ಪುಣೆ: ಭಾರತದ ಮೊಟ್ಟ ಮೊದಲ ಬಹು-ತರಂಗಾಂತರ ಉಪಗ್ರಹವಾದ ಆಸ್ಟ್ರೋಸಾಟ್, ಭೂಮಿಯಿಂದ 9.3 ಶತಕೋಟಿ ಬೆಳಕಿನ ವರ್ಷಗಳ ದೂರದಲ್ಲಿರುವ ನಕ್ಷತ್ರಪುಂಜದ ನೆರಳಾತೀತ ಬೆಳಕನ್ನು(ಯುವಿ ಲೈಟ್) ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಈ ಕುರಿತು ಮಾಹಿತಿ ನೀಡಿರುವ ಇಂಟರ್-ಯೂನಿವರ್ಸಿಟಿ ಸೆಂಟರ್ನ ಖಗೋಳವಿಜ್ಞಾನ ಮತ್ತು ಖಗೋಳ ಭೌತಶಾಸ್ತ್ರ ವಿಭಾಗ,ಜಾಗಹತಿಕ ಖಗೋಳ ವಿಜ್ಞಾನಿಗಳ ತಂಡ ಅತ್ಯಂತ ಕುತೂಹಲಕಾರಿ ಆವಿಷ್ಕಾರ ಮಾಡಿದೆ ಎಂದು ಸ್ಪಷ್ಟಪಡಿಸಿದೆ. ಆಸ್ಟ್ರೋಸಾಟ್ ಐದು ವಿಶಿಷ್ಟ ಎಕ್ಸರೆ ಮತ್ತು ನೇರಳಾತೀತ ದೂರದರ್ಶಕಗಳನ್ನು ಹೊಂದಿರುವ ಭಾರತದ ಮೊದಲ ಬಹು-ತರಂಗಾಂತರ ಉಪಗ್ರಹ. ಭೂಮಿಯಿಂದ 9.3 ಶತಕೋಟಿ ಬೆಳಕಿನ ವರ್ಷಗಳ ದೂರದಲ್ಲಿರುವ AUDFs01 ಎಂಬ ನಕ್ಷತ್ರಪುಂಜದಿಂದ ತೀವ್ರ-ಯುವಿ ಬೆಳಕನ್ನು ಈ ಉಪಗ್ರಹ ಪತ್ತೆ ಮಾಡಿದೆ. ಐಯುಸಿಎಎ ಖಗೋಳಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡಾ.ಕಣಕ್ ಸಹಾ ನೇತೃತ್ವದ ಅಂತರಾಷ್ಟ್ರೀಯ ಖಗೋಳಶಾಸ್ತ್ರಜ್ಞರ ತಂಡ ಈ ಆವಿಷ್ಕಾರ ಮಾಡಿದ್ದು, ನೇಚರ್ ಆಸ್ಟ್ರಾನಾಮಿ ಈ ಕುರಿತು ಆಗಸ್ಟ್ 24ರಂದು ಲೇಖನ ಪ್ರಕಟಿಸಿದೆ. ಭಾರತ, ಫ್ರಾನ್ಸ್, ಸ್ವಿಟ್ಜರ್ಲೆಂಡ್, ಯುಎಸ್ಎ, ಜಪಾನ್ ಮತ್ತು ನೆದರ್ಲ್ಯಾಂಡ್ಸ್ ಖಗೋಳ ವಿಜ್ಞಾನಿಗಳನ್ನು ಒಳಗೊಂಡಿದ್ದ ಈ ತಂಡ, ಕಳೆದ ನಾಲ್ಕು ವರ್ಷಗಳಿಂದ ಈ ಗ್ಯಾಲಕ್ಸಿಯ ಯುವಿ ಲೈಟ್ ಹೊರಸೂಸುವ ಕುರಿತು ಅಧ್ಯಯನ ಮಾಡುತ್ತಿತ್ತು ಎಂದು ಹೇಳಲಾಗಿದೆ.
from India & World News in Kannada | VK Polls https://ift.tt/3jcbvl4