಂದು ಅರುಣ್‌ ಸಿಂಗ್‌ ಸ್ಪಷ್ಟ ಪಡಿಸಿದ್ದರಿಂದ ನಾಯಕತ್ವ ಬದಲಾವಣೆ ಪ್ರಶ್ನೆ ಉದ್ಭವಿಸದು. ನಮ್ಮ ಶಾಸಕರೊಂದಿಗೂ ವಿಭಾಗವಾರು ಸಭೆ ನಡೆಸುತ್ತಿದ್ದೇನೆ,'' ಎಂದು ಹೇಳಿದರು. ನಾಯಕತ್ವದ ಬಗ್ಗೆ ಪದೇ ಪದೆ ಗೊಂದಲವಾದದ್ದು ನಿಜ. ಆದರೆ, ಅರುಣ್‌ ಸಿಂಗ್‌ ಉಸ್ತುವಾರಿಯಾದ ಬಳಿಕ ಇದಕ್ಕೆ ತೆರೆಯೆಳೆದಿದ್ದರು. ಯಡಿಯೂರಪ್ಪ ನಾಯಕತ್ವ ಮತ್ತು ಆಡಳಿತದ ಬಗ್ಗೆಯೂ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅದರ ಆಧಾರದಲ್ಲಿಯೇ ಈಗ ತಮ್ಮ ನಾಯಕತ್ವ ಅಬಾಧಿತವೆಂದು ಸಂದೇಶ ರವಾನಿಸಿರುವ ಸಿಎಂ, ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಕಾರ್ಯಕ್ಕೂ ಕೈಹಾಕಿದ್ದಾರೆ. ಇದರ ಭಾಗವಾಗಿ ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳಲ್ಲಿ ಕೆಲವರನ್ನು ವರ್ಗಾಯಿಸಲಾಗಿದೆ. ಜತೆಗೆ ದೊಡ್ಡ ಮಟ್ಟದಲ್ಲಿ ಬಡ್ತಿ ಪ್ರದಾನ ಪ್ರಕ್ರಿಯೆಯೂ ನಡೆದಿದೆ.


from India & World News in Kannada | VK Polls https://ift.tt/2WZrmdt

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...