ಕೋವಿಡ್‌ ನಡುವೆಯೂ ಮಕ್ಕಳ ಲಸಿಕೆಗೆ ಭಂಗವಿಲ್ಲ: ಆರೋಗ್ಯ ಇಲಾಖೆಯಿಂದ ಶೇ.98ರಷ್ಟು ಗುರಿ ಸಾಧನೆ!

ಮಂಜುನಾಥ ನಾಗಲೀಕರ್‌ ಬೆಂಗಳೂರು ಬೆಂಗಳೂರು: ಕೋವಿಡ್‌ ಭೀತಿಯ ನಡುವೆಯೂ ಆರೋಗ್ಯ ಇಲಾಖೆಯು ಯೋಜನೆಯಲ್ಲಿ ಶೇ.98ರಷ್ಟು ಗುರಿ ಸಾಧಿಸಿದೆ. ಮಾರಕ ಕಾಯಿಲೆಗಳಿಂದ ದೂರವಿಟ್ಟು ಆರೋಗ್ಯಯುತ ಮಕ್ಕಳಿಗಾಗಿ ಬಿಸಿಜಿ, ಪೋಲಿಯೊ, ಹೆಪಟೈಟಿಸ್‌ ಬಿ, ಪೆಂಟಾವಲೆಂಟ್‌, ರೋಟಾವೈರಸ್‌ ಮುಂತಾದ ಲಸಿಕೆಗಳನ್ನು ಮಕ್ಕಳಿಗೆ ನೀಡಲಾಗುತ್ತದೆ. ಲಾಕ್‌ಡೌನ್‌ ಆರಂಭವಾದಾಗ ಅನಗತ್ಯ ಓಡಾಟಕ್ಕೆ ಕಡಿವಾಣ ಹಾಕಿದ್ದ ಕಾರಣ ಸಾಕಷ್ಟು ಜನರು ಭೀತಿಯಿಂದ ಹೊರಗೆ ಬಂದಿರಲಿಲ್ಲ. ಅಲ್ಲದೆ, ಕೋವಿಡ್‌ನಿಂದ ಪಾರಾಗಿ ಯೋಜನೆ ಜಾರಿಗೊಳಿಸಲು ಅಧಿಕಾರಿಗಳು ಯೋಜನೆ ರೂಪಿಸಿದ್ದರು. ಲಾಕ್‌ಡೌನ್‌ ಆರಂಭದ ಮೊದಲು ಎರಡು-ಮೂರು ತಿಂಗಳು ಮಾತ್ರ ಲಸಿಕೆ ಯೋಜನೆಗೆ ಹಿನ್ನಡೆಯಾಗಿತ್ತು. ನಂತರದ ದಿನಗಳಲ್ಲಿ ಲಸಿಕೆ ಯೋಜನೆಗೆ ಒತ್ತು ಕೊಟ್ಟು ಗುರಿ ತಲುಪುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸಿದ ಪರಿಣಾಮ ಶೇ.98ರಷ್ಟು ಗುರಿ ಸಾಧಿಸಲಾಗಿದೆ. ಹಾವೇರಿಯಲ್ಲಿ ಶೇ.112ರಷ್ಟು! ಹಾವೇರಿ ಜಿಲ್ಲೆಯಲ್ಲಿ 16,600 ಮಕ್ಕಳಿಗೆ ಲಸಿಕೆ ಗುರಿ ಹೊಂದಲಾಗಿತ್ತು. ಆದರೆ, 18,668 ಮಕ್ಕಳು ಲಸಿಕೆ ಪಡೆದಿದ್ದಾರೆ. ಈ ಮೂಲಕ ಶೇ 112ರಷ್ಟು ಗುರಿ ಸಾಧನೆಯಾಗಿದೆ. ರಾಜ್ಯದ ಅತ್ಯಂತ ಹಿಂದುಳಿದ ಜಿಲ್ಲೆಗಳ ಪೈಕಿ ಒಂದಾಗಿರುವ ಬೀದರ್‌ನಲ್ಲಿ ಲಸಿಕೆ ಯೋಜನೆ ಜಾರಿಯಲ್ಲಿ ಉತ್ತಮ ಸಾಧನೆಯಾಗಿದೆ. 19,707 ಮಕ್ಕಳಿಗೆ ಲಸಿಕೆ ಹಾಕುವ ಗುರಿಯನ್ನು ಮೀರಿ 21,904 ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ಶೇ.111ರಷ್ಟು ಗುರಿ ಸಾಧಿಸಲಾಗಿದೆ. ಅದೇ ರೀತಿ, ತುಮಕೂರು, ಬಾಗಲಕೋಟೆ ಶೇ.109, ವಿಜಯಪುರ, ದಾವಣಗೆರೆ ಶೇ.105, ಯಾದಗಿರಿ ಶೇ.104, ಧಾರವಾಡ 103, ಮಂಡ್ಯ ಶೇ.101, ಉತ್ತರ ಕನ್ನಡ ಜಿಲ್ಲೆಗಳು ಶೇ.100ರಷ್ಟು ಗುರಿ ಸಾಧಿಸಿವೆ ಎಂದು ಆರೋಗ್ಯ ಇಲಾಖೆ ಇಮ್ಯೂನೈಜೇಷನ್‌ ವಿಭಾಗದ ಉಪ ನಿರ್ದೇಶಕಿ ಡಾ.ಬಿ.ಎನ್‌. ರಜನಿ ತಿಳಿಸಿದರು. ಲಸಿಕೆ ಹಾಕುವ ಗುರಿ ಎಷ್ಟಿತ್ತು?
  • 2020 ಏಪ್ರಿಲ್‌ನಿಂದ ಅಕ್ಟೋಬರ್‌ 6,14,173
  • ಲಸಿಕೆ ಹಾಕಿದ್ದು ಎಷ್ಟು ಮಕ್ಕಳಿಗೆ? 6,13,399
  • ಗುರಿ ಸಾಧನೆ ಎಷ್ಟು? ಶೇ.98
ಹಿಂದೆ ಬಿದ್ದ ಬೆಂಗಳೂರು ಮಕ್ಕಳ ಲಸಿಕೆ ವಿಚಾರದಲ್ಲಿ ಕೊಪ್ಪಳ ಹಾಗೂ ಬೆಂಗಳೂರು ನಗರ ಹಿಂದೆ ಬಿದ್ದಿವೆ. ಕ್ರಮವಾಗಿ ಶೇ.90 ಮತ್ತು ಶೇ.91ರಷ್ಟು ಮಾತ್ರ ಈ ಎರಡು ಜಿಲ್ಲೆಗಳಲ್ಲಿ ಲಸಿಕೆ ಹಾಕಲಾಗಿದೆ. ಕೊಪ್ಪಳದಲ್ಲಿ 17,660 ಮಕ್ಕಳಿಗೆ ಲಸಿಗೆ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ, 15,973 ಮಕ್ಕಳಿಗೆ ಮಾತ್ರ ಲಸಿಕೆ ಹಾಕಲಾಗಿದೆ. ಬೆಂಗಳೂರಿನಲ್ಲಿ 98,887 ಮಕ್ಕಳ ಪೈಕಿ 90,444 ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಹಿಂದೆ ಬಿದ್ದಿರುವ ಜಿಲ್ಲೆಗಳ ಪೈಕಿ ಬಳ್ಳಾರಿ, ಕಲಬುರಗಿ, ರಾಯಚೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಶೇ.93, ಹಾಸನ, ಮೈಸೂರು, ಬೆಳಗಾವಿಯಲ್ಲಿ ಶೇ.95ರಷ್ಟು ಲಸಿಕೆಯ ನಿಗದಿತ ಗುರಿ ಸಾಧಿಸಲಾಗಿದೆ. ಕೋವಿಡ್‌ ಲಾಕ್‌ಡೌನ್‌ ಆರಂಭದ ಎರಡು-ಮೂರು ತಿಂಗಳು ಮಾತ್ರ ಲಸಿಕೆ ಯೋಜನೆಯಲ್ಲಿ ಹಿನ್ನಡೆಯಾಗಿದೆ. ನಂತರದ ದಿನಗಳಲ್ಲಿ ನಿಗದಿತ ಗುರಿ ಬಹುತೇಕ ತಲುಪಲಾಗಿದೆ. ಓಂಪ್ರಕಾಶ್‌ ಪಾಟೀಲ್‌, ನಿರ್ದೇಶಕರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ


from India & World News in Kannada | VK Polls https://ift.tt/37lXFIq

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...