ಕೊಪ್ಪಳ: ರಾಜ್ಯಾದ್ಯಂತ ಎರಡನೇ ಹಂತದ ಗ್ರಾ.ಪಂ. ಚುನಾವಣೆಗೆ ಇಂದು(ಡಿ.27) ನಡೆಯುತ್ತಿದೆ. ಕೊಪ್ಪಳದಲ್ಲಿ ಎರಡನೇ ಹಂತದ ಗ್ರಾ.ಪಂ.ಸಾರ್ವತ್ರಿಕ ಚುನಾವಣೆಗೆ ನಾಲ್ಕು ತಾಲೂಕಿನ ಗ್ರಾ.ಪಂ.ಗಳಲ್ಲಿ ಬೆಳಗ್ಗೆ 9 ಗಂಟೆಗೆ ಶೇ.6.65 ರಷ್ಟು ಮತದಾನವಾಗಿದೆ. ಕುಷ್ಟಗಿ ತಾಲೂಕಿನ 36 ಗ್ರಾ.ಪಂ.ಯಲ್ಲಿ ಶೇ.8.27ರಷ್ಟು ಮತದಾನವಾಗಿದೆ. ಗಂಗಾವತಿ ತಾಲೂಕಿನ 18 ಗ್ರಾ.ಪಂ.ಯಲ್ಲಿ ಶೇ.9.76, ಕಾರಟಗಿ ತಾಲೂಕಿನ 11 ಗ್ರಾ.ಪಂ.ಯಲ್ಲಿ 10.25, ಕನಕಗಿರಿ ತಾಲೂಕಿನ 11 ಗ್ರಾ.ಪಂ.ಯಲ್ಲಿ ಶೇ.10.22 ರಷ್ಟು ಮತದಾನವಾಗಿದೆ. ಇಂದು ಬೆಳಗ್ಗೆ 7 ಗಂಟೆಯಿಂದ ಎರಡನೆ ಹಂತದ ಮತದಾನ ಪ್ರಕ್ರಿಯೆ ಆರಂಭಗೊಂಡಿದ್ದು, ಕೊನೆಯ ಒಂದು ಗಂಟೆಯ ಅವಧಿಯಲ್ಲಿ ಕೋವಿಡ್ -19 ಸೋಂಕಿತರಿಗೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಡಿಸೆಂಬರ್ 30ರಂದು ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿಗಳ ಚುನಾವಣಾ ಫಲಿತಾಂಶ ಹೊರ ಬೀಳಲಿದೆ.
from India & World News in Kannada | VK Polls https://ift.tt/3hlRWqB