ಉತ್ತರ ಕೊರಿಯಾ ಸರ್ವಧಿಕಾರಿ ಕಿಮ್ ಜಾಂಗ್‌ ಉನ್‌ ನಿಧನ? ಶೀಘ್ರದಲ್ಲೇ ಘೋಷಣೆ ಸಾಧ್ಯತೆ?

ಪಿಯಾಂಗ್‌ಯಾಂಗ್‌: ಉತ್ತರ ಕೊರಿ­ಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ತೀವ್ರ ಅನಾರೋಗ್ಯಕ್ಕೊಳಗಾಗಿದ್ದು ಕೋಮಾಗೆ ಜಾರಿದ್ದಾರೆಂಬ ವರದಿಗಳ ಮಧ್ಯೆಯೇ ಅವರು ಮೃತಪಟ್ಟಿದ್ದಾರೆಂಬ ಸುದ್ದಿಗಳು ಹರಿದಾಡುತ್ತಿವೆ. ಆದರೆ ಸರ್ವಾ­­ಧಿಕಾರಿ ವ್ಯವಸ್ಥೆ ಇರುವಂತಹ ಆಡಳಿತ ಈ ವಿಚಾರದಲ್ಲಿಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಒಂದೊಮ್ಮೆ ಉನ್‌ ಸತ್ತಿರುವುದು ನಿಜವಾಗಿ­ದ್ದರೂ ಅವರ ಉತ್ತರಾಧಿಕಾರಿ ನೇಮಕವಾದ ಬೆನ್ನಲ್ಲೇ ಸಾವಿನ ಸುದ್ದಿ ಘೋಷಿಸುವ ಸಾಧ್ಯತೆಗಳಿವೆ. 36 ವರ್ಷದ ಕಿಮ್‌ ಜಾಂಗ್‌ ಉನ್‌ ಕಳೆದ ಕೆಲವು ತಿಂಗಳಿಂದ ಸಾರ್ವಜನಿಕ­ವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ. ಅವರಿಗೆ ತೀವ್ರ­ತರದ ಆರೋಗ್ಯ ಸಮಸ್ಯೆಗಳಿದ್ದು ಇತ್ತೀಚೆಗೆ ಕೋಮಾಗೆ ಜಾರಿದ್ದಾರೆಯೇ ಹೊರತು ಸತ್ತಿಲ್ಲ ಎಂದು ದ.ಕೊರಿಯಾದ ಅಧ್ಯಕ್ಷರಿಗೆ ರಾಜಕೀಯ ಕಾರ‍್ಯದರ್ಶಿ­ಯಾಗಿದ್ದ ಚಾಂಗ್‌ ಸಾಂಗ್‌ ಮಿನ್‌ ಹೇಳಿಕೆ ನೀಡಿದ್ದರು. ಇದಾದ ಬಳಿಕ ಪತ್ರಕರ್ತ­ರೊಬ್ಬರು ಕಿಮ್‌ ಸತ್ತಿದ್ದು, ಉದ್ದೇಶಪೂರ್ವಕ­ವಾಗಿಯೇ ಅದು ಅಂತಾರಾಷ್ಟ್ರೀಯ ಸಮುದಾಯದಿಂದ ಮುಚ್ಚಿಡುತ್ತಿದೆ ಎಂದು ಹೇಳಿದ ಬೆನ್ನಲ್ಲೇ ಸಾವಿನ ಸುದ್ದಿ ಹರಿದಾಡುತ್ತಿದೆ. ಸಹೋದರಿಗೆ ಚುಕ್ಕಾಣಿ! ಕಿಮ್‌ ಜಾಂಗ್‌ ಉನ್‌ ಅನಾರೋಗ್ಯಕ್ಕೆ ಒಳಗಾದ ಬಳಿಕ ಅವರ ಸಹೋದರಿ ಕಿಮ್‌ ಯೋ ಜಾಂಗ್‌ ಅವರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ನೀಡು­ತ್ತಿದ್ದು ಅವರೇ ಮುಂದಿನ ಸರ್ವಾಧಿಕಾರಿ ಎಂದು ಘೋಷಣೆಯಾಗುವ ಸಾಧ್ಯತೆ ಇದೆ. 2011ರಿಂದಲೂ ಉ.ಕೊರಿ­ಯಾದ ಸರ್ವಾಧಿಕಾರಿಯಾಗಿರುವ ಉನ್‌ ಅಮೆರಿ­ಕದ ವಿರುದ್ಧ ಅಣ್ವಸ್ತ್ರ ಪ್ರಯೋಗಕ್ಕೂ ಹಿಂದೆ-­ಮುಂದೆ ನೋಡಲ್ಲ ಎಂದು ಗುಟುರು ಹಾಕಿ­ದ್ದರು. ಮಾತೆತ್ತಿದರೆ ನ್ಯೂಕ್ಲಿಯರ್‌ ಬಾಂಬ್‌ ಹಾಕ್ತೇವೆ, ಕ್ಷಿಪಣಿ ದಾಳಿ ನಡೆಸುತ್ತೇವೆ ಎಂದು ಅಬ್ಬರಿಸುತ್ತಿದ್ದ ಕಿಮ್‌ ಅವರ ಹುಚ್ಚುತನದ ನಿರ್ಧಾರ­ಗಳಿಂದ ಕೆಲವು ವರ್ಷಗಳ ಹಿಂದೆ ಮೂರನೇ ಮಹಾಯುದ್ಧ ನಡೆಯಲಿ­ದೆಯೇ ಎಂಬ ಭೀತಿ ಉಂಟಾಗಿತ್ತು. ಆದರೆ ಸಿಂಗಾಪುರ­ದಲ್ಲಿ 2018ರಲ್ಲಿ ನಡೆದ ಐತಿಹಾಸಿಕ ಸಭೆಯಲ್ಲಿಅಮೆರಿಕ ಅಧ್ಯಕ್ಷ ಟ್ರಂಪ್‌ ಹಾಗೂ ಕಿಮ್‌ ಜಾಂಗ್‌ ಉನ್‌ ಪರಸ್ಪರ ಮುಖಾಮುಖಿ­ಯಾಗಿ ಭಿನ್ನಾ­ ಭಿಪ್ರಾಯ ಶಮನಗೊಳಿಸಲು ಒಪ್ಪಂದಕ್ಕೆ ಸಮ್ಮತಿ ಸೂಚಿಸಿದ್ದರು. ಈ ಮೂಲಕ ಯುದ್ಧ ಕಾರ್ಮೋಡದ ಆತಂಕಕ್ಕೆ ತೆರೆ ಎಳೆಯಲಾಗಿತ್ತು.


from India & World News in Kannada | VK Polls https://ift.tt/3j3GHmq

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...