ದಾವಣಗೆರೆ: ಕೌಟುಂಬಿಕ ಕಲಹಕ್ಕೆ ಸಂಬಂಧಿಸಿದಂತೆ ವಿಚಾರಣೆಗೆಂದು ಮಾಯಕೊಂಡ ಪೊಲೀಸ್ ಠಾಣೆಗೆ ಹಾಜರಾಗಿದ್ದ ವಿಠಲಾಪುರ ಗ್ರಾಮದ ಮರುಳಸಿದ್ದಪ್ಪ ಅವರ ಕಸ್ಟೋಡಿಯನ್ ಡೆತ್‌ಗೆ ಸಂಬಂಧಿಸಿದಂತೆ ಮೂವರು ಪೊಲೀಸರ ಮೇಲೆ ಸಿಐಡಿ ತಂಡ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದೆ. ಕಳೆದ ಅಕ್ಟೋಬರ್ 6ರಂದು ವಿಠಲಾಪುರದ ಮರುಳಸಿದ್ದಪ್ಪ ಎಂಬುವರ ಶವ ಮಾಯಕೊಂಡ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿತ್ತು. ಅಲ್ಲದೇ ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶಗೊಂಡ ಕಾರಣ ಪ್ರಕರಣವನ್ನು ಸಿಐಡಿ ಡಿಎಸ್ಪಿ ಗಿರೀಶ್ ತಂಡಕ್ಕೆ ವಹಿಸಲಾಗಿತ್ತು. ತನಿಖೆ ನಡೆಸಿದ ಸಿಐಡಿ ತಂಡ ಅಂತಿಮವಾಗಿ ಪೊಲೀಸರ ವಿರುದ್ಧ ಕಳೆದ ವಾರ ಜಿಲ್ಲಾ ಸೆಷನ್ಸ್ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ. ಮಾಯಕೊಂಡ ಠಾಣೆ ಸಬ್‌ಇನ್ಸ್‌ಪೆಕ್ಟರ್, ಹೆಡ್ ಕಾನ್ಸಟೇಬಲ್ ಹಾಗೂ ಕಾನ್ಸ್‌ಟೇಬಲ್‌ಗಳ ಹೆಸರು ದೋಷಾರೋಪಣಾ ಪಟ್ಟಿಯಲ್ಲಿ ಸೇರಿಸಲಾಗಿದೆ. ಮರಳುಸಿದ್ದಪ್ಪ ಆತ್ಮಹತ್ಯೆಗೆ ಪೊಲೀಸರ ನಿರ್ಲಕ್ಷವೇ ಕಾರಣವಾಗಿದೆ. ಅನಧಿಕೃತವಾಗಿ ಆತನನ್ನು ಠಾಣೆಗೆ ಕರೆತಂದು ವಿಚಾರಣೆಗೆ ಗುರಿಪಡಿಸಿ ಠಾಣೆಯಲ್ಲಿಇರಿಸಿಕೊಂಡಿರುವುದು. ಮರುಳ ಸಿದ್ದಪ್ಪ ಆತ್ಮಹತ್ಯೆಯ ನಂತರ ಶವವನ್ನು ಠಾಣೆಯಿಂದ ಕೊಂಡೊಯ್ದು ಬಸ್ ನಿಲ್ದಾಣದಲ್ಲಿಹಾಕಿರುವುದು. ಸಿಸಿಟಿವಿ ಕ್ಯಾಮೆರಾ ಪ್ಯೂಟೇಜ್‌ಗಳನ್ನು ಪರಿಶೀಲಿಸಿ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ ಎಂದು ಸಿಐಡಿ ಮೂಲ ತಿಳಿಸಿವೆ. ಹಲ್ಲೆಯಿಂದ ಸಾವಲ್ಲ, ಆತ್ಮಹತ್ಯೆ: ಮರುಳಸಿದ್ದಪ್ಪ ಅವರ ಸಾವು ಪೊಲೀಸರ ಹಲ್ಲೆಯಿಂದ ಆಗಿಲ್ಲ. ಬದಲಿಗೆ ಆತ್ಮಹತ್ಯೆಯಿಂದ ಆಗಿದೆ ಎನ್ನುವುದು ಆತನ ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ.
from India & World News in Kannada | VK Polls https://ift.tt/3n1FzkZ