ನಾಗರಾಜು ಅಶ್ವತ್, ಬೆಂಗಳೂರು ಗ್ರಾಮಾಂತರ: ಪಂಚಾಯ್ತಿ ಚುನಾವಣೆಯ ಮೊದಲ ಹಂತ ಮುಕ್ತಾಯ ಕಂಡಿದ್ದು, 2ನೇ ಹಂತದ ಚುನಾವಣೆಗೆ ಅಖಾಡ ಸಿದ್ಧವಾಗುತ್ತಿದೆ. ಈ ಮಧ್ಯೆ ಮೊದಲ ಹಂತದ ಚುನಾವಣೆಯಲ್ಲಿ ಅಬಕಾರಿ ಇಲಾಖೆಯಿಂದ ಅಬ್ಬರದ ಭೇಟೆಯಾಗಿದ್ದು, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ 400ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಮದ್ಯೋಪಚಾರ ಘೋರ ಪ್ರಕರಣಗಳು 24, ಅನಧಿಕೃತ ಮದ್ಯಸೇವನೆ 96, ಸನ್ನದುಗಳಲ್ಲಿ ಷರತ್ತು ಉಲ್ಲಂಘನೆ 14 ಪ್ರಕರಣ ಸೇರಿದಂತೆ 134ಪ್ರಕರಣಗಳನ್ನು ದಾಖಲಿಸಲಾಗಿದೆ. ಅಬಕಾರಿ ದಾಳಿಗಳಲ್ಲಿ 1,15,000ರೂ. ಮೌಲ್ಯದ 322.245ಲೀ. ಮದ್ಯ, 89.500ಲೀ. ಬಿಯರ್, 16.500ಲೀ. ವೈನ್(ಹೋಮ್‌ಮೇಡ್), 1.320ಲೀ. ರಕ್ಷಣಾ ಇಲಾಖೆ ಉಪಯೋಗದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಈ ಪೈಕಿ ಅಕ್ರಮ ಮದ್ಯಸಾಗಾಟದ ಆರೋಪದ ಮೇಲೆ 4ಲಕ್ಷ ಮೌಲ್ಯದ 16ದ್ವಿಚಕ್ರ ವಾಹನಗಳನ್ನು, 109ಮಂದಿಯನ್ನು ಬಂಧಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಅಬಕಾರಿ ಇಲಾಖೆ ತಿಳಿಸಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ 6 ತಾಲೂಕುಗಳಲ್ಲಿ 19 ಘೋರ ಪ್ರಕರಣಗಳು, 105 ಅನಧಿಕೃತ ಮದ್ಯಸೇವನೆ, ಸನ್ನದುಗಳ ಷರತ್ತು ಉಲ್ಲಂಘನೆ 8 ಸೇರಿದಂತೆ ಒಟ್ಟು 132 ಅಬಕಾರಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ದಾಳಿಯಲ್ಲಿ ಒಟ್ಟು 1,62,362ರೂ. ಮೌಲ್ಯದ 400ಲೀ ಮದ್ಯವನ್ನು ವಶಪಡಿಸಿಕೊಳ್ಳಲಾಗಿದ್ದು, ಅಕ್ರಮ ಮದ್ಯ ಸಾಗಾಟದ ಆರೋಪದ ಮೇಲೆ 4,06,000 ಮೌಲ್ಯದ 15 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ. ಪ್ರಮುಖಾಂಶಗಳು ಬೆಂಗಳೂರು ಗ್ರಾಮಾಂತರ
- 134ಪ್ರಕರಣಗಳು
- 1.15ಲಕ್ಷ ಮೌಲ್ಯದ ಮದ್ಯ ವಶ
- 16ದ್ವಿಚಕ್ರ ವಾಹನ ವಶ
- 132 ಪ್ರಕರಣ
- 1.62ಲಕ್ಷ ಮೌಲ್ಯದ ಮದ್ಯ ವಶ
- 15 ಬೈಕ್ ವಶ
from India & World News in Kannada | VK Polls https://ift.tt/3rCsv98