ಹೈದರಾಬಾದ್: 16 ವರ್ಷದ ಬಾಲಕಿಯನ್ನು ಮದುವೆಯಾದ 54 ವರ್ಷದ ವ್ಯಕ್ತಿಯನ್ನು ಹೈದರಾಬಾದ್ನಲ್ಲಿ ಬಂಧಿಸಲಾಗಿದೆ. ಬಂಧಿತನನ್ನು ಅಬ್ದುಲ್ ಲತೀಫ್ ಎಂದು ಗುರ್ತಿಸಲಾಗಿದೆ. ಈತ ಮೂಲತಃ ಕೇರಳದವನಾಗಿದ್ದು, ಹೈದರಾಬಾದ್ನಲ್ಲಿ ನೆಲೆಸಿದ್ದ. ಈ ವಿವಾಹಕ್ಕೆ ಸಹಕರಿಸಿದ 7 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಬಾಲಕಿಯ ಪೋಷಕರೂ ಕೂಡಾ ಕಾನೂನು ಬಾಹಿರ ವಿವಾಹಕ್ಕೆ ಸಹಮತ ಸೂಚಿಸಿದ್ದರು ಎಂದು ತಿಳಿದುಬಂದಿದ್ದು, ಅವರನ್ನೂ ಬಂಧಿಸಲಾಗಿದೆ. ಬಾಲಕಿಯ ಪೋಷಕರ ಸಹಮತದೊಂದಿಗೇ ವಿವಾಹ ಆಗಿದ್ದಾಗಿ ಆರೋಪಿ ಲತೀಫ್, ಪೊಲೀಸರ ಎದುರು ಒಪ್ಪಿಕೊಂಡಿದ್ದಾನೆ. ಬಾಲಕಿಯ ವಿವಾಹ ನಡೆಯುತ್ತಿದೆ ಎಂಬ ಸುದ್ದಿ ತಿಳಿದ ಕೂಡಲೇ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆಗಾಗಲೇ 16 ವರ್ಷ ವಯಸ್ಸಿನ ಬಾಲಕಿ ಜೊತೆ 54ರ ವೃದ್ಧ ವಿವಾಹವಾಗಿದ್ದ. ಸದ್ಯ ಪ್ರಕರಣದ ತನಿಖೆ ನಡೆಯುತ್ತಿದ್ದು, ಬಾಲಕಿಯನ್ನು ರಕ್ಷಣೆ ಮಾಡಿ ಎಲ್ಲಿ ಇರಿಸಲಾಗಿದೆ ಎಂಬ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಈ ಸಂಬಂಧ ಇನ್ನಷ್ಟು ತನಿಖೆ ನಡೆದ ಬಳಿಕ ಪೊಲೀಸರು ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಯನ್ನೂ ಸುದ್ದಿಗೋಷ್ಠಿ ವೇಳೆ ಮಾಧ್ಯಮಗಳ ಎದುರು ಪೊಲೀಸರು ಕರೆತರಲಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಅಪ್ರಾಪ್ತರ ವಿವಾಹ ಇದೇ ಮೊದಲಲ್ಲ: ಹಾಗೆ ನೋಡಿದ್ರೆ, ಅಪ್ರಾಪ್ತ ವಯಸ್ಸಿನ ಬಾಲಕಿಯರನ್ನು ವಿವಾಹ ಬಂಧನಕ್ಕೆ ನೂಕುವ ಪ್ರಕರಣಗಳು ಹೊಸದೇನಲ್ಲ. ಈ ಹಿಂದೆಯೂ ಈ ರೀತಿಯ ಹಲವು ಪ್ರಕರಣಗಳು ವರದಿಯಾಗಿವೆ. ಕಳೆದ ನವೆಂಬರ್ನಲ್ಲಿ ಮಧುರೈನಲ್ಲಿ ಇಂಥದ್ದೇ ಒಂದು ಘಟನೆ ನಡೆದಿತ್ತು.
from India & World News in Kannada | VK Polls https://ift.tt/38MV23c