ಏಳು ಸುತ್ತಿನ ಕೋಟೆಯಲ್ಲಿ ಪ್ರತ್ಯಕ್ಷವಾಗಿ ಗ್ರಾಮಸ್ಥರ ನಿದ್ದೆಗೆಡಿಸಿದ ಜೋಡಿ ಕರಡಿ..!

ಕೊರಟಗೆರೆ: ಏಳುಸುತ್ತಿನ ಕೋಟೆ ಎಂದೇ ಪ್ರಸಿದ್ದಿ ಪಡೆದಿರುವ ಚನ್ನರಾಯನದುರ್ಗ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸೋಮವಾರ ತಡರಾತ್ರಿ ಕರಡಿಗಳು ಪ್ರತ್ಯಕ್ಷವಾಗಿವೆ. ಏಕಾಏಕಿ ಕರಡಿಗಳು ಪ್ರತ್ಯಕ್ಷವಾಗಿರೋದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದು, ಕೊರಟಗೆರೆಯಿಂದ ಸಿದ್ದರಬೆಟ್ಟ ಮಾರ್ಗವಾಗಿ ಚನ್ನರಾಯನದುರ್ಗ ಗ್ರಾಮಕ್ಕೆ ವಾಹನ ಸವಾರನೊಬ್ಬ ಸಂಚರಿಸುವ ವೇಳೆ ರಸ್ತೆಯಲ್ಲಿ ಆತನಿಗೆ ಕರಡಿಗಳು ಪ್ರತ್ಯಕ್ಷವಾಗಿದೆ.ಈ ವೇಳೆ ವಾಹನ ಸವಾರ ಕರಡಿಗಳು ತಿರುಗಾಡುತ್ತಿರುವ ದೃಶ್ಯವನ್ನು ತಮ್ಮ ಮೊಬೈಲ್‌ ಮೂಲಕ ಸೆರೆಹಿಡಿದಿದ್ದಾನೆ. ವಾಹನ ಸವಾರ ತನ್ನ ಕಣ್ಣಿಗೆ ಜೋಡಿ ಕರಡಿಗಳು ಕಾಣುತ್ತಿದ್ದಂತೆ ಆ ದೃಶ್ಯಯನ್ನು ತನ್ನ ಮೊಬೈಲ್‌ನಲ್ಲಿ ಸೆರೆಹಿಡಿದು ಕರಡಿಯನ್ನು ಹಿಂಬಾಲಿಸಿಕೊಂಡು ಹೋಗಿದ್ದಾನೆ. ವಾಹನದ ಶಬ್ದ ಮತ್ತು ಬೆಳಕಿಗೆ ಭಯಗೊಂಡ ಜೋಡಿಕರಡಿ ಭಯಬಿದ್ದವರಂತೆ ರಸ್ತೆಯುದ್ದಕ್ಕೂ ಓಡಿಕೊಂಡು ಹೋಗಿದೆ. ವಾಹನದ ಬೆಳಕಿಗೆ ಜೋಡಿ ಕರಡಿಗಳು ರಸ್ತೆಯಲ್ಲಿ ಚಲಿಸುತ್ತಿರುವ ದೃಶ್ಯ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಬೆಳಕು ಮರೆಯಾದ ಕೂಡಲೇ ಕರಡಿಗಳು ಕೂಡ ಮಾಯವಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ಚನ್ನರಾಯನದುರ್ಗ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕರಡಿ ಪ್ರತ್ಯಕ್ಷವಾಗಿರೋದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದ್ದು,ಮಕ್ಕಳನ್ನು ಮನೆಯಿಂದ ಹೊರಗೆ ಬಿಡೋಕೆ ಊರವರು ಹೆದರುತ್ತಿದ್ದಾರೆ.


from India & World News in Kannada | VK Polls https://ift.tt/3nRJ3aK

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...