ನವದೆಹಲಿ: ಇಂದು(ಭಾನುವಾರ) ಭಾರತ-ಚೀನಾ ನಡುವೆ ಐದನೇ ಸುತ್ತಿನ ನಡೆಯಲಿದ್ದು, ಈಶಾನ್ಯ ಲಡಾಖ್ ಗಡಿಯಿಂದ ಸಂಪೂರ್ಣವಗಿ ಸೈನ್ಯವನ್ನು ಹಿಂಪಡೆಯಲು ಭಾರತ ಒತ್ತಡ ಹೇರಲಿದೆ ಎನ್ನಲಾಗಿದೆ. ಈ ಹಿಂದಿನ ನಾಲ್ಕು ಮಿಲಿಟರಿ ಮಾತುಕತೆಗಳಲ್ಲಿ ಹಂತ ಹಂತವಾಗಿ ಸೈನ್ಯ ಹಿಂಪಡೆಯುವಿಕೆ ಪ್ರಕ್ರಿಯೆಗೆ ಒತ್ತು ನೀಡಿತ್ತು. ಆದರೆ ಈ ಬಾರಿ ಸಂಪೂರ್ಣವಾಗಿ ಸೈನ್ಯವನ್ನು ಹಿಂಪಡೆಯಲು ಒತ್ತಡ ಹೇರಲಾಗುವುದು ಎಂದು ಮೂಲಗಳು ತಿಳಿಸಿವೆ. ಪ್ರತಿ ಬಾರಿಯ ಮೀಟಿಂಗ್‌ನಲ್ಲೂ ಸೈನ್ಯ ಹಿಂಪಡೆಯುವುದಾಗಿ ಬೊಗಳೆ ಬಿಡುವ ಚೀನಾ, ಗಡಿಯ ಮುಂಚೂಣಿ ನೆಲೆಗಳಲ್ಲಿ ಇನ್ನೂ ಸೈನ್ಯವನ್ನು ಜಮಾವಣೆಗೊಳಿಸಿದೆ. ಈ ಹಿನ್ನೆಲೆಯಲ್ಲಿ ಈ ಭಾರತೀಯ ಸೇನೆ ಸಂಪೂರ್ಣವಾಗಿ ಸೈನ್ಯ ಹಿಂಪಡೆಯುವಿಕೆ ಪ್ರಕ್ರಿಯೆಯನ್ನು ನಡೆಸಲೇಬೇಕೆಂದು ಪಟ್ಟು ಹಿಡಿಯಲಿದೆ ಎನ್ನಲಾಗಿದೆ. ಇಂದಿನ ಕಮಾಂಡರ್ ಲೇವಲ್ ಮಟ್ಟದ ಮಾತುಕತೆ ಅತ್ಯಂತ ನಿರ್ಣಾಯಕ ಎಂದು ಹೇಳಲಾಗಿದೆ. ಈಶಾನ್ಯ ಲಡಾಖ್ ಗಡಿಯ ಗಲ್ವಾನ್ ವ್ಯಾಲಿ ಸೇರಿದಂತೆ ಇಡೀ ಪ್ರದೇಶದಿಂದ ಸಂಪೂರ್ಣವಾಗಿ ಸೈನ್ಯವನ್ನು ಹಿಂಪಡೆಯುವುದೇ ಶಾಂತಿ ಮರುಸ್ಥಾಪನೆಗೆ ಇರುವ ಏಕೈಕ ಮಾರ್ಗ ಎಂದು ಭಾರತ ಆರಂಭದಿಂದಲೂ ಪ್ರತಿಪಾದಿಸುತ್ತಲೇ ಬಂದಿರುವುದನ್ನು ಇಲ್ಲಿ ಗಮನಿಸಬಹುದು.
from India & World News in Kannada | VK Polls https://ift.tt/2BQnNzv