ಬೀಜಿಂಗ್: ಅಮೆರಿಕ-ಚೀನಾ ನಡುವಿನ ವೈಮನಸ್ಸು ಇಲ್ಲಿಗೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ. ಇನ್ನೇನು ಎರಡೂ ದೇಶಗಳ ಸಂಬಂಧ ಸುಧಾರಣೆಯಾಗಲಿದೆ ಎನ್ನುವಷ್ಟರಲ್ಲಿ ಏನಾದರೊಂದು ಸಮಸ್ಯೆ ಸೃಷ್ಟಿಯಾಗುತ್ತಲೇ ಇದೆ. ಇದಕ್ಕೆ ತಾಜಾ ಉದಾಹರಣೆಯಾಗಿ ಅಮರಿಕದ ಗುಪ್ತಚರ ವಿಮಾನವೊಂದು ನೋ ಫ್ಲೈ ಝೋನ್()ನಲ್ಲಿ ಕಾಣಿಸಿಕೊಂಡಿದೆ ಎಂದು ಗಂಭೀರ ಆರೋಪ ಮಾಡಿದೆ. ಉತ್ತರ ಚೀನಾದ ಪ್ರಾಂತ್ಯದಲ್ಲಿ ಮಿಲಿಟರಿ ಲೈವ್ ಫೈರ್ ಡ್ರಿಲ್ ಮಾಡಲು ಚೀನಿ ಸೇನೆ ಬಳುಸುವ ಪ್ರದೇಶದಲ್ಲಿ ಅಮೆರಿಕದ ಗುಪ್ತಚರ ವಿಮಾನ ಹಾರಾಟ ನಡೆಸಿದೆ ಎನ್ನಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಚೀನಾ ರಕ್ಷಣಾ ಸಚಿವಾಲಯದ ವು ಕಿಯನ್, ಅಮೆರಿಕದ ಗುಪ್ತಚರ ವಿಮಾನ ಹಾರಾಟ ನಿಷೇಧ ಪ್ರದೇಶದಲ್ಲಿ ಕಾಣಿಸಿಕೊಂಡಿರುವು ಪರಸ್ಪರ ನಂಬಿಕೆಗೆ ಪೆಟ್ಟು ನೀಡಲಿದೆ ಎಂದು ಹೇಳಿದ್ದಾರೆ. ಅಮೆರಿಕದ U-2 ವಿಚಕ್ಷಣಾ ಜೆಟ್ ಹಾರಾಟ ನಿಷೇಧ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ಇದನ್ನು ಚೀನಾ ಪ್ರಚೋದನಕಾರಿ ನಡೆ ಎಂದು ಬಣ್ಣಿಸಿದೆ. ಈಗಾಗಲೇ ದಕ್ಷಿಣ ಚೀನಾ ಸಮುದ್ರದಲ್ಲಿ ಅಮೆರಿಕದ ಪರಮಾಣು ಯುದ್ಧ ಹಡಗುಗಳು ಗಸ್ತು ತಿರುಗುತ್ತಿದ್ದು, ಇದರಿಂದ ಚೀನಾ ಕಿರಿಕಿರಿ ಅನುಭವಿಸುತ್ತಿದೆ. ಇದೀಗ ಅಮೆರಿಕದ ಗುಪ್ತಚರ ವಿಮಾನ ಚೀನಾದ ವಾಯು ಪ್ರದೇಶದ ಸಮೀಪ ಕಾಣಿಸಿಕೊಂಡಿರುವುದು ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.
from India & World News in Kannada | VK Polls https://ift.tt/3hwUKAt