ಕೊಡಗು: ಮತ ಎಣಿಕೆ ಮಾಡುವ ವೇಳೆ ಮತ ಎಣಿಕೆ ಕೇಂದ್ರದಲ್ಲಿ ನೂಕು ನುಗ್ಗಲು ಉಂಟಾದ ಕಾರಣ ಗ್ರಾಮ ಪಂಚಾಯತ್ ಅಭ್ಯರ್ಥಿಯೊಬ್ಬರ ಕಾಲು ಮುರಿದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ನಡೆದಿದೆ. ಮತ ಎಣಿಕೆ ಕೇಂದ್ರದಲ್ಲಿ ಎಣಿಕೆ ಕೇಂದ್ರಕ್ಕೆ ತೆರಳಲು ಅವಕಾಶ ಕಲ್ಪಿಸಿಲ್ಲ ಎಂದು ಆರೋಪಿಸಿ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯ ವಿರುದ್ಧ ಅಭ್ಯರ್ಥಿಗಳು, ಏಜೆಂಟರುಗಳು ರೊಚ್ಚಿಗೆದ್ದಿದ್ದರು. ಈ ವೇಳೆ ಮುಖ್ಯದ್ವಾರದಲ್ಲಿ ಜನಜಂಗುಳಿ ಸೇರಿ ನೂಕುನುಗ್ಗಲು ಉಂಟಾಗಿತ್ತು. ಪೊಲೀಸ್ ದಬ್ಬಾಳಿಕೆ, ಜಿಲ್ಲಾಡಳಿತದ ವೈಫಲ್ಯ ಎಂದು ಅಭ್ಯರ್ಥಿಗಳು, ಎಜೆಂಟರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ನೂಕುನುಗ್ಗಲು ಜೋರಾಗಿದ್ದು, ನೂರಾರು ಮಂದಿಯ ಮಧ್ಯೆ ಸಿಲುಕಿದ ಹಿನ್ನೆಲೆ ಹೆಬ್ಬಾಲೆ ಕ್ಷೇತ್ರದ ಅಭ್ಯರ್ಥಿಯೊಬ್ಬರ ಕಾಲು ಮುರಿತಗೊಂಡಿದೆ. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಜನರು ಕೊರೊನಾ ನಿಯಮ ಪಾಲಿಸದೆ ಗುಂಪುಗುಂಪಾಗಿ ಸೇರಿದ್ದು, ವ್ಯವಸ್ಥೆ ಸರಿಪಡಿಸುವಂತೆ ಒತ್ತಾಯಿಸಿದ್ದಾರೆ.
from India & World News in Kannada | VK Polls https://ift.tt/38MKBg0