ಬೆಳಗಾವಿ: ಬದಲಾದ ಹಿನ್ನೆಲೆಯಲ್ಲಿ ರಾಮದುರ್ಗ ತಾಲೂಕು ಕದಾಂಪೂರ ಗ್ರಾಮ ಪಂಚಾಯತಿ 6ನೇ ವಾರ್ಡಿನ ಮತದಾನವನ್ನು ಡಿ.29ಕ್ಕೆ ಮುಂದೂಡಲಾಗಿದೆ. ಒಟ್ಟು 910 ಮತದಾರರಿದ್ದು, ಮೂರು ಸ್ಥಾನಕ್ಕೆ 11 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಬೆಳಗ್ಗೆ 8 ಗಂಟೆಗೆ 14 ಮತದಾರರು ಮತ ಚಲಾಯಿಸಿದ್ದರು. ಚಿಹ್ನೆ ಬದಲಾಗಿರುವುದು ಗಮನಕ್ಕೆ ಬಂದ ಕೂಡಲೇ ಹಾಗೂ ಅವರ ಬೆಂಬಲಿಗರು ಚುನಾವಣೆ ಮುಂದೂಡಬೇಕೆಂದು ಪಟ್ಟುಹಿಡಿದರು. ತಕ್ಷಣದಲ್ಲಿ ಹೊಸ ಬ್ಯಾಲೆಟ್ ಮುದ್ರಿಸಿ ಬೆಳಗ್ಗೆ 10ಕ್ಕೆ ಪ್ರಾರಂಭಿಸಿ ಮತದಾನಕ್ಕೆ ಅವಕಾಶ ನೀಡುವುದಾಗಿ ತಹಸೀಲ್ದಾರ್ ಗಿರೀಶ ಸ್ವಾದಿ ಮನವರಿಕೆ ಮಾಡಿದರೂ ಪಟ್ಟು ಬಿಡದ ಅಭ್ಯರ್ಥಿ ಚುನಾವಣೆ ಮುಂದೂಡಬೇಕೆಂದು ಲಿಖಿತವಾಗಿ ಬರೆದುಕೊಟ್ಟಿದ್ದರಿಂದ ಅನಿವಾರ್ಯವಾಗಿ ಡಿ.29ಕ್ಕೆ ಮುಂದೂಡಲಾಗಿದೆ.
from India & World News in Kannada | VK Polls https://ift.tt/3mSvuqm