ವರ್ಷವೂ ತಳಿ ಬದಲು, ಕೊಟ್ಟಿಗೆ ಗೊಬ್ಬರ ವರ..! ದಾಖಲೆ ದರಕ್ಕೆ ಮಾರಾಟವಾಗ್ತಿದೆ ಒಣ ಮೆಣಸು..!

ಯಲ್ಲಪ್ಪ ತಳವಾರ ರೋಣ ಗದಗ: ಬಹುಮುಖ್ಯ ಸಾಂಬಾರ ಬೆಳೆಯಾದ ಒಣ ಈ ಬಾರಿ ದಾಖಲೆ ದರಕ್ಕೆ ಮಾರಾಟವಾಗುತ್ತಿದೆ. ಅದರಲ್ಲೂ ರೋಣ ತಾಲೂಕಿನ ಒಣ ಮೆಣಸಿನಕಾಯಿಗೆ ಪ್ರಸ್ತುತ ವರ್ಷದಲ್ಲಿ ಹೆಚ್ಚಿನ ಬೇಡಿಕೆ ಬರುತ್ತಿದೆ. ಹೀಗೆ ಬೇಡಿಕೆ ಬರಲು ಕಾರಣಗಳಾದರೂ ಏನು ಎಂಬ ಕುತೂಹಲ ಸಹಜವಾಗಿದೆ. ರೋಣ ತಾಲೂಕಿನ ಸವಡಿ ಗ್ರಾಮದ ಬಸವರೆಡ್ಡೆಪ್ಪ ಭೂಸರೆಡ್ಡಿ ಹಾಗೂ ಪ್ರಕಾಶ ಜೋಗರೆಡ್ಡಿ ಅವರು ಬೆಳೆದ ಒಣ ಮೆಣಸಿನಕಾಯಿಗೆ ಈ ಬಾರಿ ದಾಖಲೆ ದರ ದೊರೆತಿದೆ. ಬ್ಯಾಡಗಿ ಮಾರುಕಟ್ಟೆಯಲ್ಲಿ ಬಸವರೆಡ್ಡೆಪ್ಪ ಅವರು ಬೆಳೆದ ಮೆಣಸಿನಕಾಯಿ ಕ್ವಿಂಟಾಲ್‌ಗೆ 45,111 ರೂ.ಗೆ ಹಾಗೂ ಮಾರುಕಟ್ಟೆಯಲ್ಲಿ ಪ್ರಕಾಶ ಬೆಳೆದ ಮೆಣಸಿನಕಾಯಿ ಕ್ವಿಂಟಾಲ್‌ಗೆ 41,101 ರೂ.ನಂತೆ ಮಾರಾಟವಾಗಿ ದಾಖಲೆ ಸೃಷ್ಟಿಸಿವೆ. ಈ ಹಿನ್ನೆಲೆಯಲ್ಲಿ ರೋಣ ತಾಲೂಕಿನ ರೈತರ ಕಾರ್ಯವೈಖರಿ ಚರ್ಚೆಗೆ ಕಾರಣವಾಗಿದೆ. ಗುಣಮಟ್ಟಕ್ಕೆ ಕಾರಣಮೆಣಸಿನಕಾಯಿ ಐದೂವರೆ ತಿಂಗಳ ಬೆಳೆ. ಪ್ರತಿ ವರ್ಷ ಜೂನ್‌ ತಿಂಗಳಲ್ಲಿ ಬಿತ್ತನೆ ನಡೆಯುತ್ತದೆ. ಇತರೆಡೆಯ ಬಹುತೇಕ ರೈತರು ಒಂದೇ ತಳಿ ನಾಟಿ ಮಾಡುತ್ತಾರೆ. ಆದರೆ, ರೋಣ ತಾಲೂಕಿನ ರೈತರು ಪ್ರತಿ ವರ್ಷ ಬೇರೆ ಬೇರೆ ತಳಿಯ ಬ್ಯಾಡಗಿ ಮೆಣಸಿನಕಾಯಿ ಬೆಳೆಯುತ್ತಾರೆ. ಕುಂದಗೋಳ, ಗುಡಗೇರಿ ಸೇರಿದಂತೆ ನಾನಾ ಕಡೆಯಿಂದ ಬೀಜ ಖರೀದಿಸಿ ಬಿತ್ತುತ್ತಾರೆ. ಇದು ಹೆಚ್ಚಿನ ಇಳುವರಿ ಹಾಗೂ ಗುಣಮಟ್ಟದ ಫಲಕ್ಕೆ ಕಾರಣ ಎಂಬುದು ಕೃಷಿಕರ ಅಭಿಮತ. ಬಣ್ಣ ಮಾಸಲ್ಲ..!ಜಮೀನುಗಳಿಗೆ ಪ್ರತಿವರ್ಷ ಕೊಟ್ಟಿಗೆ ಗೊಬ್ಬರ ಹಾಕುತ್ತಾರೆ. ಇದರಿಂದ ಮಳೆ ಕೈಕೊಟ್ಟರೂ ಶೇ.50ರಷ್ಟು ಫಸಲು ಬರುತ್ತದೆ. ಜತೆಗೆ ಮೆಣಸಿನಕಾಯಿ ಬಣ್ಣವೂ ಮಾಸಲ್ಲ. ಕಾಯಿ ಬಿಡುವ ಸಂದರ್ಭದಲ್ಲಿ ಮಿಡತೆ ಕಾಟ ಹಾಗೂ ಮುರುಟು ರೋಗ ಕಾಣಿಸಿಕೊಂಡರಷ್ಟೇ ಒಂದೆರಡು ಬಾರಿ ಕೀಟನಾಶಕ ಸಿಂಪಡಿಸುತ್ತಾರೆ. ಹೆಚ್ಚು ಕೀಟನಾಶಕ ಸಿಂಪಡಿಸಿದರೆ ಗಾಢ ಕೆಂಪು ಬಣ್ಣ ಇರುವುದಿಲ್ಲ ಎನ್ನುತ್ತಾರೆ ರೈತರು. ಈ ತಾಲೂಕಿನ ಬಹುತೇಕ ಭಾಗದಲ್ಲಿ ಕಪ್ಪು ಮಣ್ಣು ಜಮೀನುಗಳಿವೆ. ಮೆಣಸಿಗೆ 10 ಡಿ.ಸೆ.ಯಿಂದ 30 ಡಿ.ಸೆ ಉಷ್ಣಾಂಶ ಇರಬೇಕು. ಅಂತಹ ಹವಾಮಾನವೂ ಈ ಪ್ರದೇಶದ್ದಾಗಿದೆ.


from India & World News in Kannada | VK Polls https://ift.tt/3rAFQyC

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...