ಇನ್ಮುಂದೆ ತಮಿಳುನಾಡಿನಲ್ಲಿ ವ್ಯಕ್ತಿಯಾಧಾರಿತ ಚುನಾವಣೆ ನಡೆಯುವುದಿಲ್ಲ: ಮೈಸೂರಿನಲ್ಲಿ ಅಣ್ಣಾಮಲೈ ಹೇಳಿಕೆ

: ಇನ್ಮುಂದೆ ತಮಿಳುನಾಡಿನಲ್ಲಿ ವ್ಯಕ್ತಿಯಾಧಾರಿತ ಚುನಾವಣೆ ನಡೆಯುವುದಿಲ್ಲ ಎಂದು ಬಿಜೆಪಿಗೆ ಸೇರ್ಪಡೆಗೊಂಡ ಮಾಜಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಈ ಹಿಂದೆ ವ್ಯಕ್ತಿಗತವಾದ ರಾಜಕಾರಣವಿತ್ತು. ಆದರೆ ಕಾಲ ಬದಲಾಗಿದೆ. ಸದ್ಯ ಆ ಸ್ಥಿತಿ ಇಲ್ಲ. ಎಂಜಿಆರ್, ಕರುಣಾನಿಧಿ, ಜಯಲಲಿತಾ ಹೀಗೆ ಹಲವು ದಶಕಗಳ ಕಾಲ ವ್ಯಕ್ತಿ ಆಧಾರಿತ ರಾಜಕಾರಣ ನಡೆದಿದೆ. ಈಗ ಅಂತಹ ನಾಯಕರು ಇಲ್ಲ. ತಮಿಳುನಾಡಿನ ಜನರು ಬದಲಾವಣೆ ಬಯಸಿದ್ದು, ಈ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಲಿದೆ ಎಂದರು. ಕಳೆದ 53 ವರ್ಷದಿಂದಲೂ ತಮಿಳುನಾಡು ಸ್ಥಳೀಯ ದ್ರಾವಿಡ ರಾಜಕೀಯದಿಂದಾಗಿ ಬೇಸತ್ತು ಹೋಗಿದೆ. ಸದ್ಯ ಬದಲಾವಣೆ ಬಯಸಿ ರಾಷ್ಟ್ರೀಯ ಪಕ್ಷದತ್ತ ಜನರು ಒಲವು ತೋರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ರಾಜ್ಯದಲ್ಲಿ ಉತ್ತಮ ಭವಿಷ್ಯವಿದೆ ಎಂದು ನಾವು ಭಾವಿಸಿದ್ದೇವೆ ಎಂದು ತಿಳಿಸಿದರು. ಇನ್ನು ನೂತನ ಕೃಷಿ ಕಾಯ್ದೆಗಳಲ್ಲಿ ಗೊಂದಲ ಉಂಟು ಮಾಡುವ ಯಾವುದೇ ಅಂಶಗಳು ಇಲ್ಲ.ಇದೇ ವಿಚಾರವಾಗಿ ಸುಖಾಸುಮ್ಮನೆ ಗಲಾಟೆಗಳು ನಡೆಯುತ್ತಿದೆ. ಇತರೆ ಪಕ್ಷಗಳು ಇದನ್ನು ವಿರೋಧಿಸಿ ಕೇಂದ್ರ ಸರ್ಕಾರ ಮತ್ತು ರೈತರ ನಡುವೆ ಸಂಘರ್ಷ ಉಂಟು ಮಾಡುವುದು ಇದರ ಉದ್ದೇಶ.ಕೇಂದ್ರ ಸರ್ಕಾರದ ವಿರುದ್ಧ ಆರು ತಿಂಗಳಿಗೊಮ್ಮೆ ರಾಷ್ಟ್ರಮಟ್ಟದಲ್ಲಿ ಪ್ರತಿಭಟನೆ ರೂಪಿಸಲಾಗುತ್ತಿದೆ. ಈ ಹಿಂದೆ ಸಿಎಎ, ಎನ್‌ಆರ್‌ಸಿ, ನೋಟು ರದ್ದತಿ ಸಂದರ್ಭದಲ್ಲೂ ಪ್ರತಿಭಟನೆ ನಡೆಸಲಾಗಿತ್ತು. ಇದೀಗ ಕೃಷಿ ಕಾಯ್ದೆ ಹೆಸರಿನಲ್ಲಿ ಘಟನೆ ಮರುಕಳಿಸಿದೆ ಎಂದರು.


from India & World News in Kannada | VK Polls https://ift.tt/2M59dbX

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...