ಲೋಕಲ್ ಫೈಟ್ ಎಂದೇ ಜನಜನಿತವಗಿರುವ ಕರ್ನಾಟಕ ಗ್ರಾಮ ಪಂಚಾಯಿತಿ ಚುನಾವಣೆಗೆ ಇಂದು(ಡಿ.27-ಭಾನುವಾರ) ಎರಡನೇ ಹಂತದ ಮತದಾನ ನಡೆಯುತ್ತಿದೆ. ರಾಜ್ಯದ 109 ತಾಲೂಕುಗಳಲ್ಲಿ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯ ಮತದಾನ ಪ್ರಕ್ರಿಯೆ ಅಧಿಕೃತವಾಗಿ ಆರಂಭಗೊಂಡಿದೆ. ರಾಜ್ಯದ ಒಟ್ಟು 2,709 ಗ್ರಾಮ ಪಂಚಾಯ್ತಿಗಳ 39,378 ಸ್ಥಾನಗಳಿಗೆ ಮತದಾನ ನಡೆಯಲಿದ್ದು, 1,05,431 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. 1.40 ಕೋಟಿ ಮತದಾರರು ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಈಗಾಗಲೇ ಕಳೆದ ಡಿ.22(ಮಂಗಳವಾರ)ರಂದು ಮೊದಲ ಹಂತದ ಮತದಾನ ಪ್ರಕ್ರಿಯೆ ಮುಗಿದಿದ್ದು, ಇದೀಗ ಎರಡನೇ ಹಂತದ ಮತದಾನ ಪ್ರಕ್ರಿಯೆ ಕೂಡ ವೇಗ ಪಡೆದುಕೊಂಡಿದೆ. ರಾಜ್ಯದ ಒಟ್ಟು 109 ತಾಲೂಕುಗಳಲ್ಲಿ ಎರಡನೇ ಹಂತದ ಮತದಾನ ಆರಂಭಗೊಂಡಿದ್ದು, 9 ಗಂಟೆವರೆಗೆ ಜಿಲ್ಲಾವಾರು ಮತದಾನ ಪ್ರಕ್ರಿಯೆಯ ಸ್ಪಷ್ಟ ಚಿತ್ರಣ ದೊರೆಯುತ್ತಿದೆ. ಅದರಂತೆ ಈವರೆಗಿನ ಬೆಳವಣಿಗೆಗಳತ್ತ ಗಮನಹರಿಸುವುದಾದರೆ...ಲೋಕಲ್ ಫೈಟ್ ಎಂದೇ ಜನಜನಿತವಗಿರುವ ಕರ್ನಾಟಕ ಗ್ರಾಮ ಪಂಚಾಯಿತಿ ಚುನಾವಣೆಗೆ ಇಂದು(ಡಿ.27-ಭಾನುವಾರ) ಎರಡನೇ ಹಂತದ ಮತದಾನ ನಡೆಯುತ್ತಿದೆ. 9 ಗಂಟೆವರೆಗೆ ಜಿಲ್ಲಾವಾರು ಮತದಾನ ಪ್ರಕ್ರಿಯೆಯ ಸ್ಪಷ್ಟ ಚಿತ್ರಣ ದೊರೆಯುತ್ತಿದ್ದು, ಈವರೆಗಿನ ಬೆಳವಣಿಗೆಗಳ ಸ್ಪಷ್ಟ ಚಿತ್ರಣ ಇಲ್ಲಿದೆ.

ಲೋಕಲ್ ಫೈಟ್ ಎಂದೇ ಜನಜನಿತವಗಿರುವ ಕರ್ನಾಟಕ ಗ್ರಾಮ ಪಂಚಾಯಿತಿ ಚುನಾವಣೆಗೆ ಇಂದು(ಡಿ.27-ಭಾನುವಾರ) ಎರಡನೇ ಹಂತದ ಮತದಾನ ನಡೆಯುತ್ತಿದೆ. ರಾಜ್ಯದ 109 ತಾಲೂಕುಗಳಲ್ಲಿ ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯ ಮತದಾನ ಪ್ರಕ್ರಿಯೆ ಅಧಿಕೃತವಾಗಿ ಆರಂಭಗೊಂಡಿದೆ. ರಾಜ್ಯದ ಒಟ್ಟು 2,709 ಗ್ರಾಮ ಪಂಚಾಯ್ತಿಗಳ 39,378 ಸ್ಥಾನಗಳಿಗೆ ಮತದಾನ ನಡೆಯಲಿದ್ದು, 1,05,431 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. 1.40 ಕೋಟಿ ಮತದಾರರು ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಈಗಾಗಲೇ ಕಳೆದ ಡಿ.22(ಮಂಗಳವಾರ)ರಂದು ಮೊದಲ ಹಂತದ ಮತದಾನ ಪ್ರಕ್ರಿಯೆ ಮುಗಿದಿದ್ದು, ಇದೀಗ ಎರಡನೇ ಹಂತದ ಮತದಾನ ಪ್ರಕ್ರಿಯೆ ಕೂಡ ವೇಗ ಪಡೆದುಕೊಂಡಿದೆ. ರಾಜ್ಯದ ಒಟ್ಟು 109 ತಾಲೂಕುಗಳಲ್ಲಿ ಎರಡನೇ ಹಂತದ ಮತದಾನ ಆರಂಭಗೊಂಡಿದ್ದು, 9 ಗಂಟೆವರೆಗೆ ಜಿಲ್ಲಾವಾರು ಮತದಾನ ಪ್ರಕ್ರಿಯೆಯ ಸ್ಪಷ್ಟ ಚಿತ್ರಣ ದೊರೆಯುತ್ತಿದೆ. ಅದರಂತೆ ಈವರೆಗಿನ ಬೆಳವಣಿಗೆಗಳತ್ತ ಗಮನಹರಿಸುವುದಾದರೆ...
ಹಾಲು ಮತಸ್ಥರ ಮೊದಲ ಮತಕ್ಕಾಗಿ ಆರತಿ!

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದಲ್ಲಿ ಮತದಾರರು ಆರತಿ ತಟ್ಟೆಯೊಂದಿಗೆ ಮತಗಟ್ಟೆಗೆ ಆಗಮಿಸಿ ಗಮನ ಸೆಳೆದಿದ್ದಾರೆ. ವಿಶೇಷವಾಗಿ ಮಹಿಳಾ ಮತದಾರರು ಆರತಿ ತಟ್ಟೆಯೊಂದಿಗೆ ಮತಗಟ್ಟೆಗೆ ಆಗಮಿಸಿದ್ದು ವಿಶೇಷವಾಗಿತ್ತು. ಹಿರೇಮಸಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ವಿಶೇಷ ಪೂಜೆ ಸಲ್ಲಿಸದ ಮತದಾರರು, ಆರತಿ ಬೆಳಗಿ ಬಳಿಕ ಮತದಾನ ಮಾಡಿದ್ದಾರೆ.
ಲೋಕಲ್ ಫೈಟ್ ಭಾಗ-2: ವಿಜಯಪುರದಲ್ಲಿ ಆರತಿ ಹಿಡಿದು ಮತಗಟ್ಟೆಗೆ ಬಂದ ಮತದಾರರು!
ಬೆಳಗ್ಗೆ ಏಳು ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಳ್ಳುತ್ತಿದ್ದಂತೇ, ಆರತಿ ತಟ್ಟೆ ಹಿಡಿದು ಆಗಮಿಸಿದ ಮಹಿಳಾ ಮತದಾರರು, ಆರತಿ ಬೆಳಗಿ ಮತದಾನ ಪ್ರಕ್ರಿಯೆಗೆ ಚಾಲನೆ ನೀಡಿದರು. ಹಾಲು ಮತದ ಬೋಣಿಯೊಂದಿಗೆ ಮತದಾನ ಪ್ರಕ್ರಿಯೆಗೆ ಚಾಲನೆ ನೀಡಿದ್ದು ಕೂಡ ವಿಶೇಷವಾಗಿತ್ತು. ಹಾಲುಮತಸ್ಥರ ಬೋಣಿಯಾದರೆ (ಮೊದಲ ಮತದಾನ) ಒಳ್ಳೆಯದು ಎಂಬ ನಂಬಿಕೆಯಿಂದ ಪೂಜೆ ಮತ್ತು ಮತದಾನ ಮಾಡಲಾಗಿದೆ ಎಂದು ಸ್ಥಳೀಯರು ಸ್ಪಷ್ಟಪಡಿಸಿದ್ದಾರೆ.
ಅಭ್ಯರ್ಥಿಗಳ ಚಿಹ್ನೆ ಅದಲು-ಬದಲು ಗೊಂದಲ!

ಕಲಾದಗಿ ವಾರ್ಡ ನಂ 11 ರ 51 ನೇ ಮತಗಟ್ಟೆಯಲ್ಲಿನ ಮತಪತ್ರದಲ್ಲಿ ಅಭ್ಯರ್ಥಿಗಳ ಚಿಹ್ನೆಗಳು ಅದಲು ಬದಲಾಗಿವೆ. ಅಭ್ಯರ್ಥಿಗಳಾದ ಹನಸ್ ಮೊಹ್ಮದ್ ರೋಣ್ ಹಾಗೂ ಶಹನಾಜ್ ಬೇಗಂ ಚಿಹ್ನೆಗಳು ಅದಲು ಬದಲಾಗಿದ್ದು, ಮತಗಟ್ಟೆ ಅಧಿಕಾರಿಗಳು ಮತದಾನವನ್ನು 11 ಗಂಟೆವರೆಗೆ ಮುಂದೂಡಿದ್ದಾರೆ. ಹೊಸ ಮತಪತ್ರದೊಂದಿಗೆ ಚುನಾವಣೆ ನಡೆಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ.
ಇನ್ನು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಮತ್ತಿಕಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 161ರಲ್ಲಿ, ಮತಪತ್ರದ ಮೇಲೆ ಇಂಕ್ ಸರಿಯಾಗಿ ಮೂಡದೇ ಗೊಂದಲ ಸೃಷ್ಟಿಯಾಗಿತ್ತು. ಹೊಸ ಮೊಹರು ಇರುವ ಹಿನ್ನೆಲಯಲ್ಲಿ ಇಂಕ್ ಮತಪತ್ರದ ಮೇಲೆ ಮಬ್ಬಾಗಿ ಮೂಡಿದೆ. ಇದರಿಂದ ಅಭ್ಯರ್ಥಿಗಳು ಹಾಗೂ ಮತದಾರರಲ್ಲಿ ಗೊಂದ ಸೃಷ್ಟಿಯಾಗಿತ್ತು.
ಕಲಾದಗಿಯಲ್ಲಿ ಅಭ್ಯರ್ಥಿಗಳ ಚಿಹ್ನೆ ಅದಲು-ಬದಲು: ಸೀಗಿಕೇರಿಯಲ್ಲಿ ಮತ ಚಲಾಯಿಸಿದ 96ರ ವೃದ್ಧೆ!
ಇನ್ನು ಜಿಲ್ಲೆಯ ಸೀಗಿಕೇರಿ ಗ್ರಾಮ ಪಂಚಾಯತಿಯ 2ನೇ ವಾರ್ಡ್‌ನಸರ್ಕಾರಿ ಶಾಲೆಯ ಮತಗಟ್ಟೆಗೆ ಮೊಮ್ಮಕ್ಕಳೊಂದಿಗೆ ಆಗಮಿಸಿದ 96 ವರ್ಷದ ಅಜ್ಜಿ ನೀಲಮ್ಮ, ಮತ ಚಲಾಯಿಸಿ ಗಮನ ಸೆಳೆದರು.
ಕಾಲಿಗೆ ಶಾಯಿ ಹಾಕಿಸಿಕೊಂಡು ಮತದಾನ ಮಾಡಿದ ಲಕ್ಷ್ಮೀ!

ಎರಡು ಕೈಗಳಿಲ್ಲ ಲಕ್ಷ್ಮಿ ಕಾಲಿನ ಬೆರಳಿಗೆ ಶಾಯಿ ಹಾಕಿಸಿಕೊಳ್ಳುವುದರ ಮೂಲಕ ಮತದಾರರಿಗೆ ಸ್ಪೂರ್ತಿ ನೀಡಿದ್ದಾರೆ. ಅದೆಷ್ಟೋ ಜನ ಮತದಾನ ಮಾಡಲು ಹೋಗದೆ ಮನೆಯಲ್ಲಿ ಕುಳಿತುಕೊಂಡಿದ್ದರೆ, ಎರಡು ಕೈಗಳಿಲ್ಲದ ಲಕ್ಷ್ಮಿಯವರು ಮತಗಟ್ಟೆಗೆ ತೆರಳಿ ಇಂದು (ಡಿ.27) ಮತದಾನ ಮಾಡಿದರು.
ಕಾಲಿನ ಬೆರಳಿಗೆ ಶಾಯಿ ಹಾಕಿ ಮತದಾನ; ಯುವಜನತೆಗೆ ಲಕ್ಷ್ಮಿ ಸ್ಫೂರ್ತಿಯ ಸೆಲೆ!
ಕಾನಾಹೊಸಳ್ಳಿ ಸಮೀಪದ ಗುಂಡುಮುಣುಗು ಗ್ರಾಮದ ಮತಗಟ್ಟೆ ಸಂಖ್ಯೆ 47 ರಲ್ಲಿ ಎರಡು ಕೈಗಳಿಲ್ಲದ ಲಕ್ಷ್ಮಿ ಕಾಲಿನ ಬೆರಳಿಗೆ ಶಾಯಿ ಹಾಕಿಸಿಕೊಂಡು ಮತದಾನ ಮಾಡಿದರು. ಇವರು ಈ ಹಿಂದೆ ನಡೆದ ಎಂ ಪಿ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ ಮತದಾನ ಜಾಗೃತಿಯ ರಾಯಭಾರಿಯಾಗಿದ್ದರು.
9 ಗಂಟೆವರೆಗಿನ ಶೇಕಡಾವಾರು ಮತದಾನದ ವಿವಿರ!

ಇನ್ನು ಎರಡನೇ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯ,9 ಗಂಟೆವರೆಗಿನ ಶೇಕಡಾವರು ಮತದಾನದತ್ತ ಗಮನಹರಿಸುವುದಾದರೆ...
ಲೋಕಲ್ ಫೈಟ್ ಭಾಗ-2: ಧಾರವಾಡದಲ್ಲಿ 9 ಗಂಟೆವರೆಗೆ ಶೇ.8.7 ರಷ್ಟು ಮತದಾನ!
* ವಿಜಯಪುರ: 4 ತಾಲೂಕುಗಳ 88 ಪಂಚಾಯಿತಿಗಳಿಗೆ ಚುನಾವಣೆ - ಶೇ.14.48ರಷ್ಟು ಮತದಾನ.
* ಬಾಗಲಕೋಟೆ: ಶೇ.6.75ರಷ್ಟು ಮತದಾನ.
* ಉಡುಪಿ: ಶೇ.12.48ರಷ್ಟು ಮತದಾನ.
*ರಾಯಚೂರು: ಶೇ.2.29ರಷ್ಟು ಮತದಾನ
*ದಾವಣಗೆರೆ: ಶೇ.5.41ರಷ್ಟು ಮತದಾನ.
*ಬೆಂಗಳೂರು ಗ್ರಾಮಾಂತರ: ಶೇ.6.91ರಷ್ಟು ಮತದಾನ.
*ಕೊಪ್ಪಳ: ಶೇ.8.27ರಷ್ಟು ಮತದಾನ.
* ಧಾರವಾಡ: ಶೇ.8.27ರಷ್ಟು ಮತದಾನ.
*ಬಳ್ಳಾರಿ: ಶೇ.6.4ರಷ್ಟು ಮತದಾನ.
*ಕಲಬುರಗಿ: ಶೇ.8.26 ರಷ್ಟು ಮತದಾನ.
*ಬೀದರ್:ಶೇ.4.50ರಷ್ಟು ಮತದಾನ.
from India & World News in Kannada | VK Polls https://vijaykarnataka.com/news/karnataka/know-about-second-phase-voting-of-karnataka-gram-panchayat-election/articleshow/79974857.cms