ಕಾಂಗ್ರೆಸ್‌ ಸಿಡಬ್ಲ್ಯೂಸಿ ಸಭೆ: 'ಬಿಜೆಪಿ ಜೊತೆ ಶಾಮೀಲು' ನಿಜಕ್ಕೂ ಈ ಪದ ಬಳಸಿದ್ದು ಯಾರು? ಹಿಂದಿದ್ಯಾ ಪಿತೂರಿ?

ಹೊಸ ದಿಲ್ಲಿ: ಸೋಮವಾರ ಕಾಂಗ್ರೆಸ್‌ನ ನಿಜಕ್ಕೂ ದೊಡ್ಡ ಮಟ್ಟದ ಹೈಡ್ರಾಮವನ್ನೇ ಸೃಷ್ಟಿಸಿತ್ತು. ಇಡೀ ದಿನ ದೇಶದಾದ್ಯಂತ ಕಾಂಗ್ರೆಸ್‌ನ ಕಾರ್ಯಕಾರಿಣಿ ಸಭೆ ಬಗ್ಗೆಯೇ ಚರ್ಚಿಸುವಂತೆ ಮಾಡಿತ್ತು. ಆದರೆ ಕೊನೆಗೆ ಈ ಡ್ರಾಮಗೆ ತೆರೆ ಬಿದ್ದು ಯಾರು ಕೂಡ ಬಿಜೆಪಿ ಜೊತೆಗ ಶಾಮೀಲು ವಿಚಾರ ಪ್ರಸ್ತಾಪಿಸಿಲ್ಲ ಎನ್ನುವ ವಿಚಾರವನ್ನ ಹೇಳಿಕೊಂಡು ಗೊಂದಲಕ್ಕೆ ತೆರೆ ಎಳೆದರು. ಹಾಗಾದರೆ ನಿಜಕ್ಕೂ ಈ ಪದ ಬಳಕೆಯಾಗಿದೆಯಾ? ಈ ಪದ ಬಳಸಿಲ್ಲ ಅಂದರೆ ಹಾಗೂ ಕಪಿಲ್‌ ಸಿಬಲ್‌ ಈ ಪದ ಬಳಸಿದ್ದೇಕೆ? ಇಲ್ಲಿದೆ ಈ ಬಗ್ಗೆ ಮಾಹಿತಿ. ಬಿಜೆಪಿ ಲಿಂಕ್‌ಗೆ ಇದೇ ಕಾರಣ! ಕಳೆದ ಹಲವು ದಿನಗಳಿಂದ ರಾಹುಲ್‌ ಗಾಂಧಿ ಹಾಗೂ ಪಕ್ಷದ ಮುಖಂಡರ ನಡುವೆ ಗುಲಾಂ ನಬಿ ಅಜಾದ್‌ ಬಗ್ಗೆ ಚರ್ಚೆ ನಡೆಯುತ್ತಿದೆಯಂತೆ. ಆರ್ಟಿಕಲ್‌ 70 ರದ್ದಾದ ಬಳಿಕ ಜಮ್ಮು-ಕಾಶ್ಮೀರದ ಪ್ರಬಲ ನಾಯಕರೆಲ್ಲ ಸೆರೆಯಲ್ಲಿ ಇಡಲಾಗಿದೆ. ಆದರೆ ಕಣಿವೆ ರಾಜ್ಯದ ಪ್ರಬಲ ನಾಯಕ ಹಾಗೂ ಮಾಜಿ ಮುಖ್ಯಂಮತ್ರಿ ಗುಲಾಂ ನಬಿ ಅಜಾದ್‌ ಅವರನ್ನ ಆ ರೀತಿ ಮಾಡಲಾಗಿಲ್ಲ ಎನ್ನುವ ಚರ್ಚೆ ನಡೆದಿದ್ದಂತೆ. ಇದೇ ಸಮಯಕ್ಕೆ ಅಜಾದ್‌ ನೇತೃತ್ವದ ಪತ್ರ ಕೂಡ ತೆರೆಗೆ ಬಂದಿದ್ದು ಎಲ್ಲವೂ ಒಟ್ಟಿಗೆ ಸೇರಿ ತಳುಕು ಹಾಕಿದಾಗ ಬಿಜೆಪಿ (ಜೆಪಿಯ ಶಾಮೀಲು) ಎಂಬ ಪದ ಪ್ರಯೋಗವಾಗಿದೆ ಎನ್ನುತ್ತಾರೆ ಸಭೆಯಲ್ಲಿ ಭಾಗಿಯಾದವರು. ಆದರೆ ಎಲ್ಲೂ ಕೂಡ ಶಾಮೀಲು ಎನ್ನುವ ಪದ ನೆರವಾಗಿ ಬಳಕೆಯಾಗಿಲ್ಲ ಎನ್ನುತ್ತಾರೆ. ರಾಹುಲ್‌ಗೆ ಅಧ್ಯಕ್ಷ ಪಟ್ಟ ಬೇಡ? ಇನ್ನು ಮೂಲಗಳ ಪ್ರಕಾರ ಪತ್ರ ಬರೆದಿರುವ ಪೈಕಿ ಎಲ್ಲರೂ ಹಿರಿಯರೆ ಆಗಿರುವುದರಿಂದ ಯಾರಿಗೂ ಕೂಡ ರಾಹುಲ್‌ ಗಾಂಧಿಯನ್ನ ಅಧ್ಯಕ್ಷರಾಗಿ ನೋಡುವ ಆಸೆ ಇಲ್ಲವಂತೆ. ಒಂದಾ ಸೋನಿಯಾ ಗಾಂಧಿ ಅವರೇ ಸಕ್ರಿಯರಾಗಿ ಅಧ್ಯಕ್ಷರಾಗಬೇಕು ಇಲ್ಲದಿದ್ದರೆ ನಮ್ಮಲ್ಲಿ ಯಾರಾದರು ಅಧ್ಯಕ್ಷರಾಗಬೇಕು ಎನ್ನುವ ಯೋಚನೆ ಪತ್ರ ಬರೆದವರಿಗೆ ಇದೆ. ಹೀಗಾಗಿಯೇ ಸಣ್ಣದೊಂದು ಆರೋಪ ಇಡೀ ಬೆಂಕಿ ಹಚ್ಚುವಂತೆ ಮಾಡಿದೆ ಎನ್ನಲಾಗಿದೆ. ಇಲಿ ಹೋದ ಕಡೆ ಹುಲಿ ಹೋಯಿತು ಎನ್ನುವಂತೆ ಬಿಂಬಿಸಲಾಗಿದೆ ಎನ್ನವ ಸಂಗತಿಗಳು ಈ ಕೇಳಿ ಬರುತ್ತಿದೆ. ನಿನ್ನೆ ಒಂದು ವೇಳೆ ಸಭೆ ಸರಿಯಾಗಿ ನಡೆದಿದ್ದರೆ ರಾಹುಲ್‌ ಗಾಂಧಿ ಮತ್ತೆ ಅಧ್ಯಕ್ಷರಾಗುತ್ತಿದ್ದರು ಆದರೆ ಇದೀಗ ಮತ್ತೆ ಆರು ತಿಂಗಳು ಮುಂದೂಡಿಕೆಯಾಗಿದೆ. ಹೀಗಾಗಿ ಇದು ಕೂಡ ಷಡ್ಯಂತ್ರದ ಭಾಗ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಕಾಂಗ್ರೆಸ್‌ ಆ ರೀತಿಯ ಯಾವುದೇ ಸಮಸ್ಯೆ ತಮ್ಮ ಮಧ್ಯೆ ಇಲ್ಲ ಎನ್ನುತ್ತಿದೆ.


from India & World News in Kannada | VK Polls https://ift.tt/3gtkwV5

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...