ತಿಪಟೂರು ಪ್ರಿನ್ಸಿಪಾಲ್‌ ಅಧಿಕಾರ ದುರ್ಬಳಕೆ ಪ್ರಕರಣ, ನಿರೀಕ್ಷಣಾ ಜಾಮೀನು ವಜಾ

ತುಮಕೂರು: ಅತಿಥಿ ಉಪನ್ಯಾಸಕರ ವೇತನ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕರ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ನಿರೀಕ್ಷಣಾ ಜಾಮೀನು ತಿರಸ್ಕಾರಗೊಂಡಿದೆ. ಭ್ರಷ್ಟಾಚಾರ ನಿಗ್ರಹದಳ (ಎಸಿಬಿ) ತನಿಖೆ ಆರಂಭಿಸುತ್ತಿದ್ದಂತೆ ತಲೆಮರೆಸಿಕೊಂಡಿರುವ ಅಲ್ಲಮಪ್ರಭು, ನಿರೀಕ್ಷಣಾ ಜಾಮೀನು ಕೋರಿದ್ದರು. ಅರ್ಜಿ ವಿಚಾರಣೆ ನಡೆಸಿದ 7ನೇ ಜಿಲ್ಲಾಸತ್ರ ನ್ಯಾಯಾಲಯದ ನ್ಯಾ.ಸುಧೀಂದ್ರನಾಥ್‌ ಮಂಗಳವಾರ ಅರ್ಜಿ ವಜಾಗೊಳಿಸಿ ತೀರ್ಪು ನೀಡಿದ್ದಾರೆ. ಈ ಹಗರಣ ನ್ಯಾಯಾಂಗ ವ್ಯವಸ್ಥೆಗೆ ಆಘಾತ ತಂದಿದೆ ಎಂದು ನ್ಯಾಯಾಧೀಶರು ಉಲ್ಲೇಖಿಸಿದ್ದಾರೆ. ಎಸಿಬಿ ಪರ ವಕೀಲ ಪ್ರಕಾಶ್‌ ಮತ್ತು ಆರೋಪಿ ಪ್ರಿನ್ಸಿಪಾಲ್‌ ಪರ ವಕೀಲ ಎಸ್‌.ಪಿ. ಕುಲಕರ್ಣಿ ವಾದಿಸಿದರು. ಏನಿದು ಪ್ರಕರಣ?: ತಿಪಟೂರು ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅಲ್ಲಮಪ್ರಭು ಮತ್ತು ಪ್ರಥಮ ದರ್ಜೆ ಸಹಾಯಕ ಸುನೀಲ್‌ ಕೂರ್ಗಿ ಅತಿಥಿ ಉಪನ್ಯಾಸಕರಿಗೆ ಕಾಲೇಜು ಅಭಿವೃದ್ಧಿ ಸಮಿತಿಯಿಂದ ಗೌರವ ಧನ ನೀಡಿ, ಆನಂತರ ಸರಕಾರದಿಂದ ಬಂದ ವೇತನವನ್ನು ಖಜಾನೆಯಿಂದ ಅನರ್ಹರ ಖಾತೆಗೆ ವರ್ಗಾಯಿಸಿದ್ದಾರೆ. ಎಫ್‌ಡಿಎ ಸುನೀಲ್‌ ಕೂರ್ಗಿ ಅವರು ಪತ್ನಿ ಮತ್ತು ಪ್ರಿನ್ಸಿಪಾಲ್‌ ಅಲ್ಲಮಪ್ರಭು ಬಾಮೈದ ಸೇರಿದಂತೆ ಅನರ್ಹರ ಖಾತೆಗೆ ಹಣ ವರ್ಗಾವಣೆ ಮಾಡಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬುದು ಗಂಭೀರ ಆರೋಪ. ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಎಸಿಬಿಗೆ ಸರಕಾರ ಸೂಚಿಸಿದೆ. ಈ ಬಗ್ಗೆ ವಿಜಯ ಕರ್ನಾಟಕ ಡಿ.18ರಂದು ವಿಸ್ತೃತ ವರದಿ ಮಾಡಿತ್ತು.


from India & World News in Kannada | VK Polls https://ift.tt/3aX3fV1

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...