ಭಾರತೀಯ ಮೂಲದ 'ಪ್ರಿನ್ಸ್‌ ಮಹಲು' ಭಾರಿ ಮೊತ್ತಕ್ಕೆ ಮಾರಾಟ, ಎಷ್ಟು ರೇಟ್‌ ಗೊತ್ತಾ?

ಲಂಡನ್‌: ಮಹಾರಾಜ ದುಲೀಪ್‌ ಸಿಂಗ್‌ ಅವರ ಪುತ್ರ ಹಾಗೂ ಸಿಖ್‌ ವಂಶದ ಕೊನೆಯ ರಾಜ ಪ್ರಿನ್ಸ್‌ ವಿಕ್ಟರ್‌ ಅಲ್ಬರ್ಟ್‌ ಜೇ ದುಲೀಪ್‌ ಸಿಂಗ್‌ ಅವರಿಗೆ ಮದುವೆಯ ಉಡುಗೊರೆಯಾಗಿ ಸಂದಿದ್ದ ಲಂಡನ್‌ನ ಹೃದಯಭಾಗ ದಿ ಲಿಟಲ್ ಬೋಲ್ಟನ್ಸ್‌ನಲ್ಲಿರುವ 5613 ಚದರ ಅಡಿಯ ಈಗ ನವೀಕರಣಗೊಂಡಿದ್ದು ಸುಮಾರು 150 ಕೋಟಿ ರೂ.ಗೆ ಮಾರಾಟಗೊಂಡಿದೆ. ಮಹಲಷ್ಟೇ ಅಲ್ಲದೇ ಎಸ್ಟೇಟ್‌ನ ಸಾವಿರಾರು ಎಕರೆ ಜಾಗವೂ ಖರೀದಿ ವಹಿವಾಟಿನ ಭಾಗವಾಗಿದೆ. ಆದರೆ ಖರೀದಿದಾರರ ವಿವರಗಳನ್ನು ಬೇಕ್‌ಚಾಂಪ್‌ ಎಸ್ಟೇಟ್‌ನ ಮೂಲಗಳು ತಿಳಿಸಿಲ್ಲ. ಮಹಾರಾಜ ರಂಜೀತ್‌ ಸಿಂಗ್‌ ಅವರ ಕಿರಿಯ ಪುತ್ರ ದುಲೀಪ್‌ ಸಿಂಗ್‌ 19ನೇ ಶತಮಾನದಲ್ಲಿ ಲಾಹೋರ್‌ ಸೇರಿದಂತೆ ಸಿಖ್‌ ಸಾಮ್ರಾಜ್ಯದ ಕೊನೆಯ ಮಹರಾಜರಾಗಿದ್ದರು. ಅವರ ಸಾಮ್ರಾಜ್ಯ ಬ್ರಿಟಿಷ್‌ ಆಡಳಿತಕ್ಕೆ ಒಳಪಟ್ಟಾಗ ಅವರನ್ನು ಇಂಗ್ಲೆಂಡ್‌ಗೆ ಗಡಿಪಾರು ಮಾಡಲಾಗಿತ್ತು. ಅವರ ಪುತ್ರ ಪ್ರಿನ್ಸ್‌ ವಿಕ್ಟರ್‌ ಲಂಡನ್‌ನಲ್ಲಿ 1866ರಲ್ಲಿ ಜನಿಸಿದಾಗ ವಿಕ್ಟೋರಿಯಾ ರಾಣಿ ಧರ್ಮಮಾತೆಯಾಗಿದ್ದರು. ಹಲವು ವರ್ಷಗಳ ನಂತರ ಪ್ರಿನ್ಸ್‌ ವಿಕ್ಟರ್‌ ಅಲ್ಬರ್ಟ್‌ ಜೇ ದುಲೀಪ್‌ ಸಿಂಗ್‌ ಅವರು 9ನೇ ಕೊವೆಂಟ್ರಿ ದೊರೆ ಅಲ್‌ರ ಅವರ ಪುತ್ರಿ ಅನ್ನಾ ಕೊವೆಂಟ್ರಿ ಜತೆ ವಿವಾಹವಾದರು. ಕೊವೆಂಟ್ರಿ ದೊರೆ ಅಲ್‌ರ್ ಪುತ್ರಿಯ ಮದುವೆಗೆ ಲಿಟಲ್‌ ಬೋಲ್ಟನ್ಸ್‌ ಪ್ರದೇಶದಲ್ಲಿರುವ ಐಷಾರಾಮಿ ಮಹಲನ್ನು ಕಾಣಿಕೆಯಾಗಿ ನೀಡಿದ್ದರು.


from India & World News in Kannada | VK Polls https://ift.tt/3hrssqY

ಟ್ರಾಫಿಕ್‌ ಫೈನ್‌ ಶೇ 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂಬರ್‌ 9ಕ್ಕೆ ಕೊನೆ! ಮರೆಯದಿರಿ, ಮರೆತು ನಿರಾಶರಾಗದಿರಿ

Traffic Fine Discount Last Day: ಸಂಚಾರಿ ನಿಯಮ ಉಲ್ಲಂಘನೆ ಮಾಡಿ ದಂಡ ಬಾಕಿ ಉಳಿಸಿಕೊಂಡಿದ್ದೀರಾ? ಹಾಗಾದರೆ ಇದೇ ಕಡೆಯ ಅವಕಾಶ. ಶೇ. 50 ರಷ್ಟು ಡಿಸ್ಕೌಂಟ್‌ ಸೆಪ್ಟೆಂ...