ಹರಿಯಾಣ: ಹಿಂದೂ ಯುವತಿಯೊಂದಿಗೆ ಮದುವೆಗಾಗಿ ಮತಾಂತರಗೊಂಡ ಮುಸ್ಲಿಂ ಯುವಕ!

ಯಮುನಾನಗರ: ಸರಕಾರ '' ವಿರುದ್ಧ ಕಾನೂನು ಕುಣಿಗೆ ಬಿಗಿಗೊಳಿಸುತ್ತಿರುವ ನಡುವೆಯೇ ಮುಸ್ಲಿಂ ಯುವಕನೊಬ್ಬ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಹಿಂದೂ ಯುವತಿಯನ್ನು ಮದುವೆಯಾದ ಪ್ರಕರಣ ಮಂಗಳವಾರ ವರದಿಯಾಗಿದೆ. 21 ವರ್ಷದ ಮುಸ್ಲಿಂ ಯುವಕ 19 ವರ್ಷದ ಹಿಂದೂ ಯುವತಿಯನ್ನು ನವೆಂಬರ್‌ 9ರಂದು ಮದುವೆಯಾಗಿದ್ದು, ಅದಕ್ಕೂ ಮೊದಲು ಆತ ತನ್ನ ಹೆಸರನ್ನು ಕೂಡ ಬದಲಾಯಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮದುವೆ ಬಳಿಕ ಕುಟುಂಬ ವರ್ಗದವರಿಂದ ತಮಗೆ ಆಪತ್ತು ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿ ದಂಪತಿ ಹೈಕೋರ್ಟ್‌ ಮೊರೆ ಹೋಗಿದ್ದರು. ನಂತರ ನವ ಜೋಡಿಯನ್ನು ಪೊಲೀಸರು ರಕ್ಷಣಾ ಕೇಂದ್ರಕ್ಕೆ ಕರೆದೊಯ್ದು ಭದ್ರತೆ ಒದಗಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲದೆ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದ ಯುವತಿಯ ಕುಟುಂಬಸ್ಥರನ್ನು ಭೇಟಿಯಾಗಿದ್ದ ಪೊಲೀಸರು ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ ಎಂದ ತಿಳಿದುಬಂದಿದೆ. ಲವ್‌ ಜಿಹಾದ್‌ ಹಾವಳಿ ನಿಯಂತ್ರಿಸಲು ಮುಂದಾಗಿರುವ ಹರಿಯಾಣ ಸರಕಾರ, ನೂತನ ಕಾನೂನು ರಚನೆಗೆ ಮೂವರು ಸದಸ್ಯರ ಸಮಿತಿಯನ್ನು ರಚಿಸಿದೆ. ಈ ಪ್ರಕ್ರಿಯೆ ಆರಂಭದ ಬಳಿಕ ಅಂತರ್‌ ಧರ್ಮೀಯ ಮದುವೆಗಳಿಗೆ ಮೂಗುದಾರ ಬಿದ್ದಿದೆ.


from India & World News in Kannada | VK Polls https://ift.tt/3fVkczL

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...