ಆಯ್ದ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಿದ ಚೀನಾ: ಸ್ಪರ್ಧೆಯ ತವಕವೇ?

ಬೀಜಿಂಗ್: ದೇಶೀಯವಾಗಿ ಸಂಶೋಧಿಸುತ್ತಿರುವ ಕೆಲವು ಕೊರೊನಾ ಲಸಿಕೆಗಳನ್ನು ಘೋಷಣೆಯಡಿ ನಾಗರಿಕರಿಗೆ ನೀಡಲು ಮುಂದಾಗಿದೆ. ಕೆಲವು ಆಯ್ದ ದೇಶೀಯ ಕಂಪನಿಗಳು ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆಗಳ ತುರ್ತು ಬಳಕೆಯನ್ನು ಚೀನಾ ಅಧಿಕೃತಗೊಳಿಸಿದೆ ಎಂದು ಚೀನಾದ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಚೀನಾದ ಲಸಿಕೆ ನಿರ್ವಹಣಾ ಕಾನೂನನ್ನು ಆಧರಿಸಿದ ತುರ್ತು ಬಳಕೆಯ ಘೋಷಣೆಯಡಿ, ಸೀಮಿತ ಅವಧಿಯಲ್ಲಿ ಸೋಂಕಿಗೆ ತುತ್ತಾಗಿರುವ ಜನರು ಬಳಕೆ ಮಾಡಲು ಅನುಮತಿ ನೀಡಲಾಗಿದೆ. ತುರ್ತು ಬಳಕೆಯನ್ನು ಉತ್ತಮವಾಗಿ ನಿಯಂತ್ರಿಸಲಾಗಿದೆಯೆ ಮತ್ತು ಮೇಲ್ವಿಚಾರಣೆ ಮಾಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ಸಮಿತಿ ಕೂಡ ರಚಿಸಲಾಗಿದ್ದು, ಪರಿಹಾರ ಯೋಜನೆಯೂ ಸೇರಿದಂತೆ ಹಲವಾರು ಪ್ಯಾಕೇಜ್‌ಗಳನ್ನೂ ಒಳಗೊಂಡ ತುರ್ತು ಬಳಕೆ ಘೋಷಣೆ ಮಾಡಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಚೀನಾದ ಅಭಿವೃದ್ಧಿ ಕಾರ್ಯಪಡೆ ಮುಖ್ಯಸ್ಥ ಜೆನ್ ಜಾಂಗ್‌ವೀ, ತುರ್ತು ಬಳಕೆ ಆದೇಶದನ್ವಯ ಕೇವಲ ಸೀಮಿತ ಸೋಮಕಿತರಿಗೆ ಮಾತ್ರ ಲಸಿಕೆ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಕಳೆದ ಜುಲೈ 22ರಂದೇ ಚೀನಾ ಕೊರೊನಾ ಲಸಿಕೆಗಳ ಬಳಕೆಯನ್ನು ಅಧಿಕೃತಗೊಳಿಸಿದೆ. ಆದರೆ ಈ ಎಲ್ಲ ಲಸಿಕೆಗಳು ಸಂಶೋಧನಾ ಹಂತದಲ್ಲಿದ್ದು, ಅವುಗಳಲ್ಲಿ ಕೆಲವು ಆಯ್ದ ಲಸಿಕೆಗಳನ್ನು ಮಾತ್ರ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಲಸಿಕೆ ನಿರ್ವಹಣೆಯ ಚೀನಾದ ಕಾನೂನಿನ ಪ್ರಕಾರ, ತೀವ್ರವಾದ ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಸಂಭವಿಸಿದಾಗ, ವೈದ್ಯಕೀಯ ಮತ್ತು ಸಾಂಕ್ರಾಮಿಕ ತಡೆಗಟ್ಟುವ ಸಿಬ್ಬಂದಿ, ಯೋಧರು ಹಾಗೂ ಸ್ಥಿರ ನಗರ ಕಾರ್ಯಾಚರಣೆಗಳಲ್ಲಿ ಕೆಲಸ ಮಾಡುವ ಇತರ ಜನರನ್ನು ರಕ್ಷಿಸಲು ಕ್ಲಿನಿಕಲ್ ಪ್ರಯೋಗಗಳಲ್ಲಿನ ಲಸಿಕೆಗಳನ್ನು ಸೀಮಿತ ವ್ಯಾಪ್ತಿಯಲ್ಲಿ ಬಳಸಬಹುದು.


from India & World News in Kannada | VK Polls https://ift.tt/3ghZ6dq

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...