ಸಂಕಷ್ಟಗಳು ಬಗೆಹರಿಯದಿದ್ದರೆ ಜನ ಪ್ರಧಾನಿ ರಾಜೀನಾಮೆಗೆ ಆಗ್ರಹಿಸಲಿದ್ದಾರೆ: ಶಿವಸೇನೆ!

ಮುಂಬೈ: ಮಾರಕ ಹಾವಳಿಯಿಂದ ಉದ್ಭವಿಸಿರುವ ಸಂಕಷ್ಟಗಳು ಬಗೆಹರಿಯದಿದ್ದರೆ, ಜನ ಅವರಿಂದ ರಾಜೀನಾಮೆ ಕೇಳುತ್ತಾರೆ ಎಂದು ಅಭಿಪ್ರಾಯಪಟ್ಟಿದೆ. ಕೊರೊನಾ ವೈರಸ್ ಹಾವಳಿಯಿಂದಾಗಿ ದೇಶದ ಜನತೆಯ ಮುಂದೆ ಸಂಕಷ್ಟದ ಸರಮಾಲೆಯೇ ಬಂದೆರಗಿದೆ. ಅದರಲ್ಲೂ ಮುಖ್ಯವಾಗಿ ನಿರುದ್ಯೋಗ ಸಮಸ್ಯೆ ಈ ದೇಶವನ್ನು ಬಹಳಷ್ಟು ಕಾಡುತ್ತಿದೆ ಎಂದು ಶಿವಸೇನೆ ರಾಜ್ಯಸಭಾ ಸಂಸದ ಹಾಗೂ ಸಾಮ್ನಾ ಪತ್ರಿಕೆ ಸಂಪಾದಕ ಸಂಜಯ್ ರಾವತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇವಲ ಕೆಳವರ್ಗ ಮಾತ್ರವಲ್ಲದೇ ದೇಶದ ಮಧ್ಯಮ ವರ್ಗವೂ ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದ್ದು, ಈ ಎಲ್ಲ ಸಂಕಷ್ಟಗಳನ್ನು ಬಗೆಹರಿಸದಿದ್ದರೆ ಜನ ಪ್ರಧಾನಿ ಮೋದಿ ಅವರ ರಾಜೀನಾಮೆಗೆ ಒತ್ತಾಯಿಸಲಿದ್ದಾರೆ ಎಂದು ರಾವತ್ ಎಚ್ಚರಿಸಿದ್ದಾರೆ. ಜನತೆ ಪ್ರಧಾನಿ ಮೋದಿ ಅವರ ಮೇಲೆ ಭರವಸೆ ಇಟ್ಟು ಎಲ್ಲಾ ಕಷ್ಟಗಳನ್ನೂ ಸಹಿಸಿಕೊಳ್ಳುತ್ತಿದೆ. ಆದರೆ ಸಹನೆಯ ಕಟ್ಟೆ ಒಡೆದರೆ ಮೋದಿ ಅವರು ಪ್ರಧಾನಿ ಕುರ್ಚಿ ಬಿಡಬೇಕಾಗುತ್ತದೆ ಎಂದು ರಾವತ್ ಗುಡುಗಿದ್ದಾರೆ. ಕೊರೊನಾ ವೈರಸ್ ಹಾವಳಿ ನಿಯಂತ್ರಿಸುವಲ್ಲಿ ವಿಫಲವಾದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ರಾಜೀನಾಮೆಗೆ ಅಲ್ಲಿನ ಜನತೆ ಆಗ್ರಹಿಸುತ್ತಿದ್ದು, ಪ್ರಧಾನಿ ಮೋದಿ ಕೂಡ ಇಂತದ್ದೇ ಸನ್ನಿವೇಶ ಎದುರಿಸಿದರೆ ಅಚ್ಚರಿಪಡಬೇಕಿಲ್ಲ ಎಂದು ರಾವತ್ ಅಭಿಪ್ರಾಯಪಟ್ಟಿದ್ದಾರೆ.


from India & World News in Kannada | VK Polls https://ift.tt/3gp4exk

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...