ನಾಲ್ಕು ರಾಜ್ಯಗಳಲ್ಲಿ ಎರಡು ದಿನಗಳ ಕೊರೊನಾ ಲಸಿಕೆ ತಾಲೀಮು: 'ಮಿಷನ್ ವ್ಯಾಕ್ಸಿನ್'ಗೆ ಕೇಂದ್ರ ಸಜ್ಜು!

ಹೊಸದಿಲ್ಲಿ: ಮುಂಬರುವ(2021) ಜನವರಿ ತಿಂಗಳಲ್ಲಿ ದೇಶಾದ್ಯಂತ ಕೊರೊನಾ ಲಸಿಕೆ ಅಭಿಯಾನಕ್ಕೆ ಚಾಲನೆ ನೀಡುವ ಗುರಿ ಹೊಂದಿರುವ ಕೇಂದ್ರ ಸರ್ಕಾರ. ಇದಕ್ಕೆ ಪೂರ್ವಭಾವಿಯಾಗಿ ಇಂದಿನಿಂದ(ಡಿ.28-ಸೋಮವಾರ) ಎರಡು ದಿನಗಳ ಕಾಲ ಲಸಿಕೆ ನೀಡುವ ಅಣುಕು ಕಾರ್ಯಾಚರಣೆ ನಡೆಸಲಿದೆ. ಪಂಜಾಬ್, ಅಸ್ಸಾಂ, ಆಂಧ್ರಪ್ರದೇಶ ಹಾಗೂ ಗುಜರಾತ್ ರಾಜ್ಯಗಳ ತಲಾ ಎರಡು ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ(ಡಿ.28-ಸೋಮವಾರ, ಡಿ.29-ಮಂಗಳವಾರ) ಕೊರೊನಾ ಲಸಿಕೆ ನೀಡುವ ಅಣುಕು ಕಾರ್ಯಾಚರಣೆ ನಡೆಸಲಾಆಗುವುದು ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ದೇಶದ ನಾಲ್ಕು ದಿಕ್ಕಿನ ಒಂದೊಂದು ರಾಜ್ಯಗಳನ್ನು ಈ ಅಣುಕು ಪ್ರದರ್ಶನಕ್ಕೆ ಆಯ್ದುಕೊಂಡಿರುವುದು ವಿಶೇಷ. ಉತ್ತರದಲ್ಲಿ ಪಂಜಾಬ್, ದಕ್ಷಿಣದಲ್ಲಿ ಆಂಧ್ರಪ್ರದೇಶ, ಪೂರ್ವದಲ್ಲಿ ಅಸ್ಸಾಂ ಹಾಗೂ ಪಶ್ಚಿಮದಲ್ಲಿ ಗುಜರಾತ್ ರಾಜ್ಯಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಕೊರೊನಾ ವೈರಸ್ ಲಸಿಕೆಯ ಸಾರ್ವತ್ರಿಕ ಬಳಕೆ ಆರಂಭವಾದಾಗಿನ ಎಲ್ಲಾ ಪ್ರಕ್ರಿಯೆಗಳನ್ನು ಈ ಅಣುಕು ಪ್ರದರ್ಶನ ಹೊಂದಿರಲಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ. ಕೊರೋನಾ ಲಸಿಕೆ ಅಭಿಯಾನಕ್ಕೆ ಅಗತ್ಯವಿರುವ ಕ್ರಮಗಳಾದ ಕೋ-ವಿನ್ ಆ್ಯಪ್‌ನಲ್ಲಿ ಲಸಿಕೆ ಫಲಾನುಭವಿಗಳ ಹೆಸರು ನೋಂದಣಿ, ಲಸಿಕೆ ಸಾಗಣೆಯ ಆನ್‌ಲೈನ್ ಮೇಲ್ವಿಚಾರಣೆ, ಲಸಿಕೆ ಪಡೆಯುವವರ ಆಯ್ಕೆ, ಲಸಿಕೆ ಕೇಂದ್ರಗಳಲ್ಲಿ ಫಲಾನುಭವಿಗಳಿಗೆ ಅಣಕು ಲಸಿಕೆ ಹಾಕುವುದು ಸೇರಿದಂತೆ ಇನ್ನಿತರ ಪ್ರಕ್ರಿಯೆಗಳನ್ನು ಈ ಅಣಕು ಕಾರ್ಯಾಚರಣೆ ಒಳಗೊಂಡಿರಲಿದೆ. ಇಷ್ಟೇ ಅಲ್ಲದೇ ಲಸಿಕೆಯನ್ನು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ರವಾನಿಸುವ ಬಗೆ ಹೇಗೆ ಎಂಬುದರ ಕುರಿತೂ ಚರ್ಚೆ ನಡೆಯಲಿದ್ದು, ಎಲ್ಲ ಸಿದ್ಧತೆಗಳೂ ಜನವರಿ ಮೊದಲ ವಾರದಲ್ಲಿ ಮುಗಿಯುವ ಭರವಸೆ ಇದೆ ಎನ್ನಲಾಗಿದೆ. ಸಾರ್ವಜನಿಕವಾಗಿ ಕೊರೊನಾ ವೈರಸ್ ಲಸಿಕೆ ಬಳಕೆಗೆ ಮುಂದಾಗಿದ್ದು, ಇದಕ್ಕಾಗಿ ನಡೆಸುತ್ತಿರುವ ಪೂರ್ವ ಸಿದ್ಧತೆಗಳು ಜಗತ್ತಿನ ಗಮನ ಸೆಳೆದಿವೆ.


from India & World News in Kannada | VK Polls https://ift.tt/3aMPesU

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...