ಬಿಜೆಪಿ ಜೊತೆ ಜೆಡಿಎಸ್‌ ವಿಲೀನ ಅಸಾಧ್ಯದ ಮಾತು: ವೈಎಸ್‌ವಿ ದತ್ತ

ಗಂಗಾವತಿ: ಜತೆ ಜೆಡಿಎಸ್‌ ವಿಲೀನವಾಗುವುದು ಎಂದಿಗೂ ಅಸಾಧ್ಯ ಎಂದು ಎಂದು ಜೆಡಿಎಸ್‌ ಮುಖಂಡ, ಮಾಜಿ ಶಾಸಕ ವೈಎಸ್‌ವಿ ದತ್ತ ಹೇಳಿದರು. ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಎಪಿಎಂಸಿ ಕಾಯಿದೆ ತಿದ್ದುಪಡಿ ಜಾರಿ ಮೂಲಕ ಸಣ್ಣ ಹಾಗೂ ಅತಿಸಣ್ಣ ರೈತರು ಬೀದಿಗೆ ಬರಬೇಕಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹಾಗೂ ಬಿಎಸ್‌ ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರವು ರೈತರು, ಕಾರ್ಮಿಕರು ಹಾಗೂ ಕೂಲಿಕಾರರ ವಿರೋಧಿಯಾಗಿವೆ ಎಂದರು. ಇನ್ನು ಈ ಸರಕಾರಗಳು ಕೇವಲ ಐಟಿ, ಬಿಟಿಯವರ ಅಭಿವೃದ್ಧಿಯ ಕಡೆಗೆ ಹೆಚ್ಚು ಗಮನ ನೀಡುತ್ತಿವೆ. ಕೇಂದ್ರ ಸರಕಾರದ ಆಡಳಿತ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ರೈತರು ಉಳುಮೆ ಮಾಡುವುದನ್ನೇ ಬಿಡಬೇಕಾಗುತ್ತದೆ. ದೇಶದಲ್ಲಿಆಹಾರ ಕೊರತೆ ಕಂಡು ಬಂದರೂ ಅಚ್ಚರಿ ಪಡಬೇಕಿಲ್ಲ ಎಂದರು. ವೈ.ಎಸ್‌.ವಿ.ದತ್ತ ಅವರನ್ನು ಜೆಡಿಎಸ್‌ ಮುಖಂಡರು, ಕಾರ್ಯಕರ್ತರು, ಬ್ರಾಹ್ಮಣ ಸಮಾಜದವರು ಸನ್ಮಾನಿಸಿದರು. ಪಕ್ಷದ ಮುಖಂಡರಾದ ಉಸ್ಮಾನ್‌, ವೀರಭದ್ರಿ, ಪ್ರಮುಖರಾದ ಪವನ ಕುಮಾರ ಗುಂಡೂರು, ಶರತ್‌ ದಂಡಿನ್‌ ಇತರರಿದ್ದರು.


from India & World News in Kannada | VK Polls https://ift.tt/3aL5VoD

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...