ಹೊಸ ವರ್ಷಕ್ಕೆ ಮದುವಣಗಿತ್ತಿಯಂತೆ ಶೃಂಗಾರಗೊಂಡ ಶ್ರೀ ಕ್ಷೇತ್ರ ಧರ್ಮಸ್ಥಳ, ಭಕ್ತರು ಮೂಕ ವಿಸ್ಮಿತ!

ಧರ್ಮಸ್ಥಳ: ಹೊಸವರ್ಷದ ಪ್ರಯುಕ್ತ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದೇಗುಲವನ್ನು ವಿಶೇಷವಾಗಿ ಸಿಂಗಾರಗೊಳಿಸಲಾಗಿದೆ. ಫಲಪುಷ್ಪಗಳಿಂದ ಮದುವಣಗಿತ್ತಿಯಂತೆ ಶ್ರೀ ಮಂಜುನಾಥ್ನ ಸನ್ನಿಧಿ ಧರ್ಮಸ್ಥಳವು ಕಂಗೊಳಿಸುತ್ತಿದೆ. ಈ ವರ್ಷ ಬೆಂಗಳೂರಿನ ಗೋಪಾಲ್, ಶರವಣ್ ಅವರ ತಂಡವು ದೇವಾಲಯವನ್ನು ಅತ್ಯದ್ಭುತವಾಗಿ ಸಿಂಗರಿಸಿದ್ದಾರೆ. ಕಲಾವಿದರ ಕೈ ಚಳಕಕ್ಕೆ ದೇವಾಲಯಕ್ಕೆ ಆಗಮಿಸಿದ ಭಕ್ತರು ಮೂಕ ವಿಸ್ಮಿತರಾಗಿದ್ದಾರೆ. ದೇವಾಲಯದ ಮುಂಭಾಗ ಕಬ್ಬು ಹಾಗೂ ತೆಂಗಿನ ಕಾಯಿಯ ಗರಿಯಿಂದ ಸಿಂಗಾರಗೊಳಿಸಲಾಗಿದೆ. ಸಂಪೂರ್ಣವಾಗಿ ದೇಸಿ ರೀತಿಯಲ್ಲಿ ಡೆಕೋರೇಟ್‌ ಮಾಡಲಾಗಿದೆ. ಇನ್ನು ಗೊಂಚಲು ಜೋಳವನ್ನು ಕಟ್ಟಿ ವಿಭಿನ್ನವಾಗಿ ಸಿಂಗಾರ ಮಾಡಲಾಗಿದೆ. ದೇವಾಲಯದ ಒಳಗೆ ಕೂಡ ಫಲ-ಪುಷ್ಪಗಳಿಂದ ಡೆಕೋರೇಟ್‌ ಮಾಡಲಾಗಿದೆ. ಕಳೆದ ಎರಡು ದಿನಗಳಿಂದ ದೇವಾಲಯಕ್ಕೆ ಬೇಕಾದ ಸಿಂಗಾರವನ್ನು ಮಾಡಲು ಕಲಾವಿದರು ತೊಡಗಿದ್ದರು. ಇದೀಗ ಹೊಸ ವರ್ಷಕ್ಕೆ ಭಕ್ತರನ್ನು ಧರ್ಮಸ್ಥಳ ದೇವಾಲಯ ಅತ್ಯದ್ಭುತ ಶೃಂಗಾರದ ಮೂಲಕ ಕೈ ಬೀಸಿ ಕರೆಯುತ್ತಿದೆ.


from India & World News in Kannada | VK Polls https://ift.tt/3pCJ2bc

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...