ಹುಬ್ಬಳ್ಳಿ: ಮನೆ ಜಾಗದ ಆಸೆಯನ್ನು ತೋರಿಸಿ ನೂರಾರೂ ಕೋಟಿ ಮಾಡಿ ಕಣ್ಣು ತಪ್ಪಿಸಿಕೊಂಡು ತಿರುಗುತ್ತಿದ್ದ ವಂಚಕನನ್ನು ಬಂಧನ ಮಾಡುವಲ್ಲಿ ಹುಬ್ಬಳ್ಳಿಯ ಉಪನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಬ್ಬಳ್ಳಿಯ ದೇಶಪಾಂಡೆನಗರದಲ್ಲಿ ಗರೀಮಾ ಹೋಮ್ಸ್ ಆ್ಯಂಡ ಫಾರ್ಮ್ ಹೌಸ್ ಲಿಮಿಟೆಡ್ ಹೆಸರಿನಲ್ಲಿ ಕಚೇರಿ ಮಾಡಿಕೊಂಡಿದ್ದ ವಂಚಕರು, ಕಳೆದ ವರ್ಷದಿಂದ ಪರಾರಿಯಾಗಿದ್ದರು. ಕಮೀಷನ್ ಆಧಾರದಲ್ಲಿಯೂ ಹಣ ನೀಡುತ್ತ, ನಂತರ ಜಾಗವನ್ನು ಮನೆಯನ್ನು ನೀಡುವುದಾಗಿ ಮೋಸ ಮಾಡಿದ್ದರು. ಈ ಬಗ್ಗೆ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಮೋಸ ಹೋದವರು, ಪೊಲೀಸರ ಕಾರ್ಯಕ್ಷಮತೆಯಿಂದ ನಿರಾಳರಾಗಿದ್ದಾರೆ. ಪ್ರಮುಖ ಆರೋಪಿಯ ಬಂಧನವಾಗಿದೆ. ಬಂಧನವಾಗಿರುವ ಆರೋಪಿಯು ಜಿಲ್ಲೆಯ ಬಸವನಬಾಗೇವಾಡಿಯ ಸಾತಿಹಾಳ ಗ್ರಾಮದ ರಾಮಯ್ಯ ಗಂಗಯ್ಯ ಹಿರೇಮಠ ಎಂದು ಗುರುತಿಸಲಾಗಿದ್ದು, ನೌಕರಿ ಮಾಡುವವರ ಮನೆಯ ಹೆಣ್ಣು ಮಕ್ಕಳಿಗೆ ಆಸೆ ತೋರಿಸಿ ಅವಳಿನಗರದಲ್ಲಿಯೇ ಕೋಟಿ ಕೋಟಿ ಹಣ ವಂಚನೆ ಮಾಡಿದ್ದಾನೆಂದು ಹೇಳಲಾಗಿದೆ. ಗರೀಮಾ ಕಂಪನಿಯು ಬಿಜೆಪಿ ಶಾಸಕಿಯದ್ದಾಗಿದ್ದು, ಅವರನ್ನು ಬಂಧನ ಮಾಡಬೇಕೆಂಬ ಕೂಗು ನೊಂದವರಿಂದ ಬಂದಿದೆ. ಈ ಪ್ರಕರಣದಲ್ಲಿ , ಧಾರವಾಡ, ದಾಂಡೇಲಿ, ಯಾದಗಿರಿ, ರಾಯಚೂರು ಸೇರಿದಂತೆ ಹಲವೆಡೆ ಸಾವಿರಾರೂ ಜನರು ಹಣವನ್ನು ಕಳೆದುಕೊಂಡಿದ್ದಾರೆ. ಸುಮಾರು ಎರಡು ವರ್ಷದ ಸುದೀರ್ಘ ಅವಧಿಯಲ್ಲೂ ಹುಬ್ಬಳ್ಳಿಯ ಉಪನಗರ ಠಾಣೆಯ ಪೊಲೀಸರು ಸುಮ್ಮನೆ ಕೂಡದೇ ಆರೋಪಿಯನ್ನು ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
from India & World News in Kannada | VK Polls https://ift.tt/2KGs5O7